ETV Bharat / bharat

ಕರೋನಾ ಭೀತಿ: ಹರಿಯಾಣದಲ್ಲಿ ಒಂದು ಪ್ರಕರಣ ಪತ್ತೆ - ಹರಿಯಾಣದಲ್ಲಿ ಕರೋನ ವೈರಸ್ ರೋಗ ಲಕ್ಷಣ

ಕರೋನಾ ವೈರಸ್​ನಿಂದ ಚೀನಾ ತತ್ತರಿಸಿದ್ದು, ಭಾರತದಲ್ಲೂ ಕೂಡಾ ಅಲ್ಲಲ್ಲಿ ಕರೋನಾ ವೈರಸ್​ ಶಂಕಿತರು ಇರುವ ಬಗ್ಗೆ ವರದಿಯಾಗುತ್ತಿದೆ.

corona virus
ಕರೋನ ವೈರಸ್
author img

By

Published : Feb 2, 2020, 10:49 PM IST

ಚಂಡೀಗಡ: ಈಗ ಹರಿಯಾಣದಲ್ಲಿ ಕೊರೋನಾ ಶಂಕಿತರೆನ್ನಲಾದ ಐವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಫಲಿತಾಂಶ ಹೊರ ಬಂದಿದ್ದು, ಐವರಲ್ಲಿ ಒಬ್ಬರಿಗೆ ಋಣಾತ್ಮಕ ಫಲಿತಾಂಶ ಬಂದಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ಐವರಲ್ಲಿ ಒಬ್ಬರು ಹರಿಯಾಣದ ಕರ್ನಾಲ್​ನ ಕಲ್ಪನಾ ಚಾವ್ಲಾ ಸರ್ಕಾರಿ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ತೆರೆಯಲಾದ ಪ್ರತ್ಯೇಕ ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದಾರೆ. ಇವರು ಇತ್ತೀಚೆಗಷ್ಟೇ ಚೀನಾಗೆ ತೆರಳಿ ವಾಪಸ್ ಬಂದಿದ್ದರು ಎಂದು ಹರಿಯಾಣದ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ.ದೂರಜ್ ಭನ್ ಕಾಂಬೋಜ್ ಹೇಳಿದ್ದಾರೆ.ಇವರ ತಪಾಸಣೆ ನಡೆಸಿ ಸ್ಯಾಂಪಲ್​ನ್ನು ಪುಣೆಯಲ್ಲಿರುವ ನ್ಯಾಷನಲ್​ ಇನ್ಸ್​ಟಿಟ್ಯೂಟ್​ ಅಪ್​ ವೈರಾಲಾಜಿಗೆ ಕಳುಹಿಸಲಾಗಿದೆ. ಇವರಲ್ಲದೇ ಇನ್ನು 24 ಜನ ಚೀನಾಗೆ ತೆರಳಿ ವಾಪಸ್​ ಬಂದಿದ್ದು, ಅವರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ. ಆದಾಗ್ಯೂ ಅವರನ್ನು ಸೂಕ್ಷ್ಮವಾಗಿ ಗಮನದಲ್ಲಿಡಲಾಗಿದೆ.ಯಾವುದೇ ಸಂದರ್ಭವನ್ನು ನಿಭಾಯಿಸಲು ಆರೋಗ್ಯ ಇಲಾಖೆ ಸನ್ನದ್ಧವಾಗಿದ್ದು, ಖಾಸಗಿ, ಸರ್ಕಾರಿ ಆಸ್ಪತ್ರೆ ಹಾಗೂ ಮೆಡಿಕಲ್​ ಕಾಲೇಜುಗಳೆಲ್ಲೆಡೆ ಪ್ರತ್ಯೇಕ ಚಿಕಿತ್ಸಾ ಘಟಕವನ್ನು ತೆರೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.