ETV Bharat / bharat

ದೇಶದಲ್ಲಿ ನಿಲ್ಲದ ಕೊರೊನಾ ಅಟ್ಟಹಾಸ: ರಾಜ್ಯವಾರು ಕೋವಿಡ್​ ಚಿತ್ರಣ ಇಂತಿದೆ! - ನಿಲ್ಲದ ಕೊರೊನಾ ಅಟ್ಟಹಾಸ

ದೇಶಾದ್ಯಂತ ಮಹಾಮಾರಿ ಕೊರೊನಾ ಅಟ್ಟಹಾಸ ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಇಂದು ಕೂಡ ಬರೋಬ್ಬರಿ 18 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿವೆ.

COVID-19 news from across the nation
COVID-19 news from across the nation
author img

By

Published : Jun 27, 2020, 10:00 PM IST

ಹೈದರಾಬಾದ್​: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟಿದ್ದು, ಒಂದೇ ದಿನ ಬರೋಬ್ಬರಿ 18,552 ಕೋವಿಡ್​ ಕೇಸ್​ ದಾಖಲಾಗಿ, 384 ಜನರು ಸಾವನ್ನಪ್ಪಿದ್ದಾರೆ.

ರಾಜ್ಯವಾರು ಕೋವಿಡ್​​ ಚಿತ್ರಣ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿಂದು 2,948 ಕೋವಿಡ್​ ಪ್ರಕರಣ ಕಾಣಿಸಿಕೊಂಡಿದ್ದು, ಈ ಮೂಲಕ 80 ಸಾವಿರ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 66 ಜನರು ಸಾವನ್ನಪ್ಪಿದ್ದಾರೆ. ಜತೆಗೆ ಇಂದು ಒಂದೇ ದಿನ 2,200 ಜನರು ಗುಣಮುಖರಾಗಿದ್ದಾರೆ.

ಮಹಾರಾಷ್ಟ್ರ: ರಾಜ್ಯದಲ್ಲಿ ಕೋವಿಡ್​ ಸೋಂಕಿತ ಪ್ರಕರಣ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಇಂದೇ 5,318 ಸೋಂಕಿತ ಪ್ರಕರಣ ಸಿಕ್ಕಿದ್ದು, 167 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಂಖ್ಯೆ 1,59,133 ಆಗಿದೆ.

ಕರ್ನಾಟಕ: ಕರ್ನಾಟದಲ್ಲೂ ಕೊರೊನಾ ಸ್ಫೋಟಗೊಂಡಿದ್ದು, ಬರೋಬ್ಬರಿ 918 ಕೇಸ್​ ಕಾಣಿಸಿಕೊಂಡಿವೆ. ಇದರಲ್ಲಿ 596 ಕೇಸ್​​ ಬೆಂಗಳೂರಿನಲ್ಲಿ ಸಿಕ್ಕಿವೆ. ಪ್ರಕರಣ ಹೆಚ್ಚಾಗುತ್ತಿರುವ ಕಾರಣ ರಾಜ್ಯದಲ್ಲಿ ಪ್ರತಿ ಭಾನುವಾರ ಲಾಕ್​ಡೌನ್​ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

COVID-19 news from across the nation
ರಾಜ್ಯವಾರು ಕೋವಿಡ್​ ಚಿತ್ರಣ ಇಂತಿದೆ

ಗುಜರಾತ್​: 615 ಪ್ರಕರಣ ಕಾಣಿಸಿಕೊಂಡಿದ್ದು, ಈ ಮೂಲಕ 30,773 ಕೇಸ್​ ದಾಖಲಾಗಿವೆ. ಇಂದೇ 18 ಜನರು ಸಾವನ್ನಪ್ಪಿದ್ದಾರೆ.

ರಾಜಸ್ಥಾನ: ರಾಜಸ್ಥಾನದಲ್ಲೂ 284 ಕೋವಿಡ್​ ಪ್ರಕರಣ ಕಾಣಿಸಿಕೊಂಡಿದ್ದು, 11 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ 16,944 ಕೇಸ್​ ದಾಖಲಾಗಿವೆ. ಇದರಲ್ಲಿ 3,186 ಆ್ಯಕ್ಟಿವ್​ ಕೇಸ್​ಗಳಿದ್ದು, 391 ಜನರು ಸಾವನ್ನಪ್ಪಿದ್ದಾರೆ. ಒಡಿಶಾದಲ್ಲಿ 170 ಕೇಸ್​ ಸಿಕ್ಕಿದ್ದು, ಕೇರಳದಲ್ಲಿ 195, ಮಣಿಪುರದಲ್ಲಿ 25, ಪಂಜಾಬ್​ನಲ್ಲಿ 100 ನೂತನ ಕೇಸ್​ ಸಿಕ್ಕಿವೆ.

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ 521 ಕೇಸ್​ ದಾಖಲಾಗಿದ್ದು, ಒಟ್ಟು ಸೋಂಕಿತ ಪ್ರಕರಣ 16,711 ಆಗಿದೆ. ಇದೇ 13 ಜನರು ಸಾವನ್ನಪ್ಪಿದ್ದಾರೆ.

ತಮಿಳುನಾಡು: ಇಂದು ಕೊರೊನಾ ಅಬ್ಬರ ಜೋರಾಗಿದ್ದು, 3,713 ಹೊಸ ಪ್ರಕರಣ ಸಿಕ್ಕಿವೆ. ಚೆನ್ನೈನಲ್ಲೇ 1,939 ಪ್ರಕರಣ ದಾಖಲಾಗಿವೆ. ಇದರ ಮಧ್ಯೆ 2,737 ಡಿಸ್ಚಾರ್ಜ್​ ಆಗಿವೆ. 68 ಜನರು ಸಾವನ್ನಪ್ಪಿದ್ದಾರೆ.

ಉತ್ತರಪ್ರದೇಶ: 605 ಕೋವಿಡ್​ ಕೇಸ್​ ಸಿಕ್ಕಿದ್ದು, ಈ ಮೂಲಕ ಒಟ್ಟು ಸಂಖ್ಯೆ 21,548 ಆಗಿದೆ. ಜತೆಗೆ ಸಾವಿನ ಸಂಖ್ಯೆ 649ಕ್ಕೇರಿದೆ. ಸದ್ಯ ರಾಜ್ಯದಲ್ಲಿ 6,648 ಆ್ಯಕ್ಟಿವ್​ ಕೇಸ್​ಗಳಿವೆ. ಜಾರ್ಖಂಡ್​ನಲ್ಲಿ 45 ಕೇಸ್​, ಜಮ್ಮು-ಕಾಶ್ಮೀರದಲ್ಲಿ 204, ಉತ್ತರಾಖಂಡ್​ನಲ್ಲಿ 66, ಕೇರಳದಲ್ಲಿ 195 ಕೇಸ್​ ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.