ETV Bharat / bharat

ಉದ್ಯೋಗಿಯಲ್ಲಿ ಪತ್ತೆಯಾದ ಸೋಂಕು, ಬಿಎಸ್​ಎಫ್​ ಮುಖ್ಯ ಕಚೇರಿಯ ಎರಡು ಅಂತಸ್ತುಗಳಿಗೆ ಸೀಲ್ - ಸಿಆರ್​ಪಿಎಫ್​

ಬಿಎಸ್​ಎಫ್​ ಯೋಧರಲ್ಲಿ ಸೋಂಕು ಕಾಣಿಸಿಕೊಂಡಿದ್ದ ಬೆನ್ನಲ್ಲೇ, ದೆಹಲಿಯ ಬಿಎಸ್​ಎಫ್​ ಮುಖ್ಯ ಕಚೇರಿಯ ಉದ್ಯೋಗಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕಚೇರಿಯನ್ನು ಸೀಲ್​ ಮಾಡಲಾಗಿದೆ.

bsf
ಬಿಎಸ್​ಎಫ್​
author img

By

Published : May 4, 2020, 7:46 PM IST

ನವದೆಹಲಿ: ಓರ್ವ ಉದ್ಯೋಗಿಯಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ಗಡಿ ಭದ್ರತಾ ಪಡೆಯ ಮುಖ್ಯ ಕಚೇರಿಯ ಎರಡು ಅಂತಸ್ತುಗಳನ್ನು ಆರೋಗ್ಯಾಧಿಕಾರಿಗಳು ಸೀಲ್​ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

ಇಲ್ಲಿನ ಲೋದಿ ರಸ್ತೆಯ ಸಿಜಿಓ ಕಾಂಪ್ಲೆಕ್ಸ್​ನಲ್ಲಿರುವ 8 ಮಹಡಿಯ ಬಿಎಸ್​ಎಫ್​ ಮುಖ್ಯ ಕಚೇರಿಯಿದೆ. ಇದೇ ಕಟ್ಟಡದಲ್ಲಿ ಸಿಆರ್​ಪಿಎಫ್​ ಮುಖ್ಯಕಚೇರಿಯೂ ಕೂಡಾ ಇದ್ದು ಅಲ್ಲಿನ ಇಬ್ಬರು ಉದ್ಯೋಗಿಗಳಲ್ಲಿ ಕೊರೊನಾ ಕಾಣಿಸಿಕೊಂಡ ನಂತರ ಸಿಆರ್​ಪಿಎಫ್​ ಕಚೇರಿಯನ್ನೂ ಕೂಡಾ ಬಂದ್ ಮಾಡಲಾಗಿತ್ತು.

ಸದ್ಯಕ್ಕೆ ಕಟ್ಟಡಕ್ಕೆ ಸ್ಯಾನಿಟೈಸಿಂಗ್​ ಮಾಡಲಾಗಿದ್ದು, ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದವರನ್ನು ಶೋಧಿಸುವ ಕೆಲಸ ನಡೆಯುತ್ತಿದೆ. ಕೆಲ ದಿನಗಳ ನಂತರ ಮಿತ ನೌಕರರ ಸಹಾಯದಿಂದ ಕಚೇರಿ ನಡೆಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.