ಕೋಲ್ಕತ್ತಾ: ನಿನ್ನೆ ಒಂದೇ ದಿನ 476 ಪಾಸಿಟಿವ್ ಕೇಸ್ಗಳು ಪಶ್ಚಿಮ ಬಂಗಾಳದಲ್ಲಿ ಪತ್ತೆಯಾಗಿವೆ. ಈ ಮೂಲಕ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 10 ಸಾವಿರದ ಗಡಿ ತಲುಪಿ ಮುನ್ನುಗ್ಗುತ್ತಿದೆ.
ಈಗಾಗಲೇ ಮಹಾರಾಷ್ಟ್ರ ಲಕ್ಷದ ಗಡಿ ದಾಟಿದ್ದಾರೆ. ದೆಹಲಿ, ತಮಿಳುನಾಡು, ರಾಜಸ್ಥಾನಗಳಲ್ಲಿ ಕೊರೊನಾ ತಾಂಡವ ನೃತ್ಯ ಮಾಡುತ್ತಿದೆ. ಈ ರಾಜ್ಯಗಳ ಸಾಲಿಗೆ ಈಗ ಪಶ್ಚಿಮ ಬಂಗಾಳವೂ ಸೇರ್ಪಡೆ ಆಗಿದೆ.
ಶುಕ್ರವಾರದ ವರದಿ ಪ್ರಕಾರ ರಾಜ್ಯದಲ್ಲಿ 10,244 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 5,587 ಸಕ್ರಿಯ ಪ್ರಕರಣಗಳಿವೆ. ಕೊರೊನಾದಿಂದ ಪಶ್ಚಿಮ ಬಂಗಾಳದಲ್ಲಿ ಇದುವರೆಗೂ 451 ಮಂದಿ ಸಾವನ್ನಪ್ಪಿದ್ದು, ಇನ್ನುಳಿದವರು ಗುಣಮುಖರಾಗಿ ಮನೆ ಸೇರಿದ್ದಾರೆ.