ETV Bharat / bharat

ಶ್ರೀಕಾಳಹಸ್ತಿಯಲ್ಲಿ ಆಕಸ್ಮಿಕವಾಗಿ ಗುಂಡು ಹಾರಿಸಿದ ಪೊಲೀಸ್

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶ್ರೀಕಾಳಹಸ್ತಿ ದೇವಸ್ಥಾನದ ಭದ್ರತಾ ಕರ್ತವ್ಯದಲ್ಲಿದ್ದ ಸಿಬ್ಬಂದಿ ಶಸ್ತ್ರಾಸ್ತ್ರ ಇಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿರುವ ಘಟನೆ ನಡೆದಿದೆ.

ಶ್ರೀಕಾಳಹಸ್ತಿಯಲ್ಲಿ  ಗುಂಡು ಹಾರಿಸಿದ ಪೊಲೀಸ್
ಶ್ರೀಕಾಳಹಸ್ತಿಯಲ್ಲಿ ಗುಂಡು ಹಾರಿಸಿದ ಪೊಲೀಸ್
author img

By

Published : Oct 1, 2020, 3:50 PM IST

ಚಿತ್ತೂರು (ಆಂಧ್ರಪ್ರದೇಶ): ಇಲ್ಲಿನ ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಆಕಸ್ಮಿಕವಾಗಿ ಗುಂಡು ಹಾರಿರುವ ಘಟನೆ ನಡೆದಿದೆ. ಇನ್ನು ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇನ್ನು ಈ ಸಂಬಂಧ ಮಾತನಾಡಿದ ಶ್ರೀಕಾಳಹಸ್ತಿ ಇನ್ಸ್‌ಪೆಕ್ಟರ್ ನಾಗಾರ್ಜುನ, "ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಸುಬ್ರಹ್ಮಣ್ಯಂ ಎಂಬವರು ನಿನ್ನೆ ರಾತ್ರಿ ದೇವಾಲಯದ ಭದ್ರತಾ ಕರ್ತವ್ಯದಲ್ಲಿದ್ದರು. ದೇವಾಲಯ ಮುಚ್ಚಿದ ಬಳಿಕ , ಶಸ್ತ್ರಾಸ್ತ್ರಗಳನ್ನು ಭದ್ರಪಡಿಸಿಕೊಳ್ಳಲು ನಿಗದಿಪಡಿಸಿದ ಕೋಣೆಯಲ್ಲಿ (303 ಮಾದರಿ) ಇಡುತ್ತಿದ್ದರು. ಆ ಸಮಯದಲ್ಲಿ ಗುಂಡು ಆಕಸ್ಮಿಕವಾಗಿ ಹಾರಿದ್ದು, ಗೋಡೆಗೆ ಬಡಿದು ಒಂದು ಸಣ್ಣ ಕ್ಲಲು ಕೆಳಗೆ ಬಿದ್ದಿದೆ. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಸುಬ್ರಹ್ಮಣ್ಯಂ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದೆ" ಎಂದಿದ್ದಾರೆ.

ಇನ್ನು ಪೊಲೀಸರು ಈ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ ನಾಗಾರ್ಜುನ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.