ETV Bharat / bharat

ಅಮಿತ್ ಬಂಡಾರಿ ಹಲ್ಲೆ ಕೇಸ್​: ದಾಳಿಕೋರನ​ ಮೇಲೆ ಆಜೀವ ನಿಷೇಧ ಹೇರಿದ ಡಿಡಿಸಿಎ

ಅಂಡರ್​​ - 23 ಕ್ರಿಕೆಟ್​ ತಂಡಕ್ಕೆ ತನ್ನನ್ನ ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಕ್ರಿಕೆಟರ್​ ಅನುಜ್ ಧೇಡಾ ಹಾಗೂ ಆತನ ಸಹಚರರು ಕಳೆದ ಸೋಮವಾರ ಅಮಿತ್​ ಬಂಡಾರಿ ಮೇಲೆ ಹಲ್ಲೆ ಮಾಡಿದ್ದು ಅನುಜ್​​ ಧೇಡಾ ಮೇಲೆ ಆಜೀವ ನಿಷೇಧ ಶಿಕ್ಷೆ ಹೇರಲಾಗಿದೆ.

newdelhi
author img

By

Published : Feb 14, 2019, 1:18 PM IST

ನವದೆಹಲಿ: ಕಳೆದೆರಡು ದಿನಗಳ ಹಿಂದೆ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಅಮಿತ್ ಬಂಡಾರಿ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಡರ್​-23 ಕ್ರಿಕೆಟರ್ ಒಬ್ಬನ​​ ಮೇಲೆ ಆಜೀವ ನಿಷೇಧ ಶಿಕ್ಷೆ ಹೇರಿ ಆದೇಶ ಹೊರಡಿಸಲಾಗಿದೆ.

ಅಂಡರ್​​ - 23 ಕ್ರಿಕೆಟ್​ ತಂಡಕ್ಕೆ ತನ್ನನ್ನ ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಕ್ರಿಕೆಟರ್​ ಅನುಜ್ ಧೇಡಾ ಹಾಗೂ ಆತನ ಸಹಚರರು ಕಳೆದ ಸೋಮವಾರ ಅಮಿತ್​ ಬಂಡಾರಿ ಮೇಲೆ ಹಲ್ಲೆ ಮಾಡಿದ್ದರು. ಘಟನೆ ನಡೆದ ಬಳಿಕ ಪೊಲೀಸರು ಇವರನ್ನ ಬಂಧನ ಸಹ ಮಾಡಿದ್ದರು. ಇದೀಗ ಡಿಡಿಸಿಎ(ದೆಹಲಿ ಕ್ರಿಕೆಟ್​ ಅಸೋಷಿಯೇಷನ್​) ಚೇರ್ಮನ್​ ರಜತ್​ ಶರ್ಮಾ ಮಾತನಾಡಿದ್ದು, ಹಲ್ಲೆ ಮಾಡಿರುವ ಅನುಜ್​​ ಧೇಡಾ ಮೇಲೆ ಆಜೀವ ನಿಷೇಧ ಶಿಕ್ಷೆ ಹೇರಲಾಗಿದೆ ಎಂದು ತಿಳಿಸಿದ್ದಾರೆ.

ಇದರ ಜತೆಗೆ ಉಳಿದ ಕಾನೂನು ನಿಯಮಗಳನುಸಾರವಾಗಿ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದು ತಿಳಿಸಿರುವ ರಜತ್​, ಭವಿಷ್ಯದಲ್ಲಿ ಯಾವುದೇ ಕ್ರಿಕೆಟ್​​ನಲ್ಲೂ ಅವರು ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಖಂಡಿಸಿ ಟ್ವೀಟ್​ ಮಾಡಿದ್ದ ಮಾಜಿ ಕ್ರಿಕೆಟ್​ ಆಟಗಾರ ವೀರೇಂದ್ರ ಸೆಹ್ವಾಗ್​ ಮತ್ತು ಗೌತಮ್​ ಗಂಭೀರ್​, ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು.

Intro:Body:

pr test

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.