ಹೈದರಾಬಾದ್: ಕೊರೊನಾ ಸೋಂಕಿಗೆ ಔಷಧ ಕಂಡುಹಿಡಿಯಲು ವಿಶ್ವದಲ್ಲಿ ನಾನಾ ಸಂಶೋಧನೆಗಳು ನಡೆಯುತ್ತಿವೆ. ಇದೀಗ ಅಮೆರಿಕದ ಬಯೋಟೆಕ್ ಕಂಪನಿಯೊಂದು, ಮಾರಕ ಸೋಂಕಿಗೆ ಗೋಮಾತೆಯಲ್ಲಿ ಔಷಧವಿದೆ ಎಂದು ಹೇಳುತ್ತಿದೆ.
ಗೋವುಗಳಲ್ಲಿರುವ ಆ್ಯಂಟಿಬಾಡಿ ಅಥವಾ ಪ್ರತಿರಕ್ಷಣಾ ಕೋಶಗಳನ್ನು ಬಳಸಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಬಹುದು. ಗೋವುಗಳ ಪ್ರತಿರಕ್ಷಣಾ ಕೋಶಗಳನ್ನು ಮನುಷ್ಯರಿಗೆ ಇಂಜೆಕ್ಟ್ ಮಾಡಿದರೆ ಅವು ಕೊರೊನಾ ವೈರಸ್ಅನ್ನು ಕೊಂದು ಹಾಕುತ್ತವೆ ಎಂದು ಸ್ಯಾಬ್ ಬಯೋಥೆರಪಿಟಿಕ್ಸ್ ಸಂಸ್ಥೆ ಹೇಳಿದೆ.
ಇತರೆ ಪ್ರಾಣಿಗಳಿಗೆ ಹೋಲಿಸಿದರೆ ಗೋವುಗಳಲ್ಲಿ ರಕ್ತದ ಪ್ರಮಾಣ ಹೆಚ್ಚಿರುತ್ತಿದೆ. ಹಾಗಾಗಿ ಅವುಗಳಿಂದ ಹೆಚ್ಚು ಪ್ರತಿಕಾಯ ಕೋಶಗಳನ್ನು ಪಡೆಯಬಹುದಾಗಿದೆ ಎಂದೂ ಸಂಸ್ಥೆಯು ಹೇಳಿದೆ.
ಗೋವುಗಳಲ್ಲಿ ಈ ಪ್ರತಿಕಾಯ ಕೋಶಗಳು ಅವುಗಳ ವಂಶವಾಹಿನಿಯಿಂದಲೇ ಬಂದಿದೆ ಹಾಗಾಗಿ ಅದು ಕೊರೊನಾ ಸೋಂಕು ಕೊಲ್ಲುವ ಉತ್ತಮ ಔಷಧವಾಗಿದೆ ಎಂದು ವರದಿಯು ಹೇಳಿದೆ.
ಸದ್ಯ ಇದರ ವೈದ್ಯಕೀಯ ಪ್ರಯೋಗಗಳು ನಡೆಯುತ್ತಿದ್ದು. ಇದು ಯಶಸ್ವಿಯಾಗುವುದು ಬಹುತೇಕ ಖಚಿತ ಎಂದು ಸಂಸ್ಥೆಯು ಹೇಳಿದೆ.