ಮುಂಬೈ: ರಕ್ಕಸ ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ದಿನದಿಂದ ದಿನಕ್ಕೆ ಹೊಸ ಹೊಸ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಮಧ್ಯೆ ಕೂಡ ಮಹಾರಾಷ್ಟ್ರದಲ್ಲಿ ಡೆಡ್ಲಿ ವೈರಸ್ ಆರ್ಭಟ ಕಡಿಮೆಯಾಗುತ್ತಿಲ್ಲ.
ನೆರೆಯ ರಾಜ್ಯದಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಏರುತ್ತಲೇ ಇದೆ. ಇಡೀ ದೇಶ ಲಾಕ್‌ಡೌನ್ ಆಗಿದ್ದರೂ ಇಂದು ಮಹಾರಾಷ್ಟ್ರದಲ್ಲಿ 11 ಹೊಸ ಪ್ರಕರಣಗಳು ದಾಖಲಾಗಿವೆ. ವಾಣಿಜ್ಯ ನಗರಿ ಮುಂಬೈನಲ್ಲಿ ಐವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದ್ರೆ, ಥಾಣೆಯಲ್ಲಿ ಒಬ್ಬರಿಗೆ ಸೋಂಕು ಕನ್ಫರ್ಮ್ ಆಗಿದೆ. ಒಟ್ಟಾರೆ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 122ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದಕ್ಕೂ ಮುಂಚಿತವಾಗಿ ಬೆಳಗ್ಗೆ ಸಾಂಗ್ಲಿಯಲ್ಲೇ ಐವರಿಗೆ ಕೊರೊನಾ ಇರುವುದು ಕನ್ಫರ್ಮ್ ಆಗಿತ್ತು.
-
#UPDATE 6 new #Coronavirus positive cases have been reported in the state today - 5 in Mumbai and 1 in Thane. Total number of positive cases in the state rise to 122: Maharashtra Health Department https://t.co/LdSw84d85S
— ANI (@ANI) March 25, 2020 " class="align-text-top noRightClick twitterSection" data="
">#UPDATE 6 new #Coronavirus positive cases have been reported in the state today - 5 in Mumbai and 1 in Thane. Total number of positive cases in the state rise to 122: Maharashtra Health Department https://t.co/LdSw84d85S
— ANI (@ANI) March 25, 2020#UPDATE 6 new #Coronavirus positive cases have been reported in the state today - 5 in Mumbai and 1 in Thane. Total number of positive cases in the state rise to 122: Maharashtra Health Department https://t.co/LdSw84d85S
— ANI (@ANI) March 25, 2020
ವೈರಸ್ ಹರಡುವುದನ್ನ ತಡೆಗಟ್ಟಲು ಮಹಾ ಸರ್ಕಾರ ಕರ್ಫ್ಯೂ ಜಾರಿ ಮಾಡಿದೆ. ಮುಂಬೈನಲ್ಲಿ ಮುದ್ರಣ ಮಾಧ್ಯಮವನ್ನು ಸ್ಥಗಿತಗೊಳಿಸಲಾಗಿದ್ದು, ದಿನಪತ್ರಿಗಳ ಹಂಚಿಕೆಗೂ ತಡೆ ನೀಡಲಾಗಿದೆ. ಈ ಸಂಬಂಧ ಕೈಗಾರಿಕೆ ಸಚಿವ ಸುಭಾಷ್ ದೇಸಾಯಿ, ಸುದ್ದಿ ಸಂಸ್ಥೆಗಳ ಮುಖ್ಯಸ್ಥರು, ವಿತರಕರೊಂದಿಗೆ ಸಭೆ ನಡೆಸಿದ್ದಾರೆ. ಏಪ್ರಿಲ್ 1ರಿಂದ ಸುದ್ದಿಪತ್ರಿಗಳ ಮುದ್ರಣ ಹಾಗೂ ವಿತರಣೆಗೆ ಅವಕಾಶ ನೀಡಲು ನಿರ್ಧರಿಸಿರುವ ಮಾಹಿತಿ ಲಭ್ಯವಾಗಿದೆ.
ಇನ್ನು ತಮಿಳುನಾಡಿನಲ್ಲಿ ಐದು ಹೊಸ ಕೇಸ್ಗಳು ಕಂಡು ಬಂದಿದ್ದು, ನಾಲ್ವರು ಇಂಡೋನೇಷ್ಯಾದಿಂದ ಬಂದವರಾಗಿದ್ದಾರೆ. ಓರ್ವ ಇವರಿಗೆ ಟ್ರಾವೆಲ್ ಮಾಹಿತಿ ನೀಡಿದ ವ್ಯಕ್ತಿ ಎಂದು ವರದಿಯಾಗಿದೆ.