ಹೈದರಾಬಾದ್: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿದ ಭಾರತೀಯ ಜೈಲುಗಳ ಅಂಕಿಅಂಶ (ಪಿಎಸ್‌ಐ) 2018ರ ಪ್ರಕಾರ, 2018ರಲ್ಲಿ ಭಾರತದ ಕಾರಾಗೃಹಗಳ ಸಾಮರ್ಥ್ಯ 3,96,223 ಕೈದಿಗಳಾಗಿದ್ದಾಗಿದೆ. ಆದರೆ, ನಿಜವಾಗಿ ವಾಸವಿರುವವರ ಸಂಖ್ಯೆ 4,66,084 ಆಗಿದೆ. ಇದು ಜೈಲುಗಳಲ್ಲಿನ ಕೈದಿಗಳ ಸಂಖ್ಯೆಗಿಂತ 17.6% ಹೆಚ್ಚಾಗಿದೆ.
2018ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಮಾಹಿತಿಯ ಪ್ರಕಾರ, ಜೈಲಿನ ನಿರ್ವಹಣಾ ಖರ್ಚು ಕಡಿಮೆ ಏನಲ್ಲ. ಭಾರತದಲ್ಲಿ 1,339 ಕಾರಾಗೃಹಗಳಲ್ಲಿ 4,60,916ಕ್ಕೂ ಹೆಚ್ಚು ಕೈದಿಗಳಿದ್ದು, ಅವರ ನಿರ್ವಹಣೆಗೆ 60,000ಕ್ಕೂ ಹೆಚ್ಚು ಜೈಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಇದರ ಅವರ ವಾರ್ಷಿಕ ವೆಚ್ಚ ಸರ್ಕಾರಕ್ಕೆ 60,000 ಕೋಟಿ ರೂಪಾಯಿಯಷ್ಟು ಬರುತ್ತದೆ. 2018ರಲ್ಲಿ ಭಾರತದ ಒಟ್ಟು ಕೈದಿಗಳಲ್ಲಿ ಶೇ. 57.1% ರಷ್ಟು ಕೈದಿಗಳು ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನವರೇ ಆಗಿದ್ದಾರೆ.
ಕೊರೊನಾ ವೈರಸ್ ಹರಡುವ ಭೀತಿಯಿಂದ ವಿವಿಧ ಜೈಲುಗಳಲ್ಲಿ ಸಾವಿರಾರು ಕೈದಿಗಳನ್ನು ಪೆರೋಲ್‌ನಲ್ಲಿ ಬಿಡುಗಡೆ ಮಾಡುವಂತೆ ಭಾರತೀಯ ಅಧಿಕಾರಿಗಳನ್ನು ಒತ್ತಾಯಿಸಿದೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಪ್ರಕಾರ, ಜೈಲುಗಳಲ್ಲಿ ವೈರಸ್ ಹರಡಲು ಪ್ರಾರಂಭಿಸಿದರೆ ಪರಿಸ್ಥಿತಿ ನಿಯಂತ್ರಣ ಮೀರಲಿದೆ. ಹೀಗಾಗಿ ತಕ್ಷಣ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ವಿಶ್ವದಾದ್ಯಂತದ ಜೈಲುಗಳಲ್ಲಿ ಕೋವಿಡ್-19 ನಿಂದ ಸಾಯುವವರ ಪ್ರಮಾಣವೇ ಹೆಚ್ಚಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಜೈಲುಗಳಲ್ಲಿ ಜನದಟ್ಟಣೆ:
ಕೆಲವು ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಜೈಲುಗಳು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ. 31 ಡಿಸೆಂಬರ್ 2019ರವರೆಗೆ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಉತ್ತರಪ್ರದೇಶದ ಜೈಲುಗಳಲ್ಲಿರುವ ಕೈದಿಗಳ ಸಂಖ್ಯೆ ಜೈಲು ಸಾಮರ್ಥ್ಯಕ್ಕಿಂತ ಶೇಕಡಾ 76.5 ರಷ್ಟು ಹೆಚ್ಚಿಗೆಯೇ ಇದೆ. ಅಷ್ಟೇ ಅಲ್ಲ, ದೆಹಲಿಯ ತಿಹಾರ್ ಜೈಲಿನಲ್ಲಿ 5200 ಕೈದಿಗಳ ಸಾಮರ್ಥ್ಯವಿದ್ದರೆ, 12,106 ಕೈದಿಗಳನ್ನು ಅದರಲ್ಲಿ ಇರಿಸಲಾಗಿದೆ.
ಭಾರತೀಯ ಜೈಲುಗಳಲ್ಲಿ ವೈದ್ಯಕೀಯ ಆರೈಕೆ:
ಜೈಲುಗಳಲ್ಲಿ ವೈದ್ಯಕೀಯ ಸೇವೆಯ ಕೊರತೆಯಿದೆ. ಜೈಲುಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಮತ್ತು ಸಂಬಂಧಪಟ್ಟ ಇತರ ಉದ್ಯೋಗಿಗಳಲ್ಲಿ ಕೊರತೆಯಿದೆ. ಇನ್ನೂ ಇರುವವರಲ್ಲಿ ಕಡಿಮೆ ತರಬೇತಿ ಪಡೆದಿರುವವರೇ ಹೆಚ್ಚು. 2018ರ ಕೊನೆಯಲ್ಲಿ, 3,220 ರ ಅನುಮೋದಿತ ಬಲದ ವಿರುದ್ಧ 1,914 ವೈದ್ಯಕೀಯ ಸಿಬ್ಬಂದಿಯನ್ನು ಭಾರತೀಯ ಜೈಲುಗಳಲ್ಲಿ ಇರಿಸಲಾಗಿತ್ತು. ಇದು 40%ಕ್ಕಿಂತ ಕಡಿಮೆ. ಜಾರ್ಖಂಡ್‌ನಲ್ಲಿ 1375 ಕೈದಿಗಳಿಗೆ ಒಬ್ಬರು ವೈದ್ಯರಿದ್ದಾರೆ. ಹಾಗೇ ಪಶ್ಚಿಮ ಬಂಗಾಳದಲ್ಲಿ 923 ಮತ್ತು ಉತ್ತರಪ್ರದೇಶದಲ್ಲಿ 737 ಕೈದಿಗಳಿಗೆ ಒಬ್ಬರು ವೈದ್ಯರಿದ್ದಾರೆ.