ನವದೆಹಲಿ: ಕೃಷಿ ಮಸೂದೆ ವಿರೋಧಿಸಿ ಕಾಂಗ್ರೆಸ್ 'ಕಿಸಾನ್ ಯಾತ್ರಾ' ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಯಾತ್ರೆ ಪಂಜಾಬ್ನ ಸಂಗ್ರುರ್ನಿಂದ ಶನಿವಾರ ಆರಂಭವಾಗಲಿದ್ದು, ಹರಿಯಾಣ ಮತ್ತು ಪಂಜಾಬ್ನ ಹಲವು ಜಿಲ್ಲೆಗಳ ಮೂಲಕ ದೆಹಲಿ ತಲುಪಲಿದೆ.
ಕೃಷಿ ಮಸೂದೆ ವಿರೋಧಿಸಿ ನವೆಂಬರ್ 14ರವರೆರೆಗೆ ಕಾಂಗ್ರೆಸ್ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.
ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸುವ ಸಾಧ್ಯತೆ ಇದೆ. ಸಂಗ್ರುರ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಭಾಷಣದ ಬಳಿಕ ಕಿಸಾನ್ ಯಾತ್ರೆಗೆ ಚಾಲನೆ ಸಿಗಲಿದೆ
ಈಗಾಗಲೇ ದೇಶಾದ್ಯಂತ ಕೃಷಿ ಮಸೂಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.