ನವದೆಹಲಿ: ಕಳೆದ 16 ದಿನಗಳಿಂದ ಏರುತ್ತಿರುವ ಪೆಟ್ರೋಲ್, ಡೀಸೆಲ್ ದರವು ಕೂಡ ಕೋವಿಡ್ನಂತೆ ಸಾಮಾನ್ಯ ಜನರನ್ನು ಬಾಧಿಸುತ್ತಿದೆ. ಕಚ್ಚಾ ತೈಲ ದರ ಕಡಿಮೆಯಿದ್ದರೂ, ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ಕೂಡ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ ₹ 33 ಪೈಸೆ ಮತ್ತು ಡೀಸೆಲ್ ದರವನ್ನು ₹ 58 ಪೈಸೆ ಹೆಚ್ಚಿಸಿದ್ದು, ಈ ಮೂಲಕ ಸೋಮವಾರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.
ಈವರೆಗೂ ಪೆಟ್ರೋಲ್ ಮತ್ತು ಡಿಸೇಲ್ ದರ ಕ್ರಮವಾಗಿ ₹ 8.3 (₹ 79.56) & ₹ 9.46 (₹ 78.55) ಏರಿದೆ. ಈ ಮೂಲಕ 2002ರ ಏಪ್ರಿಲ್ ನಂತರ ಇದೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ತೈಲ ದರ ಏರಿದೆ. ಹಾಗೆಯೇ ಬೆಂಗಳೂರಿನಲ್ಲಿ ಕ್ರಮವಾಗಿ ₹ 82.15 (+ 34 ಪೈಸೆ), ₹ 74.98 (+ 55 ಪೈಸೆ) ಏರಿಕೆಯಾಗಿದೆ.
ದೈನಂದಿನ ಬೆಲೆ ಪರಿಷ್ಕರಣೆ ಕಾರ್ಯ ವಿಧಾನದಡಿ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಬೆಲೆ ಏರಿಸುತ್ತವೆ ಅಥವಾ ಕಡಿಮೆ ಮಾಡುತ್ತವೆ. ಜಾಗತಿಕ ಕಚ್ಚಾ ತೈಲದ ಬೆಲೆ ಯುಎಸ್ಡಿ 40ಕ್ಕೆ (₹ 76.02) ಇಳಿದಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಭಾರತದಲ್ಲಿ ಗರಿಷ್ಠ ಮಟ್ಟವನ್ನು ಮುಟ್ಟಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಲಾಕ್‌ಡೌನ್ ಅವಧಿಯಲ್ಲಿ ಉಂಟಾದ ನಷ್ಟವನ್ನು ಬೆಲೆ ಏರಿಸುವ ಮೂಲಕ ಭರಿಸುತ್ತಿವೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಜಾಗತಿಕವಾಗಿ ಬೆಲೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಯಾವುದೇ ರೀತಿ ಪ್ರಯೋಜನವಾಗಿಲ್ಲ. ಏಕೆಂದರೆ, ನಮ್ಮ ದೇಶವೇ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ಪಾವತಿಸುತ್ತಿದೆ.
ರಂಗರಾಜನ್ ಸಮಿತಿ ಅಂದಾಜಿನ ಪ್ರಕಾರ ಪೆಟ್ರೋಲ್ ಮೇಲಿನ ಒಟ್ಟು ತೆರಿಗೆ ಪ್ರಮಾಣವು ಶೇ.56ಕ್ಕೆ ಮತ್ತು ಡೀಸೆಲ್ ಮೇಲೆ ಅದು 36 ಪ್ರತಿಶತದಷ್ಟಿದೆ. ಹೀಗಾಗಿ, ಕಚ್ಚಾ ತೈಲ ದರ ಇಳಿಕೆಯಾಗಿದ್ದರೂ, ಭಾರತದಲ್ಲಿ ಮಾತ್ರ ಅದರ ದರ ಏರುತ್ತಲೇ ಇದೆ. ಇದು ಗ್ರಾಹಕರ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಇದಲ್ಲದೆ, ಕೇಂದ್ರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೇರಲಾಗುತ್ತದೆ. ಕರ್ನಾಟಕ, ತಮಿಳುನಾಡು, ದೆಹಲಿ ಮತ್ತು ಜಾರ್ಖಂಡ್ ರಾಜ್ಯ ವ್ಯಾಟ್ ಹಾದಿ ಹಿಡಿದಿರುವ ಕಾರಣ ಬೆಲೆಗಳು ಗಗನಕ್ಕೇರಿವೆ. ಈ ಮೂಲಕ ಕೊರೊನಾದಂತೆ ತೈಲ ಬೆಲೆಯೂ ಹಾನಿಕಾರಕ ಎಂದು ಸಾಬೀತಾಗಿದೆ. ಈ ವರ್ಷದ ಆರಂಭದಲ್ಲಿ 70 ಡಾಲರ್ ಇದ್ದ ಕಚ್ಚಾ ತೈಲ ದರ ಬೆಲೆ ಮೂರು ತಿಂಗಳಲ್ಲಿ ಅದು ಅರ್ಧದಷ್ಟು ಕುಸಿಯಿತು.
ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ರಷ್ಯಾ ನಿರಾಕರಿಸಿದ ನಂತರ ಮಾರ್ಚ್ನಲ್ಲಿ ರಷ್ಯಾ-ಸೌದಿ ನಡುವೆ ತೈಲ ಸಮರ ನಡೆಯಿತು. ಹೀಗಾಗಿ, ಕಚ್ಚಾ ತೈಲವು ಬ್ಯಾರೆಲ್‌ಗೆ 15.98 ಡಾಲರ್‌ಗಳನ್ನು ಮುಟ್ಟಿತು. ಇದು ದಶಕದಲ್ಲೇ ಅತ್ಯಂತ ಕಡಿಮೆ. ಜಾಗತಿಕ ಕಚ್ಚಾ ದರಗಳು ಕುಸಿದ ಸಂದರ್ಭದಲ್ಲಿ ಬೆಲೆ ಪರಿಷ್ಕರಣೆಯನ್ನು ನಿರ್ಲಕ್ಷಿಸಿದ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು, ಜೂನ್ 7ರಿಂದ ದೇಶೀಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿವೆ. ಸದ್ಯ ವಾಹನ ಸವಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.