ಅಲಿಘಡ(ಉತ್ತರ ಪ್ರದೇಶ) : ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾನೆ. ಕಳೆದ ಆರು ತಿಂಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ತೆಗೆದುಕೊಳ್ಳುತ್ತಿದ್ದ ಸಂಜಯ್ ಎಂಬ ವ್ಯಕ್ತಿಗೆ ಲಾಕ್‌ಡೌನ್ ವೇಳೆ ಸೂಕ್ತ ಔಷಧಿ ದೊರೆಯಲಿಲ್ಲ. ಹೀಗಾಗಿ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದ.
ತಂದೆ ಸಾವನ್ನಪ್ಪುತ್ತಿದ್ದಂತೆ ಹೆಣ್ಣು ಮಕ್ಕಳೇ ತಂದೆಯ ಅಂತ್ಯಕ್ರಿಯೆ ಮತ್ತು ಅಂತಿಮ ವಿಧಿ ವಿಧಾನ ಮಾಡಿದ್ದಾರೆ. ಸಂಜಯ್ ವೃತ್ತಿಯಲ್ಲಿ ಟೀ ಮಾರಾಟ ಮಾಡಿ ಮನೆ ನಡೆಸುತ್ತಿದ್ದ ಎಂಬ ಮಾಹಿತಿ ದೊರೆತಿದೆ.