ETV Bharat / health

ಖಾಲಿ ಹೊಟ್ಟೆಯಲ್ಲಿ ವರ್ಕೌಟ್​ ಮಾಡುವುದರಿಂದ ಲಾಭನಾ - ನಷ್ಟನಾ?: ಇಲ್ಲಿದೆ ನಿಮ್ಮಲ್ಲ ಗೊಂದಲಕ್ಕೆ ಉತ್ತರ - WORKOUT FOR FAT LOSS - WORKOUT FOR FAT LOSS

ಅನೇಕ ಜನರು ಖಾಲಿ ಹೊಟ್ಟೆಯಲ್ಲಿ ವರ್ಕ್​ಔಟ್​ ಮಾಡುವುದರಿಂದ ಕೊಬ್ಬು ಕರಗುತ್ತದೆ ಎಂದರೆ ಮತ್ತೆ ಕೆಲವರು ಇದರಿಂದ ದೇಹಕ್ಕೆ ಹಾನಿಯಾಗುತ್ತದೆ ಎಂದು ನಂಬುತ್ತಾರೆ.

EMPTY STOMACH WORKOUT is safe For health
ಖಾಲಿ ಹೊಟ್ಟೆಯಲ್ಲಿ ವರ್ಕೌಟ್​ ಮಾಡುವುದರಿಂದ ಲಾಭನಾ - ನಷ್ಟನಾ?: ಇಲ್ಲಿದೆ ನಿಮ್ಮಲ್ಲ ಗೊಂದಲಕ್ಕೆ ಉತ್ತರ (Getty Images)
author img

By ETV Bharat Karnataka Team

Published : Aug 2, 2024, 2:09 PM IST

ನವದೆಹಲಿ: ತೂಕ ಇಳಿಕೆ ಮಾಡುವ ಜೊತೆಗೆ ಫಿಟ್ನೆಸ್​​ ನಿರ್ವಹಣೆ ಮಾಡಲು ದಿನನಿತ್ಯ ವರ್ಕ್​ಔಟ್​ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಈ ವರ್ಕೌಟ್​ಗೆ ಮುಂದಾಗುವ ಜನರಲ್ಲಿ ಒಂದು ಗೊಂದಲ ಸದಾ ಕಾಡುತ್ತದೆ. ಅದೆಂದರೆ, ವರ್ಕ್​ಔಟ್​​ಗೆ ಮುನ್ನ ಆಹಾರ ಸೇವಿಸಬೇಕಾ ಅಥವಾ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮಕ್ಕೆ ಮುಂದಾಗಬೇಕಾ ಎಂಬುದು. ಅನೇಕ ಜನರು ಖಾಲಿ ಹೊಟ್ಟೆಯಲ್ಲಿ ವರ್ಕ್​ಔಟ್​ ಮಾಡುವುದರಿಂದ ಕೊಬ್ಬು ಕರಗುತ್ತದೆ ಎಂದರೆ ಮತ್ತೆ ಕೆಲವರು ಇದರಿಂದ ದೇಹಕ್ಕೆ ಹಾನಿಯಾಗುತ್ತದೆ ಎನ್ನುತ್ತಾರೆ.

ಖಾಲಿ ಹೊಟ್ಟೆಯಲ್ಲಿ ವರ್ಕ್ಔಟ್​ ಮಾಡುವುದರಿಂದ ಇದು ಕ್ಯಾಲೋರಿ ಕರಗಿಸಲು ಸಾಧ್ಯವಾಗತ್ತಾ ಅಥವಾ ಇದರಿಂದ ಹಾನಿಯಾಗುತ್ತದೆಯೇ ಎಂಬ ಗೊಂದಲದಲ್ಲಿ ನೀವು ಇದ್ದು, ಏನು ಮಾಡಬೇಕು ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ಸಲಹೆ.

ಖಾಲಿ ಹೊಟ್ಟೆಯಲ್ಲಿನ ವ್ಯಾಯಾಮದ ಪ್ರಯೋಜನ: ಖಾಲಿ ಹೊಟ್ಟೆಯಲ್ಲಿ ವರ್ಕ್ಔಟ್​ ಮೊರೆ ಹೋದರೆ, ಇದು ದೇಹದ ಕೊಬ್ಬು ಕರಗಿಸುತ್ತದೆ. ಅಲ್ಲದೇ, ಏನೂ ತಿನ್ನದೇ ವ್ಯಾಯಾಮ ಮಾಡುವುದರಿಂದ ಮೊದಲ ಶಕ್ತಿ ಮೂಲವಾಗಿರುವ ಗ್ಲೇಕೊಜೆನ್​ ದಣಿಯುತ್ತದೆ. ಇದರಿಂದಾಗಿ ಶಕ್ತಿಗಾಗಿ ದೇಹದ ಕೊಬ್ಬನ್ನು ಬಳಕೆ ಮಾಡುತ್ತದೆ.

ಖಾಲಿ ಹೊಟ್ಟೆಯಲ್ಲಿ ಇನ್ಸುಲಿನ್​ ಮಟ್ಟವೂ ಕಡಿಮೆಯಾಗುತ್ತದೆ. ಇದು ದೇಹದ ಕೊಬ್ಬು ಕರಗಿಸಲು ಸಾಧ್ಯವಾಗುತ್ತದೆ. ಇದರ ಹೊರತಾಗಿ, ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ಹಾರ್ಮೋನ್​ ಬೆಳವಣಿಗೆ ಉತ್ತೇಜಿಸುತ್ತದೆ. ಇದು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರ ಅನಾನೂಕುಲತೆ: ಖಾಲಿ ಹೊಟ್ಟೆಯಲ್ಲಿ ವರ್ಕೌಟ್​ ಮಾಡುವುದರಿಂದ ದೇಹದ ಶಕ್ತಿ ನಷ್ಟ ಹೆಚ್ಚುತ್ತದೆ. ಇದರಿಂದ ವ್ಯಾಯಾಮದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ದೇಹಕ್ಕೆ ವ್ಯಾಯಾಮ ಮಾಡಲು ಅಗತ್ಯವಾದ ಸಾಕಷ್ಟು ಶಕ್ತಿ ಲಭಿಸುವುದಿಲ್ಲ. ಇದರಿಂದ ವರ್ಕೌಟ್​ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವರ್ಕೌಟ್​ ಮಾಡಿದರೆ, ಅಂತಹ ಸ್ಥಿತಿಯಿಂದ ಯಾವುದೇ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ.

ಇದರ ಹೊರತಾಗಿ, ಖಾಲಿ ಹೊಟ್ಟೆಯಲ್ಲಿ ವರ್ಕೌಟ್​ ಮಾಡುವುದು ಗ್ಲೇಕೊಜೆನ್​ ಕೊರತೆಗೆ ಕಾರಣವಾಗುತ್ತದೆ. ಆಗ ದೇಹ ಸ್ನಾಯುಗಳಲ್ಲಿನ ಶಕ್ತಿಯನ್ನು ಪಡೆಯಲಾರಂಭಿಸುತ್ತದೆ. ಇದು ಸ್ನಾಯು ಬೆಳವಣಿಗೆಗೆ ತೊಡಕಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ವರ್ಕೌಟ್ ಕೆಲವು ಜನರಲ್ಲಿ​ ಆರೋಗ್ಯ ಸಮಸ್ಯೆಗೆ ಕೂಡ ಕಾರಣವಾಗುತ್ತದೆ. ಊಟ ಮಾಡದೇ ಕೆಲಸ ಮಾಡುವುದು ಆಲಸ್ಯ, ದುರ್ಬಲತೆ ಅಥವಾ ತಲೆ ಸುತ್ತುವಿಕೆಗೆ ಕಾರಣವಾಗುತ್ತದೆ. ಅದರಲ್ಲೂ ದೀರ್ಘಕಾಲ ಖಾಲಿ ಹೊಟ್ಟೆ ಈ ಪರಿಣಾಮವನ್ನು ಹೆಚ್ಚಿಸುತ್ತದೆ.

ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಮತ್ತು ಸಲಹೆಗಳು ಕೇವಲ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಈ ಸಂಬಂಧಿತ ಪರಿಣತರ ಬಳಿ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಊಟವಾದ ಮೇಲೆ ಜಸ್ಟ್​​ ಹತ್ತೇ 10 ನಿಮಿಷ ನಡೆಯಿರಿ ಸಾಕು; ಆರೋಗ್ಯದಲ್ಲಾಗುವ ಬದಲಾವಣೆ ನೋಡಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.