ಅಹಮದಾಬಾದ್: ಇಲ್ಲಿನ ಸಾಬರಮತಿ ಟೋಲ್ಬಳಿ ಹೋಟೆಲ್ವೊಂದರಲ್ಲಿ ವಾಗ್ವಾದದ ಬಳಿಕ ದಲಿತ ಯುವಕನೊಬ್ಬನನ್ನು ಬೆತ್ತಲುಗೊಳಿಸಿ ಗುಂಪೊಂದು ಹಲ್ಲೆ ಮಾಡಲಾಗಿದೆ.
ಹಲ್ಲೆಗೂ ಮುನ್ನ ಇಬ್ಬರು ದಲಿತ ಯುವಕರು ಹಾಗೂ ಹೋಟೆಲ್ ಮಾಲೀಕನ ನಡುವೆ ವಾಗ್ವಾದವಾಗಿದ್ದು, ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
-
TW: Abusive words and violence
— Jignesh Mevani (@jigneshmevani80) November 4, 2019 " class="align-text-top noRightClick twitterSection" data="
I will declare a Gujarat Bandh if the police does not arrest the perpetrators in 24 hours who attempted lynching of two Dalit youth in Ahmedabad yesterday night. Don't think Dalits are cowards: we believe in Constitution! pic.twitter.com/1Ge5Nw76Se
">TW: Abusive words and violence
— Jignesh Mevani (@jigneshmevani80) November 4, 2019
I will declare a Gujarat Bandh if the police does not arrest the perpetrators in 24 hours who attempted lynching of two Dalit youth in Ahmedabad yesterday night. Don't think Dalits are cowards: we believe in Constitution! pic.twitter.com/1Ge5Nw76SeTW: Abusive words and violence
— Jignesh Mevani (@jigneshmevani80) November 4, 2019
I will declare a Gujarat Bandh if the police does not arrest the perpetrators in 24 hours who attempted lynching of two Dalit youth in Ahmedabad yesterday night. Don't think Dalits are cowards: we believe in Constitution! pic.twitter.com/1Ge5Nw76Se
ಪೊಲೀಸರ ಪ್ರಕಾರ ಭಾನುವಾರ ಸಂಜೆ 7.30ರ ಸುಮಾರಿಗೆ ಪ್ರಜ್ಞೇಶ್ ಪಾರ್ಮರ್ ಹಾಗೂ ಜಯೇಶ್ ಎಂಬ ಇಬ್ಬರು ದಲಿತ ಯುವಕರು ಹೋಟೆಲ್ನೊಳಗೆ ಹೋಗಿದ್ದಾರೆ. ಹೋಟೆಲ್ ಮಾಲೀಕರಿಗೂ ಯುವಕರಿಗೂ ವಾಗ್ವಾದ ನಡೆಯುತ್ತದೆ.
ಬಳಿಕ ಗುಂಪೊಂದು ಪ್ರಜ್ಞೇಶ್ ಬಟ್ಟೆ ಕಳಚಿ ದೊಣ್ಣೆ, ಮತ್ತಿತರ ಅಸ್ತ್ರಗಳಿಂದ ದಾಳಿ ಮಾಡುತ್ತಾರೆ. ಸದ್ಯ ಪ್ರಜ್ಞೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ಸಂಬಂಧ ಕೊಲೆ ಯತ್ನ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಜಿಗ್ನೇಶ್ ಕೆಂಡಾಮಂಡಲ: ಪ್ರಕರಣವನ್ನು ಖಂಡಿಸಿರುವ ಶಾಸಕ ಜಿಗ್ನೇಶ್ ಮೆವಾನಿ, ಹಲ್ಲೆ ನಡೆಸಿದವರನ್ನು 24 ಗಂಟೆಯೊಳಗೆ ಬಂಧಿಸದಿದ್ದರೆ ಅಹಮದಾಬಾದ್ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.