ETV Bharat / bharat

ಕಸದ ವಾಹನದಲ್ಲಿ ಕೊರೊನಾ ಸೋಂಕಿತರ ಸಾಗಣೆ​: ತನಿಖೆಗೆ ಆದೇಶ - garbage truck

ಕಸದ ಟ್ರಕ್​ನಲ್ಲಿ ಮೂವರು ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಜಿಲ್ಲಾ ವೈದ್ಯಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.

COVID patients shifted to hospital in garbage truck
ಕಸದ ವಾಹನದಲ್ಲಿ ಕೊರೊನಾ ಸೋಂಕಿತರ
author img

By

Published : Aug 3, 2020, 1:39 PM IST

ವಿಜಯನಗರಂ( ಆಂಧ್ರಪ್ರದೇಶ): ಕಸದ ಟ್ರಕ್​ನಲ್ಲಿ ಮೂವರು ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಜಯನಗರಂ ಜಿಲ್ಲೆಯ ನೆಲ್ಲಿಮಾರ್ಲಾ ಮಂಡಲದ ಜರಾಜಪುಪೇಟ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಈ ಸಂಬಂಧ ಜಿಲ್ಲಾ ವೈದ್ಯಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.

ಕಸದ ವಾಹನದಲ್ಲಿ ಆಸ್ಪತ್ರೆಗೆ ಕೊರೊನಾ ಸೋಂಕಿತರ ಶಿಫ್ಟ್

ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ವೈದ್ಯಾಧಿಕಾರಿ ಡಾ.ರಮಣ ಕುಮಾರಿ, ಪ್ರಾಥಮಿಕ ಮಾಹಿತಿಯ ಪ್ರಕಾರ ಎರಡು ದಿನಗಳ ಹಿಂದೆ ಘಟನೆ ನಡೆದಿದೆ. ರೋಗಿಗಳನ್ನು ಕೊಂಡಾ ವೆಲುಗಡ ಪಿಹೆಚ್​​ಸಿ ಕೇಂದ್ರದಿಂದ ನೆಲ್ಲಿಮಾರ್ಲಾ ನಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಬೇಕಿತ್ತು. ಆದರೆ ಸೋಂಕಿತರ ಜೊತೆಯಲ್ಲಿದ್ದವರು ತಾವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿದರು. ವೈದ್ಯಕೀಯ ಸಿಬ್ಬಂದಿ ಅವರಿಗೆ ಪಿಪಿಇ ಕಿಟ್‌ಗಳನ್ನು ಸಹ ನೀಡಿದ್ದರು. ಬಳಿಕ ಕಸದ ಟ್ರಕ್‌ನಲ್ಲಿ ಅವರನ್ನು ಕರೆದೊಯ್ದಿರುವುದು ತಿಳಿದಿರಲಿಲ್ಲ ಎಂದು ರಮಣ ಕುಮಾರಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.