ETV Bharat / bharat

ಕಾರ್ಮಿಕರು, ಪ್ರವಾಸಿಗರನ್ನು ಸಾಗಿಸಲು ವಿಶೇಷ ಹಡಗು: ಮೇ 2ರ ಒಳಗೆ ನೋಂದಣಿಗೆ ಸೂಚನೆ

author img

By

Published : May 1, 2020, 7:51 PM IST

ಪೋರ್ಟ್ ಬ್ಲೇರ್ ಮತ್ತು ಚೆನ್ನೈ ಮಧ್ಯೆ ಸಿಲುಕಿರುವ ಜನರನ್ನು ಸುರಕ್ಷಿತವಾಗಿ ಅವರ ಪ್ರದೇಶಗಳಿಗೆ ತಲುಪಿಸಲು ವಿಶೇಷ ಹಡಗುಗಳ ವ್ಯವಸ್ಥೆ ಮಾಡಲಾಗುವುದು ಎಂದು ಶಿಪ್ಪಿಂಗ್​ ಸೇವೆಗಳ ಉಪ ನಿರ್ದೇಶಕರು ಅಭಯ ನೀಡಿದ್ದಾರೆ.

covid-19-lockdown-special-ships-between-port-blair-chennai-to-transport-those-stranded
ಕಾರ್ಮಿಕರು, ಪ್ರವಾಸಿಗರನ್ನು ಸಾಗಿಸಲು ವಿಶೇಷ ಹಡಗು

ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತವು ರಾಜಧಾನಿ ಪೋರ್ಟ್ ಬ್ಲೇರ್ ಮತ್ತು ಚೆನ್ನೈ ನಡುವೆ ಸಿಲುಕಿದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಿಕರು ಮತ್ತು ಪ್ರವಾಸಿಗರನ್ನು ಸಾಗಿಸಲು ವಿಶೇಷ ಹಡಗುಗಳ ವ್ಯವಸ್ಥೆ ಮಾಡಲು ನಿರ್ಧರಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಲಾಕ್‌ಡೌನ್​ನಿಂದ ಸಿಕ್ಕಿಬಿದ್ದ ಜನರನ್ನು ತಮ್ಮ ತವರು ರಾಜ್ಯಗಳಿಗೆ ಅಥವಾ ಹತ್ತಿರದ ಪ್ರದೇಶಗಳಿಗೆ ಸಾಗಿಸಲು ರಾಜ್ಯಗಳಿಗೆ ಹೊಸ ನಿರ್ದೇಶನಗಳನ್ನು ಬುಧವಾರ ಹೊರಡಿಸಿದ ನಂತರ ಅಧಿಕಾರಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶಿಪ್ಪಿಂಗ್ ಸೇವೆಗಳ ಉಪ ನಿರ್ದೇಶಕರು ತಿಳಿಸಿದ್ದಾರೆ.

‘ಮುಖ್ಯವಾಗಿ ಸ್ಕ್ರೀನಿಂಗ್ ಪ್ರಕ್ರಿಯೆ ನಡೆಸಿ ಕರೆದುಕೊಂಡು ಹೋಗಲಾಗುವುದು. ರೋಗದ ಲಕ್ಷಣ ಕಾಣದ ವ್ಯಕ್ತಿಗಳನ್ನು ಮಾತ್ರ ಹಡಗಿನಲ್ಲಿ ಪಯಣಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ರಾಜಧಾನಿ ಪೋರ್ಟ್ ಬ್ಲೇರ್‌ಗೆ ಆಗಮಿಸುವ ಎಲ್ಲ ವ್ಯಕ್ತಿಗಳನ್ನು ಕಡ್ಡಾಯವಾಗಿ 14 ದಿನಗಳವರೆಗೆ ಕ್ವಾರಂಟೈನ್​ ಮಾಡಲಾಗುವುದು. ಇನ್ನೂ ತಮ್ಮ ರಾಜ್ಯ ಅಥವಾ ಪ್ರದೇಶಗಳಿಗೆ ತೆರಳುವವರು ಮೇ 2ರಂದು ಸಂಜೆ 5 ಗಂಟೆ ಒಳಗಾಗಿ ಹೆಸರುಗಳನ್ನು ನೋಂದಾಯಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಪೋರ್ಟ್ ಬ್ಲೇರ್‌ನಿಂದ ಚೆನ್ನೈಗೆ ಪ್ರಯಾಣಿಸುವವರು ಹೆಸರು, ವಯಸ್ಸು, ಲಿಂಗ, ಪ್ರಸ್ತುತ ಸ್ಥಳ, ಅಂತಿಮ ನಿಲ್ದಾಣ ಮತ್ತು ಮೊಬೈಲ್ ಸಂಖ್ಯೆಯ ವಿವರಗಳೊಂದಿಗೆ 9932080480 ಮತ್ತು 9150572319 ಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.

ಚೆನ್ನೈನಿಂದ ಪೋರ್ಟ್​​​​ಬ್ಲೇರ್‌ಗೆ ಪ್ರಯಾಣಿಸುವವರು 9434272187ಗೆ ವಿವರಗಳೊಂದಿಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ಚೆನ್ನೈನ ಶಿಪ್ಪಿಂಗ್ ಸೇವೆಗಳ ಸಹಾಯಕ ನಿರ್ದೇಶಕರಿಗೆ ತಮ್ಮನ್ನು ನೋಂದಾಯಿಸಿಕೊಳ್ಳಬಹುದು ಎಂದು ಸೂಚಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.