ETV Bharat / bharat

ಚುನಾವಣೆ ಎದುರಿಸಲು ಕಾಂಗ್ರೆಸ್​ಗೆ ಸಮರ್ಥ ನಾಯಕತ್ವ ಬೇಕಿದೆ: ರಾಹುಲ್​ ವಿರುದ್ಧ ಮತ್ತೆ ಸಿಡಿದ ಸಿಬಲ್ - congress discuss election failure

ಬಿಹಾರ ವಿಧಾನಸಭಾ ಚುನಾವಣೆ ಮತ್ತು ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ನಿರೀಕ್ಷಿತ ಸ್ಥಾನಗಳು ಪಡೆಯುವಲ್ಲಿ ವಿಫಲಾವಗಿದೆ. ಅವರ ಈ ಹೇಳಿಕೆಗಳು ರಾಹುಲ್ ಗಾಂಧಿ ಮತ್ತು ಅವರ ತಂಡವು, ಅಭ್ಯರ್ಥಿಗಳು ಆಯ್ಕೆಯ ಪ್ರಕ್ರಿಯೆಯ ಭಾಗಿಯಾಗಿದೆ ಅಸಮಾಧಾನ ಹೊರ ಹಾಕಿದ್ದಾರೆ..

Sibal
ಕಪಿಲ್ ಸಿಬಲ್
author img

By

Published : Nov 16, 2020, 7:50 PM IST

ನವದೆಹಲಿ: ಪಕ್ಷದಲ್ಲಿನ ನಾಯಕತ್ವದ ಸುಧಾರಣೆ ಕೋರಿ ಪತ್ರ ಬರೆದಿದ್ದ 23 ನಾಯಕರಲ್ಲಿ ಒಬ್ಬರಾದ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಅವರು, ಮತ್ತೊಮ್ಮೆ ಪಕ್ಷದ ನಾಯಕತ್ವದ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ.

ಪಕ್ಷದ ವಿಷಯಗಳ ಬಗ್ಗೆ ಚರ್ಚಿಸಲು ಯಾವುದೇ ವೇದಿಕೆ ಇಲ್ಲದೆ ಇರುವುದರಿಂದ ಬಹಿರಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸಿಬಲ್, ಚುನಾವಣೆಗಳನ್ನು ನಿರ್ವಹಿಸಲು ಕಾಂಗ್ರೆಸ್​​ ಸಮರ್ಥ ಮತ್ತು ಹಿರಿಯ ನಾಯಕರ ಅಗತ್ಯವಿದೆ ಎಂದು ಹೇಳಿದರು.

ಬಿಹಾರ ವಿಧಾನಸಭಾ ಚುನಾವಣೆ ಮತ್ತು ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ನಿರೀಕ್ಷಿತ ಸ್ಥಾನಗಳು ಪಡೆಯುವಲ್ಲಿ ವಿಫಲಾವಗಿದೆ. ಅವರ ಈ ಹೇಳಿಕೆಗಳು ರಾಹುಲ್ ಗಾಂಧಿ ಮತ್ತು ಅವರ ತಂಡವು, ಅಭ್ಯರ್ಥಿಗಳು ಆಯ್ಕೆಯ ಪ್ರಕ್ರಿಯೆಯ ಭಾಗಿಯಾಗಿದೆ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಯಾವುದೇ ಹಿರಿಯ ಮುಖಂಡರು ಬಿಹಾರ ಫಲಿತಾಂಶದ ಬಗ್ಗೆ ಮಾತನಾಡಲಿಲ್ಲ ಎಂದು ಅಲವತ್ತುಕೊಂಡರು.

ಬಿಹಾರ ಫಲಿತಾಂಶದ ನಂತರ ಹಲವು ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ. ಕಾಂಗ್ರೆಸ್ ಪ್ರತಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ದುರ್ಬಲ ಕೊಂಡಿಯಾಗಿದೆ ಎಂಬುದು ಸ್ಪಷ್ಟವಾಗಿದೆ. ತಾನು ಸ್ಪರ್ಧಿಸಿದ 70ರಲ್ಲಿ 19 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಬಿಜೆಪಿಯೊಂದಿಗೆ ನೇರ ಸ್ಪರ್ಧೆಯಲ್ಲಿದ್ದ ಉಪಚುನಾವಣೆ ಕ್ಷೇತ್ರಗಳನ್ನು ಕಳೆದುಕೊಂಡಿದೆ.

ಪಕ್ಷವು ಕ್ಷೀಣಿಸುತ್ತಿದೆ ಎಂದು ಒಪ್ಪಿಕೊಳ್ಳಬೇಕು. ಸಾಂಸ್ಥಿಕ ಪುನರ್ರಚನೆ ಮತ್ತು ಮಾಧ್ಯಮ ನಿರ್ವಹಣೆಯಿಂದ ಹಿಡಿದು ತನ್ನನ್ನು ಬಲಪಡಿಸಿಕೊಳ್ಳಲು ಅನೇಕ ಮಾರ್ಗಗಳ ಅಗತ್ಯವಿದೆ. ಪಕ್ಷಕ್ಕೆ ಚಿಂತನಶೀಲ ನಾಯಕತ್ವ ಬೇಕಿದೆ. ಪಕ್ಷವು ಹೆಚ್ಚು ಅನುಭವಿ ನಾಯಕರನ್ನು ಹೊಂದಿದೆ. ರಾಜಕೀಯ ಪರಿಸ್ಥಿತಿ ಅರ್ಥಮಾಡಿಕೊಳ್ಳಬಲ್ಲ ಮತ್ತು ಜನರನ್ನು ತಲುಪಬೇಕಾದ ಮಾರ್ಗಗಳ ಬಗ್ಗೆ ಚರ್ಚಿಸಬೇಕಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.