ನವದೆಹಲಿ: ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಎಸ್. ಕೃಷ್ಣ ಕುಮಾರ್ ನವದೆಹಲಿಯಲ್ಲಿ ಬಿಜೆಪಿ ಸೇರಿದರು.
ಈ ವೇಳೆ ಮಾತನಾಡಿದ ಅವರು, ನಾನು ನನ್ನ ಉಳಿದ ಜೀವನವನ್ನು ಮೋದಿ ಕೈ ಬಲಪಡಿಸುವುದಕ್ಕೊಸ್ಕರ ಬಳಸುತ್ತೇನೆ. ನನ್ನ ಪ್ರಕಾರ, ಮೋದಿಗೆ ದೇಶದ ಜನರು ಇನ್ನೂ 10 ವರ್ಷದ ಕಾಲಾವಧಿಗೆ ಆಡಳಿತ ನಡೆಸಲು ಅವಕಾಶ ನೀಡಬೇಕಿದೆ. ಆ ವೇಳೆಗೆ ಅವರು ದೇಶವನ್ನು ಆಧುನೀಕರಣದ ಜೊತೆಗೆ, ಜಗತ್ತಿನಲ್ಲಿ ಮುಂಚೂಣಿ ರಾಷ್ಟ್ರವನ್ನಾಗಿ ಮಾಡಬಲ್ಲರು ಎಂದು ಅಭಿಪ್ರಾಯಪಟ್ಟರು.
ಕೇರಳದಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಲು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದೆ. ಇದೀಗ ಕಾಂಗ್ರೆಸ್‌ನ ಮಾಜಿ ಸಂಸದರೊಬ್ಬರು ಪಕ್ಷ ಸೇರಿರುವುದರಿಂದ ದಕ್ಷಿಣ ಭಾರತದ ಪ್ರಮುಖ ರಾಜ್ಯದಲ್ಲಿ ಪಕ್ಷ ಬಲವರ್ಧನೆಗೆ ಶಕ್ತಿ ದೊರೆತಿದೆ.