ETV Bharat / bharat

ನಾಮದೇವ್ ದಾಸ್ ತ್ಯಾಗಿ ಅಲಿಯಾಸ್ 'ಕಂಪ್ಯೂಟರ್ ಬಾಬಾ' ಜೈಲಿಂದ ಬಿಡುಗಡೆ - ಕಂಪ್ಯೂಟರ್ ಬಾಬಾ ಜೈಲಿನಿಂದ ಬಿಡುಗಡೆ ನ್ಯೂಸ್​

ನಾಮದೇವ್ ದಾಸ್ ತ್ಯಾಗಿ ಅಲಿಯಾಸ್ 'ಕಂಪ್ಯೂಟರ್ ಬಾಬಾ' ಜಾಮೀನಿನ ಮೇಲೆ ಇಂದೋರ್ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ.

prefers to keep mum
ನಾಮದೇವ್ ದಾಸ್ ತ್ಯಾಗಿ
author img

By

Published : Nov 20, 2020, 2:27 PM IST

ಇಂದೋರ್​: ಮಧ್ಯಪ್ರದೇಶದ ಇಂದೋರ್ ಜೈಲಿನಲ್ಲಿ 10 ದಿನಗಳ ಕಾಲ ಕಂಬಿ ಎಣಿಸಿದ ನಂತರ ಗುರುವಾರ ರಾತ್ರಿ ನಾಮದೇವ್ ದಾಸ್ ತ್ಯಾಗಿ ಅಲಿಯಾಸ್ ಬಿಡುಗಡೆಯಾಗಿದ್ದು, ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಇದು ಸತ್ಯದ ವಿಜಯ' ಎಂದು ಮಾತ್ರ ಹೇಳಿ ಹೆಚ್ಚು ಪ್ರತಿಕ್ರಿಯಿಸಲು ನಿರಾಕರಿಸಿ ತೆರಳಿದ್ದಾರೆ.

ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್​​ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ನಾಮದೇವ್ ದಾಸ್ ತ್ಯಾಗಿ ಅಲಿಯಾಸ್ 'ಕಂಪ್ಯೂಟರ್ ಬಾಬಾ' ಇಂದೋರ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಆಶ್ರಮದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ನೆಲಸಮ ಮಾಡಿ ಬಾಬಾನನ್ನು ಬಂಧಿಸಿದ್ರು.

ಕಾಂಗ್ರೆಸ್ ಆಳ್ವಿಕೆಯಲ್ಲಿ, ಕಮಲ್ ನಾಥ್ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ನಾಮದೇವ್ ದಾಸ್ ತ್ಯಾಗಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗ ವೇಳೆ 28 ವಿಧಾನಸಭಾ ವಿಭಾಗಗಳಲ್ಲಿ ಉಪಚುನಾವಣೆ ನಡೆದಾಗ, ಕಂಪ್ಯೂಟರ್ ಬಾಬಾ 'ಪ್ರಜಾಪ್ರಭುತ್ವ ಉಳಿಸಿ' ಅಭಿಯಾನ ಕೈಗೊಂಡು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರಚಾರ ನಡೆಸಿದರು. ಬಿಜೆಪಿಯೂ ಅವರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿತ್ತು.

ಉಪಚುನಾವಣೆಗಳು ಮುಗಿದ ನಂತರ, ಕಂಪ್ಯೂಟರ್ ಬಾಬಾ ವಿರುದ್ಧ ಪ್ರಕರಣಗಳು ದಾಖಲಿಸಿ , ಅವರನ್ನು ನವೆಂಬರ್ 9 ರಂದು ಬಂಧಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.