ಮುಂಬೈ: ಕೋವಿಡ್-19 ನಿಂದ ಮರಣ ಹೊಂದಿದ ಸಂತ್ರಸ್ತರನ್ನು ಉಚಿತವಾಗಿ ಸಮಾಧಿ ಮಾಡುವುದರ ಜೊತೆಗೆ ಎಲ್ಲಾ ಖರ್ಚುಗಳನ್ನು ಭರಿಸುವುದಾಗಿ ಮುಂಬೈನ ಮಹೀಮ್ ಕಬರ್ಸ್ಥಾನ ಟ್ರಸ್ಟ್ ತಿಳಿಸಿದೆ.
"ಇಂತಹ ಸಮಯದಲ್ಲಿ, ಮಾನವ ಕುಲಕ್ಕೆ ಸೇವೆ ನೀಡುವುದು ಅತ್ಯಂತ ಮುಖ್ಯವಾದ ಅಂಶವಾಗಿದೆ. ಎಲ್ಲಾ ಸಮಾಧಿ ಕಾರ್ಯಗಳನ್ನು ಉಚಿತವಾಗಿ ಮಾಡಲು ನಾವು ನಿರ್ಧರಿಸಿದ್ದೇವೆ. ಮಹೀಮ್ ಸುನ್ನಿ ಮುಸ್ಲಿಂ ಕಬರ್ಸ್ಥಾನ ಟ್ರಸ್ಟ್ನಿಂದ ಕೋವಿಡ್-19 ಸಂತ್ರಸ್ತರ ಸಮಾಧಿ ವೆಚ್ಚವನ್ನು ನಾವೇ ಭರಿಸುತ್ತೇವೆ" ಎಂದು ಮಹೀಮ್ ಸುನ್ನಿ ಮುಸ್ಲಿಂ ಕಬರ್ಸ್ಥಾನ ಟ್ರಸ್ಟ್ ಅಧ್ಯಕ್ಷ ಸುಹೇಲ್ ಖಾಂಡ್ವಾನಿ ಹೇಳಿದ್ದಾರೆ.
"ವಿಶೇಷ ಶವಪೆಟ್ಟಿಗೆಗಳನ್ನು ತಯಾರಿಸಲಾಗಿದ್ದು, ಸಮಾಧಿಯನ್ನು ಯಾರ ಹಸ್ತಕ್ಷೇಪವಿಲ್ಲದೆ ಮಾಡಲಾಗುತ್ತದೆ. ಸಮಾಧಿ ಮಾಡುವ ಮೊದಲು ಮತ್ತು ನಂತರ ಸ್ಯಾನಿಟೈಸ್ ಮಾಡಲಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.