ಬೀರಾ: ಆಫ್ರಿಕಾದ ಮೊಜಾಂಬಿಕ್ ದೇಶ ಇಡಾಯ್ ಚಂಡಮಾರುತಕ್ಕೆ ಅಕ್ಷರಶಃ ತತ್ತರಿಸಿದ್ದು ಈವರೆಗೆ ಸುಮಾರು 732 ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಚಂಡಮಾರುತದ ಅಬ್ಬರ ಕೊಂಚ ಕಡಿಮೆಯಾಗಿದ್ದು ಹಾನಿಯ ಪ್ರಮಾಣ ಸುಧಾರಿಸಿಲ್ಲ. ಪ್ರಸ್ತುತ ಇಡಾಯ್ ಪಕ್ಕ ಜಿಂಬಾಬ್ವೆ ದೇಶದತ್ತ ಮುಖ ಮಾಡಿತ್ತ ಅಲ್ಲಿ 259 ಮಂದಿಯನ್ನು ಬಲಿ ಪಡೆದಿದೆ. ಚಂಡಮಾರುತದ ಪರಿಣಾಮ ಹೆಚ್ಚಿನ ಮಳೆಯೂ ಆಗುತ್ತಿದೆ.
ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಚಂಡಮಾರುತದ ಅಬ್ಬರಕ್ಕೆ 20 ಲಕ್ಷ ಮಂದಿ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಭಾರತದ ವಾಯುಸೇನೆ ರಕ್ಷಣಾ ಕಾರ್ಯದಲ್ಲಿ ಸಹಾಯ ನೀಡುತ್ತಿದೆ. ನೂರಾರು ಮಂದಿಯನ್ನು ಭಾರತದ ವಾಯುಸೇನೆ ಸ್ಥಳಾಂತರ ಮಾಡಿದೆ.
Indian Navy engaged in relief operations in Mozambique post cyclone Idai. pic.twitter.com/A1gJGYalTL
— ANI (@ANI) March 24, 2019 " class="align-text-top noRightClick twitterSection" data="
">Indian Navy engaged in relief operations in Mozambique post cyclone Idai. pic.twitter.com/A1gJGYalTL
— ANI (@ANI) March 24, 2019Indian Navy engaged in relief operations in Mozambique post cyclone Idai. pic.twitter.com/A1gJGYalTL
— ANI (@ANI) March 24, 2019
ಚಂಡಮಾರುತದ ಅಬ್ಬರ ಎಷ್ಟಿದೆ ಎಂದರೆ ಬುಜಿ ಎನ್ನುವ ಸಣ್ಣ ನಗರ ಸಂಪೂರ್ಣ ನೀರಿನಿಂದ ಆವೃತವಾಗಿದ್ದು ಅಕ್ಷರಶಃ ನಗರ ಮಾಯವಾಗಿದೆ. ಇಲ್ಲಿನ ಸಾವಿನ ಸಂಖ್ಯೆ ಲೆಕ್ಕಕ್ಕೇ ಸಿಗುತ್ತಿಲ್ಲ ಎಂದು ರಕ್ಷಣಾ ಕಾರ್ಯದ ಸಿಬ್ಬಂದಿ ಹೇಳಿದ್ದಾರೆ.