ETV Bharat / bharat

ಒಎಲ್​ಎಕ್ಸ್​ನಲ್ಲಿ ವಂಚನೆ ಪ್ರಕರಣ: ಐವರು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು ​

author img

By

Published : Sep 30, 2020, 12:18 PM IST

ಒಎಲ್​ಎಕ್ಸ್​ ಮೂಲಕ ಗ್ರಾಹಕರಿಗೆ ವಂಚನೆ ಮಾಡುತ್ತಿದ್ದ ಗ್ಯಾಂಗ್​​ನ್ನು ಸೈಬರಾಬಾದ್ ಕಮಿಷನರೇಟ್ ಪೊಲೀಸರು ಬಂಧಿಸಿದ್ದಾರೆ. ಖದೀಮರಿಂದ 1 ಲಕ್ಷ ರೂ. ನಗದು, 21 ಸಿಮ್ ಕಾರ್ಡ್‌ಗಳು ಮತ್ತು 12 ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಒಎಲ್​ಎಕ್ಸ್​ನಲ್ಲಿ ವಂಚನೆ ಪ್ರಕರಣ
ಒಎಲ್​ಎಕ್ಸ್​ನಲ್ಲಿ ವಂಚನೆ ಪ್ರಕರಣ

ಹೈದರಾಬಾದ್: ರಾಜಸ್ಥಾನ ಭರತ್‌ಪುರ ಮೂಲದ ಐವರು ಒಎಲ್​ಎಕ್ಸ್​ ವಂಚಕರ ಗ್ಯಾಂಗ್​​ನ್ನು ಸೈಬರಾಬಾದ್ ಕಮಿಷನರೇಟ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳಿಂದ 1 ಲಕ್ಷ ರೂ. ನಗದು, 21 ಸಿಮ್ ಕಾರ್ಡ್‌ಗಳು ಮತ್ತು 12 ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್, "ತೆಲಂಗಾಣದಲ್ಲಿ ಈ ಗ್ಯಾಂಗ್​ ಮೇಲೆ ಸುಮಾರು 40 ಪ್ರಕರಣಗಳು ದಾಖಲಾಗಿವೆ. ಒಎಲ್ಎಕ್ಸ್ ವಂಚನೆ ಕುರಿತು ಹಲವು ದೂರುಗಳ ಬಂದ ನಂತರ, ವಿಶೇಷ ಸೈಬರ್ ಅಪರಾಧ ತಂಡವನ್ನು ರಚಿಸಲಾಯಿತು. ಸುಮಾರು 30 ದಿನಗಳ ಕಾರ್ಯಾಚರಣೆ ನಡೆಸಿದ ಬಳಿಕ ಖದೀಮರ ಗ್ಯಾಂಗ್​ನ್ನು ಬಂಧಿಸಲಾಗಿದೆ" ಎಂದು ತಿಳಿಸಿದರು.

ಮರ್ಫೀದ್​, ಸೈಕುಲ್ ಖಾನ್, ಶಾರುಖ್ ಮತ್ತು ರಾಖಮ್ ಖಾನ್ ಎಂಬ ಮೂವರು ಕಿಡಿಗೇಡಿಗಳ ಸಹಾಯದಿಂದ ರುಖ್ಮಿನ್ ಎಂಬಾತ ನಕಲಿ ಇ-ವ್ಯಾಲೆಟ್ ಖಾತೆಗಳು, ಬ್ಯಾಂಕ್ ಖಾತೆಗಳನ್ನು ತೆರೆದು, ಪಾವತಿ ವಿನಂತಿಯ ಕ್ಯೂಆರ್ ಸಂಕೇತಗಳನ್ನು ಗ್ರಾಹಕರಿಗೆ ಕಳುಹಿಸುತ್ತಾನೆ. ಕೆಲ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳಿ, ಒಎಲ್​ಎಕ್ಸ್​ ಮೂಲಕ ವಾಹನಗಳನ್ನು, ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡಲು ಸಿದ್ಧರಿದ್ದೇವೆ ಎಂದು ಜನರನ್ನು ನಂಬಿಸುತ್ತಾರೆ. ಬಳಿಕ ಗ್ರಾಹಕರನ್ನು ಸಂಪರ್ಕಿಸಿ ಹಣವನ್ನು ಪಾವತಿ ಮಾಡಲು ಸೂಚಿಸುತ್ತಾರೆ. ಈ ವೇಳೆ ಹಣವನ್ನು ದೋಚಿ ಗ್ರಾಹಕರಿಗೆ ಮೋಸ ಮಾಡುತ್ತಾರೆ.

"ಒಎಲ್‌ಎಕ್ಸ್‌ನಲ್ಲಿ ಯಾವುದೇ ವಹಿವಾಟು ನಡೆಸುವಾಗ ಜಾಗರೂಕರಾಗಿರಿ. ಆನ್‌ಲೈನ್ ಅಪ್ಲಿಕೇಶನ್‌ಗಳಲ್ಲಿ ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಸಂಪೂರ್ಣ ವಿಶ್ವಾಸ ಗಳಿಸಿದ ನಂತರವೇ ಒಪ್ಪಂದಕ್ಕೆ ಬನ್ನಿ" ಎಂದು ಪೊಲೀಸ್​ ಆಯುಕ್ತ ಸಜ್ಜನರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.