ETV Bharat / bharat

ಯುವತಿ ಮೇಲೆ ಅತ್ಯಾಚಾರ ಆರೋಪ: ಸಿಆರ್‌ಪಿಎಫ್ ಜವಾನ ಅರೆಸ್ಟ್ - ಸಿಆರ್‌ಪಿಎಫ್ ಜವಾನ್ ಅರೆಸ್ಟ್

ಯುವತಿಯೊಬ್ಬಳು ದನ ಮೇಯಿಸಲು ಹೋಗಿದ್ದಾಗ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜವಾನ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Rape
Rape
author img

By

Published : Jul 31, 2020, 1:24 PM IST

ರಾಯಪುರ( ಛತ್ತೀಸ್​​​ಗಢ) : ಸುಕ್ಮಾ ಜಿಲ್ಲೆಯ 21 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧನನ್ನು ಬಂಧಿಸಲಾಗಿದೆ.

ದುಲಿಚಂದ್ ಬಂಧಿತ ಆರೋಪಿ. ದೋರ್ನಾಪಾಲ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಕುರಿತು ಸಂತ್ರಸ್ತೆ ಮತ್ತು ಆಕೆಯ ಪೋಷಕರು ಲಿಖಿತ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಗುರುವಾರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಸುಂದರರಾಜ್ ಪಿ ತಿಳಿಸಿದ್ದಾರೆ.

ಜುಲೈ 27 ರಂದು ದೋರ್ನಾಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾಂಪ್ ಬಳಿ ಸಂತ್ರಸ್ತೆ ದನ ಮೇಯಿಸಲು ಹೋಗಿದ್ದಾಗ ಜವಾನ್ ಶಿಬಿರದಿಂದ ಹೊರಬಂದು ಕಿರುಕುಳ ನೀಡಿ, ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇನ್ನು ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ಸುಕ್ಮಾದಲ್ಲಿ ಕೇಂದ್ರ ರಿಸರ್ವ್ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.