ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹರಡುವುದು ಮುಂದುವರಿದಿದ್ದು, ವಿಷಮ ಶೀತ ಜ್ವರ (ಇನ್‌ಫ್ಲೂಯೆಂಝಾ) ಮತ್ತು ನೆಗಡಿಯ ಜೊತೆ ಅದನ್ನು ಹೋಲಿಸಲಾಗುತ್ತಿದೆ. ಇವೆಲ್ಲ ಉಸಿರಾಟ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳಾಗಿದ್ದರೂ, ಈ ಮೂರೂ ಕಾಯಿಲೆಗಳ ವೈರಸ್‌ಗಳು ಮತ್ತು ಅವು ಹರಡುವ ರೀತಿಯ ನಡುವೆ ವ್ಯತ್ಯಾಸಗಳಿವೆ.
ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಪ್ರಮುಖವಾಗಿದ್ದು, ಪ್ರತಿಯೊಂದು ರೀತಿಯ ವೈರಸ್‌ಗೂ ಯಾವ ಕ್ರಮವನ್ನು ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲು ಇದರಿಂದ ಸಾಧ್ಯವಾಗುತ್ತದೆ. ಕೋವಿಡ್-19, ನೆಗಡಿ ಮತ್ತು ಫ್ಲೂಗಳು ಉಸಿರಾಟ ಸಂಬಂಧಿ ಕಾಯಿಲೆಗಳಾಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ಹರಡುವಂಥವು.
ಕೋವಿಡ್-19 ಮತ್ತು ಫ್ಲೂ ಪರಸ್ಪರ ಸಾಮಾನ್ಯ ಲಕ್ಷಣಗಳನ್ನು ಹೊಂದಿವೆ. ಫ್ಲೂ ಲಕ್ಷಣಗಳು ವೇಗವಾಗಿ ಕಾಣಿಸಿಕೊಳ್ಳುವ ಸ್ವಭಾವದ್ದಾಗಿದ್ದು ಸಾಕಷ್ಟು ವ್ಯತ್ಯಾಸಗಳನ್ನು ಹೊಂದಿರುವಂಥದು. ಆದರೆ, ಕೋವಿಡ್-19 ತೀವ್ರ ತರದ ಕಾಯಿಲೆಯನ್ನು ಅಥವಾ ಸಾವನ್ನು ತರುವಂಥದು.
ಕೋವಿಡ್-19, ನೆಗಡಿ ಮತ್ತು ಫ್ಲೂ ಗೆ ಚಿಕಿತ್ಸೆಗಳು:
ನೆಗಡಿ: ವಿಶ್ರಾಂತಿ, ದ್ರವ ಆಹಾರ ಸೇವನೆ ಮತ್ತು ಐಬ್ರುಫೆನ್ (ಅಡ್ವಿಲ್) ಮತ್ತು ಅಸೆಟಾಮಿನೊಫೆನ್‌ನಂತಹ (ಟೈಲೆನಾಲ್) ಕೌಂಟರ್ ಮೂಲಕ ಪಡೆಯಬಹುದಾದ ಔಷಧಿಗಳ ಸೇವನೆಗೆ ವೈದ್ಯರು ಶಿಫಾರಸು ಮಾಡುತ್ತಾರೆ. ನೆಗಡಿಗೆ ಯಾವುದೇ ಲಸಿಕೆ ಇಲ್ಲ.
ಫ್ಲೂ: ಅಸೆಲ್ಟಾಮಿವರ್ (ಟಾಮಿಫ್ಲು) ದಂತಹ ಆಂಟಿವೈರಸ್ ಔಷಧಿಯನ್ನು ಪ್ರಾರಂಭದ ಹಂತದಲ್ಲಿ ನೀಡಲಾಗುತ್ತದೆ. ಒಂದು ವೇಳೆ ಫ್ಲೂ ಲಕ್ಷಣಗಳು ತೀವ್ರಗೊಂಡರೆ ವಿಶ್ರಾಂತಿ, ದ್ರವ ಆಹಾರ ಸೇವನೆ, ಅಸೆಟಾಮಿನೊಫೆನ್ ಮತ್ತು ಉಸಿರಾಟ ವ್ಯವಸ್ಥೆಯು ರೋಗ ಶಮನಕ್ಕೆ ನೆರವಾಗಬಲ್ಲದು. ಫ್ಲೂ ಲಕ್ಷಣಗಳನ್ನು ತಗ್ಗಿಸಲು ಅಥವಾ ನಿಯಂತ್ರಿಸಲು ಲಸಿಕೆಗಳು ಲಭ್ಯ.
ಕೋವಿಡ್-19: ಒಂದು ವೇಳೆ ಕೋವಿಡ್-19 ಲಕ್ಷಣಗಳು ತೀವ್ರಗೊಂಡರೆ ವಿಶ್ರಾಂತಿ, ದ್ರವ ಆಹಾರ ಸೇವನೆ, ಅಸೆಟಾಮಿನೊಫೆನ್ ಮತ್ತು ಉಸಿರಾಟ ವ್ಯವಸ್ಥೆಯ ಬಳಕೆಗೆ ವೈದ್ಯರು ಶಿಫಾರಸು ಮಾಡುತ್ತಾರೆ. ಆಂಟಿವೈರಲ್ ಔಷಧಿಗಳು ಮತ್ತು ಲಸಿಕೆಯ ಸಂಶೋಧನೆ ಸಕ್ರಿಯವಾಗಿ ನಡೆದಿದ್ದರೂ ಇದುವರೆಗೆ ಅಂತಹ ಯಾವುದೇ ಪರಿಹಾರ ಲಭ್ಯವಿಲ್ಲ.