ಸಾಂಗ್ಲಿ (ಮಹಾರಾಷ್ಟ್ರ): ರೈತರು ನೀಡುವ ಹಾಲಿನ ಬೆಲೆ ಏರಿಕೆ ಮಾಡಬೇಕೆಂದು ಆಗ್ರಹಿಸಿ, ಟ್ಯಾಂಕರ್ನಿಂದ ನೂರಾರು ಲೀಟರ್ ಹಾಲನ್ನು ರಸ್ತೆಗೆ ಸುರಿಯುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಸ್ವಾಭಿಮಾನಿ ಶೆಟ್ಕರಿ ಸಂಘಟನೆ ಹಾಲಿನ ಬೆಲೆ ಏರಿಕೆಗಾಗಿ ರಾಜ್ಯಾದ್ಯಂತ ಈ ಹಾಲು ಆಂದೋಲನಕ್ಕೆ ಕರೆ ನೀಡಿದ್ದು, ಸಾಂಗ್ಲಿಯಲ್ಲಿ ಹಾಲು ಸುರಿಯುವ ಮೂಲಕ ಆಂದೋಲನಕ್ಕೆ ಬೆಂಬಲ ನೀಡಲಾಯಿತು.
ಹಸು ಮತ್ತು ಎಮ್ಮೆ ಹಾಲಿಗೆ ಲೀಟರ್‌ಗೆ 10 ರೂ. ಹೆಚ್ಚಿಸಬೇಕು. ಹಾಲಿನ ಪುಡಿ ಆಮದು ನಿರ್ಧಾರವನ್ನು ಬದಲಾಯಿಸಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಿದೆ. ಅಷ್ಟೇ ಅಲ್ಲ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಈ ಸಂಘಟನೆ ಆಂದೋಲನ ನಡೆಸುತ್ತಿದೆ