ETV Bharat / bharat

ನಿಲ್ದಾಣದಲ್ಲಿ ಬಸ್​​ ನಿಲ್ಲಿಸದ ಕಂಡಕ್ಟರ್​ಗೆ ಜಿಲ್ಲಾಧಿಕಾರಿ ಕೊಟ್ಟ ಶಿಕ್ಷೆ ಏನು ಗೊತ್ತಾ? - undefined

ಶಾಲಾ ಮಕ್ಕಳು ಇಳಿಯಬೇಕಾದ ನಿಲ್ದಾಣದಲ್ಲಿ ನಿಲ್ಲಿಸದೆ ಅಸಭ್ಯವಾಗಿ ವರ್ತಿಸಿದ ಖಾಸಗಿ ಬಸ್​ ಕಂಡಕ್ಟರ್‌ಗೆ ಕೇರಳದ ಮಲಪ್ಪುರಂ ಜಿಲ್ಲಾಧಿಕಾರಿ ಜಾಫರ್​ ಮಲ್ಲಿಕ್​ ಅವರು ವಿದ್ಯಾರ್ಥಿಗಳ ಮನೆಯಲ್ಲಿಯೇ 10 ದಿನ ಕೆಲಸ ಮಾಡುವಂತೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ
author img

By

Published : Jul 26, 2019, 8:49 PM IST

ಕೇರಳ: ಶಾಲಾ ಮಕ್ಕಳು ಇಳಿಯಬೇಕಾದ ನಿಲ್ದಾಣದಲ್ಲಿ ನಿಲ್ಲಿಸದ ಖಾಸಗಿ ಬಸ್​ ಕಂಡಕ್ಟರ್‌ಗೆ ಕೇರಳದ ಮಲಪ್ಪುರಂ ಜಿಲ್ಲಾಧಿಕಾರಿ ಜಾಫರ್​ ಮಲ್ಲಿಕ್​ ಅವರು ವಿಭಿನ್ನ ರೀತಿಯ ಶಿಕ್ಷೆ ನೀಡಿದ್ದಾರೆ.

ಮಕ್ಕಳೊಂದಿಗೆ ಅಮಾನವೀಯವಾಗಿ ವರ್ತಿಸಿದ ಕಂಡಕ್ಟರ್​ಗೆ ವಿದ್ಯಾರ್ಥಿಗಳ ಮನೆಯಲ್ಲಿಯೇ 10 ದಿನ ಕೆಲಸ ಮಾಡುವಂತೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ವಾಜಿಕಾಡವು-ಪರಪನಂಗಡಿ ಮಾರ್ಗದ ಖಾಸಗಿ ಬಸ್ ‘ಕೊರಂಬಾಯಿಲ್’ನ ಕಂಡಕ್ಟರ್ ಶಬೀರ್ ಅಲಿ, ತನ್ನ ಸಹೋದರನೊಂದಿಗೆ ವೆಂಗರಾ ಬಳಿ ಇಳಿಯಲು ಬಯಸಿದ ವಿದ್ಯಾರ್ಥಿ ಪ್ರಯಾಣಿಕರನ್ನು ಕಡೆಗಣಿಸಿದ್ದರು. ಮಕ್ಕಳಿಗಾಗಿ ಬಸ್ ನಿಲ್ಲಿಸುವಂತೆ ಕೇಳಿದ ಇತರ ಪ್ರಯಾಣಿಕರ ಬೇಡಿಕೆಗಳಿಗೆ ಗಮನ ಕೊಟ್ಟಿರಲಿಲ್ಲ.

ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಮೋಟಾರು ವಾಹನ ಇಲಾಖೆಯು (ಎಂವಿಡಿ) ಬಸ್‌ ಅನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ. ಇನ್ಮುಂದೆ ಬಸ್‌ನಲ್ಲಿ ಪ್ರಯಾಣಿಸುವ ಮಕ್ಕಳು ಮತ್ತು ಹಿರಿಯರಿಗೆ ಉತ್ತಮವಾಗಿ ವರ್ತಿಸಲಿ ಎಂಬ ಉದ್ದೇಶದಿಂದ ಶಿಕ್ಷೆ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಘಟನೆ ಕುರಿತು ಜಿಲ್ಲಾಧಿಕಾರಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಜಿಲ್ಲೆಯ ತವನೂರ್ ಮಕ್ಕಳ ಮನೆಯಲ್ಲಿ ಕಂಡಕ್ಟರ್ ಆಗಿ ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಕಂಡಕ್ಟರ್ 10 ದಿನ ಕೆಲಸ ಮಾಡಲಿದ್ದಾರೆ. ಜುಲೈ 25ರಿಂದ ಮಕ್ಕಳ ಮನೆಯಲ್ಲಿರುವ ಪೋಷಕರು ಆದೇಶಿಸುವ ಕೆಲಸಗಳನ್ನು ಪಾಲಿಸಬೇಕು. ಈ ಶಿಕ್ಷೆಯಿಂದ ಕಂಡಕ್ಟರ್​ ಬದಲಾಗಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಪೋಸ್ಟ್​ ಮಾಡಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.