ನವದೆಹಲಿ: ಲಾಕ್ಡೌನ್ನಿಂದಾಗಿ ಖಾಸಗಿ ಬಸ್ ಹಾಗೂ ಟೂರಿಸ್ಟ್ ಟ್ಯಾಕ್ಸಿಗಳಲ್ಲಿ ಕೆಲಸ ಮಾಡುವ ಸುಮಾರು 20 ಲಕ್ಷ ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಬಸ್ ಮತ್ತು ಕಾರು ಆಪರೇಟರ್ಗಳ ಕಾನ್ಫೆಡರೇಷನ್ ಆಫ್ ಇಂಡಿಯಾ (ಬಿಒಸಿಐ) ಅಭಿಪ್ರಾಯಪಟ್ಟಿದೆ.
ಸದ್ಯಕ್ಕೆ ರಾಷ್ಟ್ರದಲ್ಲಿ 15 ಲಕ್ಷ ಬಸ್ಗಳು ಹಾಗೂ 11 ಲಕ್ಷ ಟೂರಿಸ್ಟ್ ಟ್ಯಾಕ್ಸಿಗಳು ಸುಮಾರು 1 ಕೋಟಿ ಮಂದಿಗೆ ಉದ್ಯೋಗ ಒದಗಿಸುತ್ತಿದ್ದು, ಈ ಕ್ಷೇತ್ರ ಉದ್ಯೋಗಿಗಳು ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಂಕಷ್ಟಕ್ಕೆ ಸಿಲುಕಿರುವ ಉದ್ಯೋಗಿಗಳು ಕೇಂದ್ರ ಸರ್ಕಾರದ ನೆರವಿನ ನಿರೀಕ್ಷೆ ಮಾಡುತ್ತಿದ್ದು, ಸಾಲ ತೆಗೆದುಕೊಂಡು ಕಂತುಗಳನ್ನು ಕಟ್ಟುತ್ತಿರುವವರು ಹಣವಿಲ್ಲದೇ ಮತ್ತೊಮ್ಮೆ ಸಾಲದ ಸುಳಿಗೆ ಸಿಲುಕುವ ಭೀತಿಯಲ್ಲಿದ್ದಾರೆ.
ಈ ಕುರಿತು ಮಾತನಾಡಿರುವ ಬಿಒಸಿಐ ಅಧ್ಯಕ್ಷ ಪ್ರಸನ್ನ ಪಟವರ್ಧನ್ ''ಲಾಕ್ಡೌನ್ ವೇಳೆ ನಮ್ಮ ಶೇಕಡಾ 95ರಷ್ಟು ವಾಹನಗಳು ರಸ್ತೆಗೆ ಇಳಿಯಲಿಲ್ಲ. ಕಂಪನಿ ಒಪ್ಪಂದದ ಮೇರೆಗೆ ಕೆಲವೇ ಕೆಲವು ಬಸ್ಗಳು ಕಾರ್ಯಾಚರಣೆ ಮಾಡುತ್ತಿದ್ದವು. ಕೆಲವು ವಲಸೆ ಕಾರ್ಮಿಕರನ್ನು ಒಂದೆಡೆಯಿಂದ ಮತ್ತೊಂದೆಡೆ ತಲುಪಿಸಲು ಬಳಕೆಯಾದವು'' ಎಂದಿರುವ ಅವರು ವ್ಯವಹಾರಗಳು ಸ್ಥಗಿತಗೊಂಡು ಉದ್ಯೋಗಿಗಳಿಗೆ ವೇತನ ನೀಡುವುದೇ ಕಷ್ಟವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುಮಾರು ಒಂದು ಕೋಟಿ ಉದ್ಯೋಗಿಗಳಲ್ಲಿ 30 ರಿಂದ 40 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಈಗಾಗಲೇ 15ರಿಂದ 20ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಎಲ್ಲಕ್ಕಿಂತ ಹೆಚ್ಚಿನದಾಗಿ ಪ್ರಯಾಣಿಕರ ವಾಹನಗಳ ಸಾರಿಗೆ ಕಂಪನಿಗಳ ಮೇಲೆ ಲಾಕ್ಡೌನ್ ತೀವ್ರ ಪರಿಣಾಮ ಉಂಟುಮಾಡಿದೆ. ಇದೆಲ್ಲ ಕಾರಣಗಳಿಂದ ಸರ್ಕಾರ ಆದಷ್ಟು ನೆರವು ನೀಡಬೇಕೆಂದು, ಸಂಕಷ್ಟದ ದಿನಗಳಲ್ಲಿ ಒನ್ ನೇಷನ್, ಒನ್ ಟ್ಯಾಕ್ಸ್ ಪರ್ಮಿಟ್ ಅನ್ನು ಜಾರಿಗೊಳಿಸಬೇಕೆಂದು ಬಸ್ ಮತ್ತು ಕಾರು ಆಪರೇಟರ್ಗಳ ಕಾನ್ಫೆಡರೇಷನ್ ಆಫ್ ಇಂಡಿಯಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.