ETV Bharat / bharat

ದೇಶಾದ್ಯಂತ ಮುಂದುವರಿದ ಕೊರೊನಾ ಆರ್ಭಟ: ಯಾವ ರಾಜ್ಯದಲ್ಲಿ ಎಷ್ಟು ಮಂದಿ ಸೋಂಕಿತರು?

author img

By

Published : Jun 29, 2020, 11:47 PM IST

Updated : Jun 30, 2020, 12:08 AM IST

ಭಾರತೀಯ ವೈದ್ಯಕೀಯ ಸಂಘದ ಪ್ರಕಾರ, ದೇಶಾದ್ಯಂತ 20 ಐಎಂಎ ವೈದ್ಯರು ಸಾವನ್ನಪ್ಪಿದ್ದಾರೆ ಮತ್ತು ಒಟ್ಟು 950 ವೈದ್ಯರು ಸೋಂಕಿಗೆ ಒಳಗಾಗಿದ್ದಾರೆ. ನಾಗ್ಪುರದಲ್ಲಿ ನಿರ್ಣಾಯಕ ಕೋವಿಡ್​-19 ರೋಗಿಗಳಿಗೆ ಚಿಕಿತ್ಸೆ ನೀಡುವ ವಿಶ್ವದ ಅತಿದೊಡ್ಡ ಸ್ವಾಭಾವಿಕ ಪ್ಲಾಸ್ಮಾ ಥೆರಪಿ ಪ್ರಯೋಗ ಯೋಜನೆಯಾದ ಪ್ಲ್ಯಾಟಿನಾ ಯೋಜನೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಉದ್ಘಾಟಿಸಿದರು.

ರಾಷ್ಟ್ರಾದ್ಯಂತ ಕೊರೊನಾ ಕುಣಿತ
ರಾಷ್ಟ್ರಾದ್ಯಂತ ಕೊರೊನಾ ಕುಣಿತ

ಹೈದರಾಬಾದ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್​- 19ಗೆ 380 ಜನ ಮೃತಪಟ್ಟು, 19,459 ಹೊಸ ಪ್ರಕರಣಗಳು ದಾಖಲಾಗಿವೆ.

ರಾಷ್ಟ್ರಾದ್ಯಂತ ಕೊರೊನಾ ಕುಣಿತ
ರಾಷ್ಟ್ರಾದ್ಯಂತ ವರದಿಯಾದ ಕೊರೊನಾ ಪ್ರಕರಣಗಳ ಅಂಕಿಅಂಶ

ಭಾರತದಲ್ಲಿ ಸಕಾರಾತ್ಮಕ ಪ್ರಕರಣಗಳು 5,48,318 ಆಗಿದ್ದು, 2,101,201 ಸಕ್ರಿಯ ಪ್ರಕರಣಗಳಿವೆ. 3,21,722 ಗುಣಮುಖ / ಬಿಡುಗಡೆ / ವಲಸೆ ಮತ್ತು 16,475 ಜನ ಸೋಂಕಿಗೆ ಮೃತಪಟ್ಟಿದ್ದಾರೆ.

ದೆಹಲಿಯಲ್ಲಿ ‘ಪ್ಲಾಸ್ಮಾ ಬ್ಯಾಂಕ್’ ಸ್ಥಾಪನೆ:

ಪ್ಲಾಸ್ಮಾ ಬ್ಯಾಂಕ್ ಮುಂದಿನ ಎರಡು ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ. ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗಾಗಿ ರಾಷ್ಟ್ರ ರಾಜಧಾನಿಯಲ್ಲಿ ‘ಪ್ಲಾಸ್ಮಾ ಬ್ಯಾಂಕ್’ ಸ್ಥಾಪಿಸುವ ಯೋಜನೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಪ್ರಕಟಿಸಿದ್ದಾರೆ.

ದೆಹಲಿ ಸರ್ಕಾರದಿಂದ ನಿರ್ವಹಿಸಲ್ಪಡುವ ಇನ್​ಸ್ಟಿಟ್ಯೂಟ್ ಆಫ್ ಲಿವರ್ ಆ್ಯಂಡ್​ ಬಿಲಿಯರಿ ಸೈನ್ಸಸ್‌ನಲ್ಲಿ ಬ್ಯಾಂಕ್ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೋವಿಡ್ -19 ಚಿಕಿತ್ಸೆಗಾಗಿ ಪ್ಲಾಸ್ಮಾ ಅಗತ್ಯವಿದ್ದರೆ, ವೈದ್ಯರು ಮತ್ತು ಆಸ್ಪತ್ರೆಗಳು ಪ್ಲಾಸ್ಮಾ ಬ್ಯಾಂಕ್ ಅನ್ನು ಸಂಪರ್ಕಿಸಬೇಕಾಗುತ್ತದೆ. ಕೋವಿಡ್​ನಿಂದ ಚೇತರಿಸಿಕೊಂಡ ರೋಗಿಗಳು ತಮ್ಮ ಪ್ಲಾಸ್ಮಾವನ್ನು ದಾನ ಮಾಡುವಂತೆ ಮುಖ್ಯಮಂತ್ರಿ ಮನವಿ ಮಾಡಿದ ಅವರು, ಪ್ಲಾಸ್ಮಾ ದಾನಕ್ಕೆ ನೆರವಾಗಲು ರಾಜ್ಯ ಸರ್ಕಾರ ಸಹಾಯವಾಣಿ ಸಂಖ್ಯೆ ಆರಂಭಿಸಲಿದೆ ಎಂದರು.
ಮಹಾರಾಷ್ಟ್ರದಲ್ಲಿ ಅನಿವಾರ್ಯ ಚಟುವಟಿಕೆಗಳಿಗೆ ನಿರ್ಬಂಧ:

ಮಹಾರಾಷ್ಟ್ರದಲ್ಲಿ ಕೋವಿಡ್​ ಪ್ರಕರಣ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಿರುವ ಮಧ್ಯೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಕೆ ವಹಿಸಿದ ನಂತರ ಮಹಾರಾಷ್ಟ್ರ ಸರ್ಕಾರ ಸೋಮವಾರ ಜುಲೈ 31ರವರೆಗೆ ಲಾಕ್​ಡೌನ್ ವಿಸ್ತರಿಸಿದೆ. ಕೋವಿಡ್​-19 ಹಾಟ್‌ಸ್ಪಾಟ್‌ಗಳಲ್ಲಿ ಅನಿವಾರ್ಯ ಚಟುವಟಿಕೆಗಳು ಮತ್ತು ಜನರ ಚಲನೆಗೆ ಮತ್ತೆ ನಿರ್ಬಂಧ ಹೇರಲಾಗುವುದು ಎಂದು ಸರ್ಕಾರ ಹೇಳಿದೆ.

ಭಾರತೀಯ ವೈದ್ಯಕೀಯ ಸಂಘದ ಪ್ರಕಾರ, ದೇಶಾದ್ಯಂತ 20 ಐಎಂಎ ವೈದ್ಯರು ಸಾವನ್ನಪ್ಪಿದ್ದಾರೆ ಮತ್ತು ಒಟ್ಟು 950 ವೈದ್ಯರು ಸೋಂಕಿಗೆ ಒಳಗಾಗಿದ್ದಾರೆ. ನಾಗ್ಪುರದಲ್ಲಿ ನಿರ್ಣಾಯಕ ಕೋವಿಡ್​-19 ರೋಗಿಗಳಿಗೆ ಚಿಕಿತ್ಸೆ ನೀಡುವ ವಿಶ್ವದ ಅತಿದೊಡ್ಡ ಸ್ವಾಭಾವಿಕ ಪ್ಲಾಸ್ಮಾ ಥೆರಪಿ ಪ್ರಯೋಗ ಯೋಜನೆಯಾದ ಪ್ಲ್ಯಾಟಿನಾ ಯೋಜನೆಯನ್ನು ಉದ್ಧವ್ ಠಾಕ್ರೆ ಸೋಮವಾರ ಉದ್ಘಾಟಿಸಿದರು. ಇದು ಪ್ಲಾಸ್ಮಾ ದಾನ, ಪ್ಲಾಸ್ಮಾ ಬ್ಯಾಂಕಿಂಗ್​ಗೆ ಅನುಕೂಲವಾಗಲಿದೆ.

ಕರ್ನಾಟಕ ರಾಜ್ಯಧಾನಿಯಲ್ಲಿ 31 ಪೊಲೀಸ್​ ಠಾಣೆಗಳು ಸೀಲ್​ಡೌನ್​:

ಬೆಂಗಳೂರು ನಗರದಲ್ಲಿ ಕೊರೊನಾ ಸಾಂಕ್ರಾಮಿಕ ಹರಡುವ ಹಿನ್ನೆಲೆಯಲ್ಲಿ ಡಿಜಿ ಮತ್ತು ಆಯುಕ್ತರ ಕಚೇರಿ ಸೇರಿದಂತೆ 31 ಪೊಲೀಸ್ ಠಾಣೆಗಳನ್ನು ಸೋಮವಾರ ಸೀಲ್​ಡೌನ್​ ಮಾಡಲಾಗಿದೆ.

ವರದಿಗಳ ಪ್ರಕಾರ, 890 ಪೊಲೀಸರು ಮತ್ತು ಉದ್ಯೋಗಿಗಳನ್ನು ಹೋಮ್​ ಕ್ವಾರಂಟೈನ್​ ಮಾಡಲಾಗಿದೆ. ಸಕಾರಾತ್ಮಕ ವರದಿಗಳು ಬಂದ ಬಳಿಕ ತಿಲಕ್ ನಗರ, ಕಾಮಾಕ್ಷಿ ಪಾಳ್ಯ, ವಿಲ್ಸನ್ ಗಾರ್ಡನ್, ನಗರ ಪೊಲೀಸ್ ಆಯುಕ್ತರ ಕಚೇರಿ ಸೇರಿದಂತೆ ನಗರ ಮಾರುಕಟ್ಟೆಯ ಪೊಲೀಸ್ ಠಾಣೆಗಳನ್ನು ಸೀಲ್​ಡೌನ್​ ಮಾಡಲಾಗಿದೆ.

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ಒಟ್ಟು ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ಈಗ 919ಕ್ಕೆ ಏರಿದೆ. ಅದರಲ್ಲಿ 350 ಪ್ರಕರಣಗಳು ಸಕ್ರಿಯವಾಗಿದ್ದು, 534 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದುವರೆಗೆ 7 ಸಾವುಗಳು ವರದಿಯಾಗಿವೆ.

ಜಾರ್ಖಂಡ್​: ಜಾರ್ಖಂಡ್‌ನಲ್ಲಿ ಸೋಮವಾರ ಮತ್ತೊಂದು ಕೊರೊನಾ ಸೋಂಕಿತ ಮೃತಪಟ್ಟಿದ್ದಾರೆ. ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿದೆ. ಕೊರೊನಾ ಸೋಂಕಿನ 44 ಹೊಸ ಪ್ರಕರಣಗಳು ದೃಢೀಕರಿಸಲ್ಪಟ್ಟ ರೋಗಿಗಳ ಸಂಖ್ಯೆ 2386ಕ್ಕೆ ಏರಿದೆ. ಧನ್ಬಾದ್‌ನಲ್ಲಿ ಗರಿಷ್ಠ 20 ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್​ ಆಸ್ಪತ್ರೆಗಳಿಂದ 69 ರೋಗಿಗಳು ಗುಣಮುಖರಾಗಿದ್ದು, 559 ಪ್ರಕರಣಗಳು ಸಕ್ರಿಯವಾಗಿವೆ.

ರಾಜಸ್ಥಾನ: ಜುಲೈ 1ರಿಂದ ಸೀಮಿತ ಸಂಖ್ಯೆಯ ಭಕ್ತರು ಭೇಟಿ ನೀಡುವ ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಸ್ಥಳಗಳನ್ನು ತೆರೆಯಲು ರಾಜಸ್ಥಾನ ಸರ್ಕಾರ ಭಾನುವಾರ ಅನುಮತಿ ನೀಡಿದೆ. ಈ ಸ್ಥಳಗಳಲ್ಲಿ ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳು ಕಡ್ಡಾಯವಾಗಲಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಕೇಂದ್ರದ ಹೊಸ ಮಾರ್ಗಸೂಚಿಗಳ ಹೊರತಾಗಿಯೂ ಜೂನ್ 30ರವರೆಗೆ ಧಾರ್ಮಿಕ ಸ್ಥಳಗಳನ್ನು ತೆರೆಯುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

‘ಅನ್ಲಾಕ್ 1’ ಅಡಿಯಲ್ಲಿ ಪೂಜಾ ಸ್ಥಳಗಳನ್ನು ಮತ್ತೆ ತೆರೆಯಲು ಅವಕಾಶ ಮಾಡಿಕೊಟ್ಟಿತು. ಮುಖ್ಯಮಂತ್ರಿ ಅವರ ನಿವಾಸದಲ್ಲಿ ನಡೆದ ಕೊರೊನಾ ಸೋಂಕಿನ ಸ್ಥಿತಿಯ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಈ ಸೂಚನೆಗಳನ್ನು ನೀಡಿದರು.

ಉತ್ತರಾಖಂಡ : ಉತ್ತರಾಖಂಡದಲ್ಲಿ ಎಂಟು ಹೊಸ ಕೊರೊನಾ ಪಾಸಿಟಿವ್​ ಮತ್ತು ಓರ್ವ ಮೃತಪಟ್ಟಿದ್ದು ವರದಿಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 2,831ಕ್ಕೆ ಏರಿಕೆಯಾಗಿದೆ. ಇದರಲ್ಲಿ 659 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 2,011 ಜನ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಗುಣಮುಖರಾಗುವ ಪ್ರಮಾಣವು ಶೇ 74.51ರಷ್ಟಿದೆ.

ಬಿಹಾರ: ಬಿಹಾರ್‌ನಲ್ಲಿ ಸೋಮವಾರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದ್ದು, 282 ಜನರಲ್ಲಿ ಸೋಂಕು ಕಂಡುಬಂದಿದೆ. ನಾಲ್ಕು ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ 63ಕ್ಕೆ ಏರಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 9,506ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್ : ಕೊರೊನಾದಿಂದ ಐವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 138ಕ್ಕೆ ತಲುಪಿದೆ. 202 ಹೊಸ ಪ್ರಕರಣಗಳು ದೃಢಪಟ್ಟು ಈ ಮೂಲಕ ಸೋಂಕಿತರ ಸಂಖ್ಯೆ 5,418ಕ್ಕೆ ತಲುಪಿದೆ. ಪಟಿಯಾಲದಲ್ಲಿ ಮೂವರು ಮತ್ತು ಗುರುದಾಸ್‌ಪುರ ಮತ್ತು ಸಂಗ್ರೂರ್‌ನಲ್ಲಿ ತಲಾ ಒಂದು ಸಾವು ಸಂಭವಿಸಿದೆ ಎಂದು ಅಧಿಕೃತ ಬುಲೆಟಿನ್ ತಿಳಿಸಿದೆ.

ಹೊಸ ಪ್ರಕರಣಗಳ ಪೈಕಿ 60 ಸಂಗ್ರೂರಿ- 60, ಪಟಿಯಾಲ- 45, ಅಮೃತಸರ- 21, ಲುಧಿಯಾನ- 14, ಎಸ್‌ಬಿಎಸ್ ನಗರ- 10, ಬರ್ನಾಲಾ ಮತ್ತು ಜಲಂಧರ್‌- ತಲಾ 9, ತಾರ್ನ್ ತರಣ್‌- 6, ರೂಪನಗರ- 5, ಮೊಹಾಲಿ ಮತ್ತು ಮಾನಸಾ- ತಲಾ 4 ಪ್ರಕರಣಗಳು ಕಂಡುಬಂದಿವೆ. ಪಠಾಣ್‌ಕೋಟ್, ಫರೀದ್‌ಕೋಟ್ ಮತ್ತು ಗುರುದಾಸ್‌ಪುರದಲ್ಲಿ ತಲಾ ಮೂರು, ಫಿರೋಜ್‌ಪುರದಲ್ಲಿ ಎರಡು, ಫತೇಘಡ್ ಸಾಹಿಬ್, ಮೊಗಾ, ಬತಿಂಡಾ ಮತ್ತು ಕಪುರ್ಥಾಲಾದಲ್ಲಿ ತಲಾ ಒಂದು ಸೋಂಕಿತರು ಪತ್ತೆಯಾಗಿದ್ದಾರೆ.

ಮಧ್ಯಪ್ರದೇಶ: ಮಧ್ಯಪ್ರದೇಶದ ಮೊರೆನಾದಲ್ಲಿ 24 ಗಂಟೆಗಳ ಒಳಗೆ 56ಕ್ಕೂ ಹೆಚ್ಚು ಕೋವಿಡ್​ ಪ್ರಕರಣಗಳು ಪತ್ತೆಯಾದ ನಂತರ, ಜಿಲ್ಲೆಯ ಸೋಂಕಿತರ ಸಂಖ್ಯೆ 404ಕ್ಕೆ ಏರಿದೆ.

ನೆರೆಯ ರಾಜ್ಯ ರಾಜಸ್ಥಾನದೊಂದಿಗೆ ಜಿಲ್ಲೆಯ ಗಡಿಯನ್ನು ಜಿಲ್ಲಾಡಳಿತ ಬಂದ್​ ಮಾಡಿದೆ. 10 ದಿನಗಳ ನಿರ್ಬಂಧಿತ ಅವಧಿಯಲ್ಲಿ ಯಾವುದೇ ವ್ಯಕ್ತಿಯು ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಎರಡು ಪಟ್ಟಣಗಳ ನಡುವೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೊರೆನಾ ಜಿಲ್ಲಾಧಿಕಾರಿ ಪ್ರಿಯಾಂಕಾ ದಾಸ್ ಮುಂದಿನ 10 ದಿನಗಳವರೆಗೆ ಇಲ್ಲಿನ ಜಿಲ್ಲಾ ಕೇಂದ್ರದಿಂದ 26 ಕಿ.ಮೀ ದೂರದಲ್ಲಿರುವ ಧೋಲ್ಪುರ್- ಮೊರೆನಾ ಗಡಿಯಲ್ಲಿ ಜನರ ಸಂಚಾರಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ.

ಒಡಿಶಾ: ಒಡಿಶಾದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 6859ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 245 ಹೊಸ ಪಾಸಿಟಿವ್​ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 214 ಪ್ರಕರಣಗಳು ಕ್ವಾರಂಟೈನ್​ ಕೇಂದ್ರಗಳಿಂದ ಪತ್ತೆ ಮಾಡಲಾಗಿದೆ.

ಹೊಸ ಪ್ರಕರಣಗಳಲ್ಲಿ 19 ಜಿಲ್ಲೆಗಳಿಂದ 243 ಪ್ರಕರಣಗಳು ವರದಿಯಾಗಿದ್ದು, ಉಳಿದ 2 ಪ್ರಕರಣ ಪಶ್ಚಿಮ ಬಂಗಾಳದ ಅಂಫಾನ್​ ಚಂಡಮಾರುತದಿಂದ ಮರಳಿದ ಎನ್​ಡಿಆರ್​ಎಫ್​/ಒಡಿಆರ್​ಎಎಫ್​ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

245 ಹೊಸ ಪ್ರಕರಣಗಳೊಂದಿಗೆ ಒಟ್ಟು ಸಕ್ರಿಯ ಪಾಸಿಟಿವ್​ ಪ್ರಕರಣಗಳ ಸಂಖ್ಯೆ 2,086 ಆಗಿದೆ. ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ 4,743 ಆಗಿದೆ. ಗಂಜಾಂ ಜಿಲ್ಲೆಯಿಂದ ಸೋಮವಾರ ಎರಡು ಸಾವುಗಳು ವರದಿಯಾಗಿವೆ.

Last Updated : Jun 30, 2020, 12:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.