ರಾಯ್ಪುರ್(ಛತ್ತೀಸಗಡ): ಕೊರೊನಾ ಸೋಂಕಿತ ವೃದ್ಧನೋರ್ವ ಮಂಗಳವಾರ ತಡರಾತ್ರಿ ಏಮ್ಸ್ ನ ಮೂರನೇ ಮಹಡಿಯಿಂದ ಹಾರಿದ್ದಾರೆ.
ಮಹಡಿ ಮೇಲಿನಿಂದ ಹಾರಿ ಗಾಯಗೊಂಡಿದ್ದ ರೋಗಿಗೆ ಏಮ್ಸ್‌ನಲ್ಲೇ ಎರಡು ಗಂಟೆಗಳ ಕಾಲ ಚಿಕಿತ್ಸೆ ನೀಡಲಾಯಿತು. ನಂತರ ಚಿಕಿತ್ಸೆ ಫಲಿಸದೆ ರೋಗಿಯು ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ.
ಬುಧಾರು ಸಾಹು ಎಂಬ 65 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ಕೊರೊನಾ ಸೋಂಕಿತ. ಇವರು ರಾಜಧಾನಿ ರಾಯ್‌ಪುರದ ಲಾಲ್‌ಪುರ ನಿವಾಸಿ ಎಂದು ತಿಳಿದು ಬಂದಿದೆ.
ಆಗಸ್ಟ್ 7 ರಂದು ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಕೊರೊನಾ ದೃಢವಾದಾಗಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಆಗಸ್ಟ್ 8 ರಂದು ಮನೋವೈದ್ಯರು ತಪಾಸಣೆ ಮಾಡಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ, ನಿನ್ನೆ ತಡರಾತ್ರಿ ಮಹಡಿಯಿಂದ ಹಾರಿ ಸಾವನ್ನಪ್ಪಿದ್ದಾರೆ.