ETV Bharat / bharat

ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ : ಗಡಿ ವಿವಾದ, ಕೊರೊನಾ ಕುರಿತು ಚರ್ಚೆ

ಚೀನಾ- ಭಾರತ- ನೇಪಾಳ ಗಡಿ ವಿವಾದ ಮತ್ತು ಕೊರೊನಾ ಸ್ಥಿತಿಗತಿಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯನ್ನ ಇಂದು ಕರೆಯಲಾಗಿದೆ.

CWC to meet today to discuss stand-offs with China, Nepal
ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
author img

By

Published : Jun 23, 2020, 12:11 PM IST

ನವದೆಹಲಿ : ಚೀನಾ ಮತ್ತು ನೇಪಾಳದೊಂದಿಗೆ ಗಡಿ ವಿವಾದದ ಕುರಿತು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಇಂದು ಸಭೆ ಸೇರಲಿದೆ.

ಸಭೆಯಲ್ಲಿ ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾ ಪಡೆಗಳಿಂದ ಕೊಲ್ಲಲ್ಪಟ್ಟ 20 ಭಾರತೀಯ ಸೇನಾ ಸಿಬ್ಬಂದಿ ವಿಷಯ, ನೇಪಾಳ ಭಾರತದ ಭೂ ಭಾಗವನ್ನು ಸೇರಿಸಿ ಹೊಸ ಮ್ಯಾಪ್​ ಅಂಗೀಕರಿಸಿದ ವಿಚಾರ ಮತ್ತು ಕೊರೊನಾ ಸ್ಥಿತಿಗತಿಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ.

ಕಳೆದ ವಾರ ಪ್ರಧಾನಿ ಕರೆದಿದ್ದ ಸರ್ವಪಕ್ಷ ಸಭೆಯ ಬಳಿಕ ಈ ಸಭೆ ನಡೆಯುತ್ತಿರುವುದರಿಂದ ಮಹತ್ವವೆನಿಸಿದೆ. ಗಡಿಯಲ್ಲಿ ಭಾರತೀಯ ಯೋಧರ ಮೇಲಿನ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ, "ಕೆಳಗಿಳಿಯಬೇಡಿ, ಈ ಸಂದರ್ಭಕ್ಕೆ ಏರುವ ಶಕ್ತಿಯನ್ನು ಹೊಂದಿರಿ. ನಾವು ಸರ್ಕಾರಕ್ಕೆ ಎಲ್ಲ ಬೆಂಬಲವನ್ನು ನೀಡುತ್ತೇವೆ" ಎಂದು ಹೇಳಿದ್ದಾರೆ.

ನೇಪಾಳವು ಭಾರತ ಭೂ ಭಾಗಗಳನ್ನು ಸೇರಿಸಿ ತಯಾರಿಸಿರುವ ನೂತನ ನಕ್ಷೆಯ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಜೂನ್ 13 ರಂದು ಸರ್ವಾನುಮತದಿಂದ ಅಂಗೀಕರಿಸಿದೆ. ನವೀಕೃತ ರಾಜಕೀಯ - ಆಡಳಿತಾತ್ಮಕ ನಕ್ಷೆಯಲ್ಲಿ ಭಾರತದ ಪ್ರದೇಶಗಳಾದ ಕಾಲಾಪಾನಿ, ಲಿಪುಲೆಖ್ ಮತ್ತು ಲಿಂಪಿಯಾಧುರಾ ಸೇರಿವೆ. ಜೂನ್​ 15 ರಂದು ರಾತ್ರಿ ಗಾಲ್ವಾನ್ ವ್ಯಾಲಿಯಲ್ಲಿ ಚೀನಾ - ಭಾರತ ನಡುವೆ ಗಡಿ ಘರ್ಷಣೆ ನಡೆದು 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ ಮತ್ತು 10 ಜನರನ್ನು ಚೀನಾ ಬಂಧಿಸಿ ಬಿಡುಗಡೆ ಮಾಡಿದೆ.

ಹೀಗಾಗಿ ಈ ಸಭೆ ಬಾರಿ ಮಹತ್ವ ಪಡೆದಿದ್ದು, ಕಾಂಗ್ರೆಸ್​ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದು ಗೊತ್ತಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.