ನವದೆಹಲಿ: ಕೋವಿಡ್-19 ಸೋಂಕಿತರಿಗೆ ಆಮ್ಲಜನಕದ ಕೊರತೆ ಎದುರಾಗದಂತೆ ನೋಡಿಕಲು ಮುಂದಾಗಿರುವ ಕೇಂದ್ರ ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಐಎಸ್‌ಒ ಮಾನದಂಡಗಳನ್ನು ಅಳವಡಿಸಿ ನಿರ್ಮಿಸಿರುವ ಕಂಟೇನರ್‌ಗಳಲ್ಲಿ ದ್ರವರೂಪದ ಆಮ್ಲಜನ ಸಾಗಾಟ ಮಾಡಲು ಪೆಟ್ರೋಲಿಯಂ ಅಂಡ್ ಎಕ್ಸ್‌ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್ (ಪಿಇಎಸ್‌ಒ)ಗೆ ಕೇಂದ್ರ ಸರ್ಕಾರ ಇಂದು ಅನುಮತಿ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ, ಕೊರೊನಾ ವೈರಸ್ ಮಹಾಮಾರಿಯಿಂದಾಗಿ ತುರ್ತಾಗಿ ಆಮ್ಲಜನಕದ ಅವಶ್ಯಕತೆ ಇದೆ. ಹೀಗಾಗಿ ಅಗತ್ಯವಾದ ಆಕ್ಸಿಜನ್ ಬೇಕಾಗಿದೆ. ಹೆಚ್ಚು ಆಕ್ಸಿಜನ್ ಇರುವ ಪ್ರದೇಶಗಳಿಂದ ಕಡಿಮೆ ಇರುವ ಪ್ರದೇಶಗಳಿಗೆ ಪೂರೈಕೆ ಮಾಡಬೇಕು. ಹೀಗಾಗಿ ಐಎಸ್‌ಒ ಕಂಟೇನರ್‌ಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಸಾಗಣೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದೆ.
ಅಂತಾರಾಷ್ಟ್ರೀಯ ಗುಣಮಟ್ಟ ಸಂಸ್ಥೆಯ ಮಾನದಂಡಗಳನ್ನು ಅನುಸರಿಸಿ ಈ ಕಂಟೇನರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ದ್ರವಗಳನ್ನು ಸಾಗಿಸಲು ಅನುಕೂಲವಾಗುವಂತೆ ಇವುಗಳ ವಿನ್ಯಾಸ ಮಾಡಲಾಗಿರುತ್ತದೆ ಒಂದು ಟ್ಯಾಂಕರ್ 20 ಎಂಟಿ ಲಿಕ್ವಿಡ್ ಅನ್ನು ಸಾಗಣೆ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (DPIIT), ವಾಣಿಜ್ಯ ಮತ್ತು ಕೈಗಾರಿಗೆ ಸಚಿವಾಲಯ, ಪೆಟ್ರೋಲಿಯಂ ಅಂಡ್ ಎಕ್ಸ್‌ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್‌ಗೆ ದೇಶದೊಳಗೆ ರಸ್ತೆ ಮಾರ್ಗವಾಗಿ ದ್ರವ ರೂಪದ ಆಮ್ಲಜನಕ ಸಾಗಣೆಗೆ ಅವಕಾಶ ನೀಡಿದೆ.