ನವದೆಹಲಿ: ದೇಶದಲ್ಲಿ ಮತ್ತೆ 19 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 415ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
-
Total number of positive Coronavirus cases in the country is 415 and 7 deaths: Ministry of Health and Family Welfare pic.twitter.com/dKtaPhrHSo
— ANI (@ANI) March 23, 2020 " class="align-text-top noRightClick twitterSection" data="
">Total number of positive Coronavirus cases in the country is 415 and 7 deaths: Ministry of Health and Family Welfare pic.twitter.com/dKtaPhrHSo
— ANI (@ANI) March 23, 2020Total number of positive Coronavirus cases in the country is 415 and 7 deaths: Ministry of Health and Family Welfare pic.twitter.com/dKtaPhrHSo
— ANI (@ANI) March 23, 2020
ನಿನ್ನೆಯಿಂದ ಇಲ್ಲಿಯವರೆಗೂ 19 ನೂತನ ಪ್ರಕರಣಗಳು ಪತ್ತೆಯಾಗಿವೆ. 415 ರಲ್ಲಿ 349 ಭಾರತೀಯರು ಮತ್ತು 41 ವಿದೇಶಿಗರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಲ್ಲಿಯವರೆಗೆ ಮಾರಕ ಸೋಂಕಿಗೆ 7 ಮಂದಿ ಬಲಿಯಾಗಿದ್ದರೆ, 24 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚಿದ ಸೋಂಕು:
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ 64, ಕೇರಳ 60, ಕರ್ನಾಟಕ 26, ತೆಲಂಗಾಣದಲ್ಲಿ 15 ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.