ETV Bharat / bharat

ದೇಶಾದ್ಯಂತ 121 ಪರೀಕ್ಷಾ ಪ್ರಯೋಗಾಲಯಕ್ಕೆ ಐಸಿಎಂಆರ್​ ಅನುಮೋದನೆ - ಕೊರೊನಾ ಸೋಂಕಿನ ಪರೀಕ್ಷೆ

ವಿಶ್ವದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ಸೋಂಕಿನ ಪರೀಕ್ಷೆಗೆ ಐಸಿಎಂಆರ್​ ದೇಶಾದ್ಯಂತ 121 ಸರ್ಕಾರಿ, ಖಾಸಗಿ ಪರೀಕ್ಷಾ ಪ್ರಯೋಗಾಲಯಗಳನ್ನು ತೆರೆಯಲಾಗುವುದು ಎಂದು ತಿಳಿಸಿದೆ.

abs approved for testing in India
ಪರೀಕ್ಷಾ ಪ್ರಯೋಗಾಲಯಕ್ಕೆ ಐಸಿಎಂಆರ್​ ಅನುಮೋದನೆ
author img

By

Published : Mar 27, 2020, 5:21 PM IST

ನವದೆಹಲಿ: ಮಾರಣಾಂತಿಕ ಕೊರೊನಾ ಸೋಂಕಿನ ಪರೀಕ್ಷೆಗಳನ್ನು ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು 121 ಸರ್ಕಾರಿ ಪ್ರಯೋಗಾಲಯಗಳಿಗೆ ಅನುಮೋದನೆ ನೀಡಿದೆ ಎಂದು ಐಸಿಎಂಆರ್ ಶುಕ್ರವಾರ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

abs approved for testing in India
ಪರೀಕ್ಷಾ ಪ್ರಯೋಗಾಲಯಕ್ಕೆ ಐಸಿಎಂಆರ್​ ಅನುಮೋದನೆ

ಇವುಗಳನ್ನು ಹೊರತುಪಡಿಸಿ ದೇಶಾದ್ಯಂತ, ಆಂಧ್ರಪ್ರದೇಶ, ಅಸ್ಸೋಂ, ಬಿಹಾರ, ಛತ್ತೀಸ್​ಗಢ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಜಾರ್ಖಂಡ್​ಗಳಲ್ಲಿ 35 ಖಾಸಗಿ ಪರೀಕ್ಷಾ ಪ್ರಯೋಗಾಲಯ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ.

ಭಾರತದಲ್ಲಿ ಒಟ್ಟು ಸರ್ಕಾರಿ, ಖಾಸಗಿ ಸೇರಿದಂತೆ 157 ಕೊರೊನಾ ಪರೀಕ್ಷಾ ಪ್ರಯೋಗಾಲಯಗಳು ತೆರೆದುಕೊಂಡಿವೆ.

"ನ್ಯಾಷನಲ್ ಇನ್ಸಿಟ್ಯೂಟ್​ ಆಫ್ ವೈರಾಲಜಿ (ಎನ್ಐವಿ)ಯು ಕೊರೊನಾ ಸಂಬಂಧಿತ ತಾಂತ್ರಿಕ ತರಬೇತಿ ನೀಡುವ ಜವಾಬ್ದಾರಿ ತೆಗೆದುಕೊಂಡಿದೆ. ಇನ್ನೂ ಪುಣೆಯ ವೈರಲ್ ರಿಸರ್ಚ್​ ಆ್ಯಂಡ್​ ಡಯಾಗ್ನೋಸ್ಟಿಕ್​ ಪ್ರಯೋಗಾಲಯ ಸಂಪರ್ಕ ಸಂಪನ್ಮೂಲ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಐಸಿಎಂಆರ್​ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಹೆಚ್​ಒ) ಕೂಡಾ ವಿಶ್ವವನ್ನು ಕಾಡುತ್ತಿರುವ ಕೊರೊನಾ ಪರೀಕ್ಷೆಗೆ ಹೆಚ್ಚು ಒತ್ತು ನೀಡಿದ್ದು, ವಿಶ್ವದಿಂದಲೇ ಕೊರೊನಾವನ್ನು ಮರೆಯಾಗಿಸಲು ಪ್ರಯತ್ನಿಸುತ್ತಿದೆ.

"ಚೀನಾದಲ್ಲಿರುವ ಐಎಂಆರ್ 29 ಪ್ರಯೋಗಾಲದ ​16 ಸಾವಿರ ಉಪಕೇಂದ್ರದಿಂದ ದೇಶಾದ್ಯಂತ ದಿನಕ್ಕೆ 12 ಸಾವಿರ ಶಂಕಿತರ ಪರೀಕ್ಷೆ ಮಾಡಲಾಗುತ್ತಿದೆ" ಎಂದು ಡಬ್ಲೂಹೆಚ್​ಒ ಜಂಟಿ ಕಾರ್ಯದರ್ಶಿ ಲಾವ್​ ಅಗರ್​ವಾಲ್​ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.