ETV Bharat / bharat

ಮಾನವ ಕಳ್ಳಸಾಗಣೆ: ನಿಯಂತ್ರಿಸದಿದ್ದರೆ ಆರ್ಥಿಕ ಹಿಂಜರಿತ ಖಚಿತ

ಲಾಕ್‌ಡೌನ್​​​ನ ಕಟ್ಟುನಿಟ್ಟಾದ ನಿರ್ಬಂಧಗಳಿಂದ ಅನೇಕ ದೇಶಗಳಲ್ಲಿ ವಲಸಿಗರ ಕಳ್ಳಸಾಗಣೆ ಹೆಚ್ಚಾಗಿದೆ. ಇದು ಮುಂದೊಂದು ದಿನ ಆರ್ಥಿಕತೆಗೆ ತೀವ್ರ ಪೆಟ್ಟು ನೀಡಲಿದೆ ಎಂದು ಯುಎನ್‌ಒಡಿಸಿ ಹೇಳಿದೆ.

Covid-19 may spur incidents of human trafficking
ಮಾನವ ಕಳ್ಳಸಾಗಣೆ
author img

By

Published : May 16, 2020, 8:20 PM IST

ಹೈದರಾಬಾದ್: ಜಾಗತಿಕ ಬಿಕ್ಕಟ್ಟು ಸೃಷ್ಟಿಸಿರುವ ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ವಲಸೆ ಕಾರ್ಮಿಕರ ಮೇಲೆ ವ್ಯಾಪಕ ಪರಿಣಾಮ ಬೀರಿದೆ. ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದ್ದರೂ ಮಾನವ ಹಕ್ಕುಗಳನ್ನು ಉಲ್ಲಂಘಿಸಿ ಕಾಲ್ನಡಿಗೆ ಮೂಲಕ ತೆರಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇದು ಮುಂದಿನ ದಿನಗಳಲ್ಲಿ ಆರ್ಥಿಕತೆಗೆ ಬಲವಾದ ಪೆಟ್ಟು ನೀಡಲಿದೆ ಎಂದು ವಿಶ್ವಸಂಸ್ಥೆಯ ಮಾದಕ ವಸ್ತು ಮತ್ತು ಅಪರಾಧ ಕುರಿತ ವಿಶ್ವಸಂಸ್ಥೆ ಸಂಘಟನೆ (ಯುಎನ್‌ಒಡಿಸಿ) ಹೇಳಿದೆ. ವಲಸಿಗರು, ನಿರಾಶ್ರಿತರ ಜೀವಕ್ಕೆ ಕೊರೊನಾ ಹೆಚ್ಚು ಅಪಾಯ ಉಂಟು ಮಾಡುತ್ತಿದೆ. ಹೀಗಾಗಿ, ಸೋಂಕು ಪೀಡಿತ ದೇಶಗಳಿಂದ ನಿರ್ದಿಷ್ಟ ತಾಣಗಳಿಗೆ (ತವರುಗಳತ್ತ) ಹೆಜ್ಜೆ ಹಾಕುತ್ತಿರುವ ವಲಸಿಗರ ಕಳ್ಳಸಾಗಣೆ ದಿನದಿಂದ ದಿನ ಏರುತ್ತಲೇ ಇದೆ.

ಲಾಕ್‌ಡೌನ್​​​ನ ಕಟ್ಟುನಿಟ್ಟಾದ ನಿರ್ಬಂಧಗಳ ನಡುವೆಯೂ ಮೆಡಿಟರೇನಿಯನ್, ಸಬ್ ಸಹಾರನ್ ಆಫ್ರಿಕನ್, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಏಷ್ಯನ್ ಪ್ರದೇಶಗಳಲ್ಲಿ ಪಲಾಯನ ಮಾಡುತ್ತಿರುವವರ ಸಂಖ್ಯೆ ಅಗಾಧವಾಗಿದೆ. ಇದು ಕೊರೊನಾ ಮತ್ತಷ್ಟು ಹರಡುವ ಅಪಾಯವನ್ನೂ ಸೂಚಿಸುತ್ತದೆ ಎಂದು ಸಂಘಟನೆ ಹೇಳಿದೆ.

ಮಧ್ಯ ಪ್ರಾಚ್ಯ ಮತ್ತು ಮಧ್ಯ ಮೆಡಿಟರೇನಿಯನ್​ ಕಳ್ಳಸಾಗಣೆ ಮಾರ್ಗಗಳಲ್ಲಿ ವಲಸಿಗರು ಹೆಚ್ಚು ಪಯಣ ಬೆಳೆಸಿದ್ದಾರೆ. ಪೂರ್ವ ಮೆಡಿಟರೇನಿಯನ್ ಮಾರ್ಗದಲ್ಲಿ ತಡೆ ಹಾಕುವ ಸಾಧ್ಯತೆ ಹೆಚ್ಚಿರುವ ಪರಿಣಾಮ, ಈ ಮಾರ್ಗದಲ್ಲಿ ಪ್ರಯಾಣಿಸಲು ಹೆಚ್ಚು ಒಲವು ತೋರಿಸಿಲ್ಲ ಎಂಬುದು ತಿಳಿದು ಬಂದಿದೆ. ಅದಕ್ಕೆ ಕಾರಣ ಕಟ್ಟುನಿಟ್ಟಾದ ಲಾಕ್​​​​ಡೌನ್.

ವಲಸಿಗರ ಕಳ್ಳಸಾಗಣೆ ನಿರುದ್ಯೋಗ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಿದೆ. ಕೊರೊನಾ ಪ್ರೇರಿತ ಲಾಕ್​ಡೌನ್​ ಅನೇಕ ದೇಶಗಳಲ್ಲಿ ನಿರುದ್ಯೋಗ ಮತ್ತು ಬಡತನಕ್ಕೆ ಕಾರಣವಾಗಿದೆ. ಅದಕ್ಕೆ ಮಾನವ ಕಳ್ಳಸಾಗಣೆಗೆ ಲಾಕ್​ಡೌನ್​ ಒಂದೇ ಅಲ್ಲ, ಆರ್ಥಿಕ ಹಿಂಜರಿತವೂ ಸೇರಿದೆ ಎಂದು ಯುಎನ್‌ಒಡಿಸಿ ಹೇಳಿದೆ.

ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ವಲಸಿಗರ ಕಳ್ಳಸಾಗಣೆಗೆ ನಿಯಂತ್ರಣ ಹಾಕಿದರೆ ಆರ್ಥಿಕತೆ ಹಿಂಜರಿತದಿಂದ (ಆರ್ಥಿಕ ಚೇತರಿಕೆ) ತಪ್ಪಿಸಿಕೊಳ್ಳಬಹುದು ಎಂದು ಸಂಘಟನೆ ಸಲಹೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.