ETV Bharat / bharat

ಕಾಶ್ಮೀರದಲ್ಲಿ ಐವರು ವೈದ್ಯರಿಗೆ ಕೋವಿಡ್‌ ದೃಢ; ದೇಶದಲ್ಲಿ ಲಕ್ಷದ ಗಡಿಗೆ ಬಂದು ನಿಂತ ಸೋಂಕಿತರ ಸಂಖ್ಯೆ - ಜಮ್ಮು-ಕಾಶ್ಮೀರ

ಕಾಶ್ಮೀರದಲ್ಲಿ ಐವರು ವೈದ್ಯರಿಗೆ ಸೋಂಕು ದೃಢ ಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 5,242 ಹೊಸ ಪ್ರಕರಣಗಳು ದಾಖಲಾಗಿವೆ.

COVID-19 LIVE: 5 doctors test positive in Kashmir
ಕಾಶ್ಮೀರದಲ್ಲಿ ಐವರು ವೈದ್ಯರಿಗೆ ಕೋವಿಡ್‌ ದೃಢ
author img

By

Published : May 18, 2020, 2:29 PM IST

ನವದೆಹಲಿ: ಲಾಕ್‌ಡೌನ್‌ ಸಡಿಲಿಕೆ ಮಾಡುತ್ತಿದ್ದಂತೆ ಕೋವಿಡ್‌ ಸೋಂಕಿತರ ಸಂಖ್ಯೆ ಕೂಡ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಇದೇ ಮೊದಲ ಬಾರಿಗೆ ಬರೋಬ್ಬರಿ 5,242 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ದೇಶದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 1 ಲಕ್ಷದ ಸಮೀಪಕ್ಕೆ ಬಂದು ನಿಂತಿದೆ.

ಸದ್ಯ ಈವರೆಗೆ ಒಟ್ಟು 96,169ಕ್ಕೆ ಸೋಂಕಿತರಾಗಿದ್ದಾರೆ. ಇದರಲ್ಲಿ 36,824 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೆಲ ನಿರ್ಬಂಧಗಳನ್ನು ತೆರೆವುಗೊಳಿಸಿ ಲಾಕ್‌ಡೌನ್‌ಅನ್ನು ಮೇ 31ರ ವರೆಗೆ ವಿಸ್ತರಣೆ ಮಾಡಿದ ಬೆನ್ನಲ್ಲೇ ಈ ಅಂಕಿಗಳು ಹೊರ ಬಿದ್ದಿದೆ.

ಮತ್ತೊಂದೆಡೆ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಐವರು ವೈದ್ಯರಿಗೆ ವೈರಸ್‌ ಇರುವುದು ದೃಢ ಪಟ್ಟಿದೆ. ಇದು ಭಾರಿ ಆತಂಕಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ಕೋವಿಡ್‌-19 ಅಟ್ಟಹಾಸ ಮೆರೆಯುತ್ತಿದ್ದು, ಮೊದಲ ಸ್ಥಾನದಲ್ಲಿರುವ ಈ ರಾಜ್ಯವೊಂದರಲ್ಲೇ 33,053 ಪ್ರಕರಣಗಳು ದಾಖಲಾಗಿವೆ. 1,198 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಗುಜರಾತ್‌ನಲ್ಲಿ 11,379 ಹಾಗೂ ತಮಿಳುನಾಡು 11,224 ಸೋಂಕಿತರೊಂದಿಗೆ 3ನೇ ಹಾಗೂ 10,054 ಸೋಂಕಿತರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.