ETV Bharat / bharat

10 ಗಂಟೆಗಳಲ್ಲಿ ಆಸ್ಪತ್ರೆ ವಾರ್ಡ್​ ಆವರಿಸಬಹುದು ಕೊರೊನಾ ವೈರಸ್! - ಆಸ್ಪತ್ರೆಯಲ್ಲಿ ವೈರಸ್ ಹರಡುವಿಕೆ

ಆಸ್ಪತ್ರೆಯ ವಾರ್ಡ್​ ಒಂದರ ನೆಲದ ಮೇಲೆ ಬಿದ್ದ ಒಂದು ಹನಿ ಕೋವಿಡ್​ ವೈರಸ್​ ಇರುವ ದ್ರವದಿಂದ ಕೇವಲ 10 ತಾಸಿನಲ್ಲಿ ಆ ವಾರ್ಡ್​ನ ಅರ್ಧಕ್ಕೂ ಹೆಚ್ಚು ನೆಲ ಕೋವಿಡ್ ಸೋಂಕಿನಿಂದ ಆವೃತವಾಗಬಹುದು ಎಂಬುದು ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ.

Coronavirus can spread
Coronavirus can spread
author img

By

Published : Jun 13, 2020, 4:20 PM IST

ಲಂಡನ್ (ಯುಕೆ): ಜಗತ್ತಿನ ಎಲ್ಲ ರಾಷ್ಟ್ರಗಳು ಕೋವಿಡ್​-19 ತಡೆಯಲು ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಕೋವಿಡ್ ಹರಡುವಿಕೆಯ ತೀವ್ರತೆಯ ಕುರಿತಾಗಿ ಬೆಚ್ಚಿ ಬೀಳಿಸುವ ವರದಿಯೊಂದು ಬಂದಿದೆ. ಆಸ್ಪತ್ರೆಯ ವಾರ್ಡ್​ ಒಂದರ ನೆಲದ ಮೇಲೆ ಬಿದ್ದ ಒಂದು ಹನಿ ಕೋವಿಡ್​ ವೈರಸ್​ ಇರುವ ದ್ರವದಿಂದ ಕೇವಲ 10 ತಾಸಿನಲ್ಲಿ ಆ ವಾರ್ಡ್​ನ ಅರ್ಧಕ್ಕೂ ಹೆಚ್ಚು ನೆಲ ಕೋವಿಡ್ ಸೋಂಕಿನಿಂದ ಆವೃತವಾಗಬಹುದು ಎಂಬುದು ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ.

ಜರ್ನಲ್ ಆಫ್ ಹಾಸ್ಪಿಟಲ್ ಇನ್ಫೆಕ್ಷನ್ ಎಂಬ ವೈಜ್ಞಾನಿಕ ಜರ್ನಲ್​ನಲ್ಲಿ ಈ ಕುರಿತಾದ ವರದಿ ಪ್ರಕಟವಾಗಿದ್ದು, ಆಸ್ಪತ್ರೆಯಲ್ಲಿ ಎಷ್ಟು ತೀವ್ರವಾಗಿ ಕೋವಿಡ್ ವೈರಸ್​ ಹರಡಬಹುದು ಎಂಬುದನ್ನು ಇದರಲ್ಲಿ ತಿಳಿಸಲಾಗಿದೆ.

ಯುಕೆಯ ಯುನಿವರ್ಸಿಟಿ ಕಾಲೇಜ್ ಹಾಸ್ಪಿಟಲ್ ಮತ್ತು ಗ್ರೇಟ್ ಓರ್ಮಾಂಡ್ ಸ್ಟ್ರೀಟ್ ಹಾಸ್ಪಿಟಲ್​ಗಳ ಸಂಶೋಧಕರು ಈ ಅಧ್ಯಯನ ಕೈಗೊಂಡಿದ್ದು, ಆಸ್ಪತ್ರೆಯ ಬೆಡ್​ ರೇಲಿಂಗ್​ ಮೇಲೆ ಬಿದ್ದ ವೈರಸ್​ ಡಿಎನ್​ಎ 10 ತಾಸುಗಳಲ್ಲಿ ವಾರ್ಡ್​ನ ಅರ್ಧಕ್ಕೂ ಹೆಚ್ಚು ಪ್ರದೇಶಕ್ಕೆ ಹರಡಿರುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಹೀಗೆ ಹರಡಿದ ವೈರಸ್​ ಸುಮಾರು ಐದು ದಿನಗಳವರೆಗೆ ಇರಬಹುದಾಗಿದೆ ಎನ್ನುತ್ತಾರೆ ಅವರು.

ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಈ ಸಂಶೋಧನೆಯ ಸಮಯದಲ್ಲಿ ನಿಜವಾದ ವೈರಸ್​ ಉಪಯೋಗಿಸಿರಲಾಗಿರಲಿಲ್ಲ. ಮಾನವರಿಗೆ ಅಪಾಯವಾಗಬಾರದೆಂಬ ದೃಷ್ಟಿಯಿಂದ ಗಿಡಗಳಿಗೆ ತಗಲುವ SARS-CoV-2 ವೈರಸ್​ನ ತದ್ರೂಪಿ ಡಿಎನ್​ಎ ಮಾದರಿಯನ್ನು ಈ ಸಂದರ್ಭದಲ್ಲಿ ಬಳಸಲಾಗಿತ್ತು.

"ವಿವಿಧ ಮೇಲ್ಮೈಗಳ ಮೂಲಕ ಕೋವಿಡ್ ವೈರಸ್​ ಹರಡುವಿಕೆಯ ಪ್ರಮಾಣ ಎಷ್ಟು ತೀವ್ರವಾಗಿರುತ್ತದೆ ಎಂಬುದನ್ನು ತಿಳಿಯಲು ನಮ್ಮ ಅಧ್ಯಯನ ಸಹಕಾರಿಯಾಗಿದೆ. ಕೈಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದು ಎಷ್ಟು ಮುಖ್ಯ ಎಂಬುದು ಇದರಿಂದ ತಿಳಿದು ಬರುತ್ತದೆ." ಎಂದು ಸಂಶೋಧನೆ ಕೈಗೊಂಡ ಯುನಿವರ್ಸಿಟಿ ಕಾಲೇಜ್ ಹಾಸ್ಪಿಟಲ್​ನ ಲೆನಾ ಸಿರಿಕ್ ಹೇಳಿದ್ದಾರೆ.

"ನಾವು ತಯಾರಿಸಿದ ಜೀವಾಣುವನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಹಾಕಿದ ನಂತರ, ಆಸ್ಪತ್ರೆಯ ಸಿಬ್ಬಂದಿ ಹಾಗೂ ಹೊರಗಿನಿಂದ ಆಗಮಿಸಿದವರು ಅದನ್ನು ಮುಟ್ಟುವುದರಿಂದ ಹಾಗೂ ಕೋವಿಡ್​ ಸೋಂಕಿತರಿಂದ ಅದು ಎಲ್ಲೆಡೆ ಪಸರಿಸಲಾರಂಭಿಸಿತು." ಎಂದು ಸಿರಿಕ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.