ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಸರ್ಕಾರದ ಬಜೆಟ್ ಮಂಡಿಸಿದ್ದು, ಮಹಿಳೆಯರಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದೆ ಎಂಬ ನಿರೀಕ್ಷೆಯಿತ್ತು. ಆ ನಿರೀಕ್ಷೆಯನ್ನು ವಿತ್ತ ಸಚಿವೆ ಪೂರ್ಣಗೊಳಿಸಿದ್ದಾರೆ. ಬಜೆಟ್ನಲ್ಲಿ ಮಹಿಳೆಯರಿಗೆ ಏನೆಲ್ಲಾ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ ಎಂದು ತಿಳಿಯೋಣ.
- ಪ್ರತಿ ಸ್ವಸಹಾಯ ಗುಂಪಿನಲ್ಲಿ ಒಬ್ಬ ಮಹಿಳೆ ಜನಧನ ಖಾತೆ ಹೊಂದಿದವರಿಗೆ 5 ಸಾವಿರ ರೂ. ಒಡಿ ಸೌಲಭ್ಯ ಅರ್ಹಕರಿಗೆ ಮುದ್ರಾ ಯೋಜನೆಯಡಿ 1 ಲಕ್ಷ ರೂಪಾಯಿ ಸಾಲಕ್ಕೆ ಕ್ರಮ
- ಮಹಿಳಾ ಸ್ವಸಹಾಯ ಸಂಘಗಳ ಬಡ್ಡಿ ಸಬ್ವೆನ್ಷನ್ ಯೋಜನೆಯನ್ನು ಭಾರತದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲು ಕ್ರಮ.
- ಸದನದಲ್ಲಿ 78 ಮಹಿಳಾ ಸಂಸದರು ಇದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಮತದಾರರು ದಾಖಲೆಯ ಮತದಾನವನ್ನು ಮಾಡಿದ್ದು, ನೀತಿ ರಚನೆಯಲ್ಲಿ ಮಹಿಳೆಯರು ಕೂಡಾ ಪುರುಷರಷ್ಟೇ ಮುಖ್ಯವಾದ ಪಾತ್ರವಹಿಸುತ್ತಾರೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದರು. ಮಹಿಳೆಯರನ್ನು ಪ್ರೋತ್ಸಾಹಿಸಲು ಹಾಗೂ ಅವರ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಘೋಷಿಸಿದರು.