ETV Bharat / bharat

ವಿಶೇಷ ಅಂಕಣ: ವ್ಯಾಪಾರಿಕ ಕುಶಲತೆ ಶಾಲೆಯಿಂದ ಪ್ರಾರಂಭ - B.Com Degre

ಹೆಚ್ಚೆಚ್ಚು ವಿದ್ಯಾರ್ಥಿಗಳು ಈಗ ವಾಣಿಜ್ಯ ಕೋರ್ಸ್‌ಗಳಿಗೆ ಸೇರ್ಪಡೆಯಾಗುತ್ತಿದ್ದಾರೆ. ಶೇಕಡಾ 40 ರಿಂದ 50ರಷ್ಟು ಪದವಿಪೂರ್ವ ವಿದ್ಯಾರ್ಥಿಗಳು ಬಿ.ಕಾಂ ಪದವಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ, ವಿಶೇಷ ವಾಣಿಜ್ಯ ಕಾಲೇಜುಗಳ ಸಂಖ್ಯೆಯಲ್ಲಿ ದಿಢೀರ್‌ ಹೆಚ್ಚಳವಾಗಿದೆ.

Commencement from business proficiency school
ವಿಶೇಷ ಅಂಕಣ: ವ್ಯಾಪಾರಿಕ ಕುಶಲತೆ ಶಾಲೆಯಿಂದ ಪ್ರಾರಂಭ
author img

By

Published : Sep 19, 2020, 4:50 PM IST

ನವದೆಹಲಿ: ಒಂದಾನೊಂದು ಕಾಲದಲ್ಲಿ, ಶಿಕ್ಷಣದ ಪ್ರಾಥಮಿಕ ಉದ್ದೇಶ ಕೇವಲ ಜ್ಞಾನವನ್ನು ಹೊಂದುವುದಷ್ಟೇ ಆಗಿತ್ತು. ಆದರೆ, ಇಂದು ಅದು ಕೆಲಸ ತಂದುಕೊಡುವ ಒಂದು ಸಾಧನವಾಗಿ ಪರಿಣಮಿಸಿದೆ. ಕೆಲಸ ಕೊಡದ ಶಿಕ್ಷಣವನ್ನು ಈಗ ಕೇವಲವಾಗಿ ನೋಡಲಾಗುತ್ತದೆ. ಈ ಕಾರಣಕ್ಕಾಗಿಯೇ, ಉದ್ಯೋಗ ಆಧರಿತ ಕಲಿಕೆಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ಇಪಿ ನ್ಯಾಶನಲ್‌ ಎಜುಕೇಶನ್‌ ಪಾಲಿಸಿ 2020) ಒತ್ತು ಕೊಟ್ಟಿದೆ.

ಕಳೆದೊಂದು ದಶಕದಲ್ಲಿ ವ್ಯಾಪಾರಿ ವಲಯವು ಅತ್ಯಧಿಕ ಶೇಕಡಾವಾರು ಉದ್ಯೋಗಗಳನ್ನು ಸೃಷ್ಟಿಸಿದೆ. ವಾಸ್ತವವಾಗಿ, ಜಗತ್ತನ್ನು ಆಳುತ್ತಿರುವುದೇ ವ್ಯಾಪಾರ ಕ್ಷೇತ್ರ. ಆನ್‌ಲೈನ್‌, ಚಿಲ್ಲರೆ, ಡಿಜಿಟಲ್‌ ಮಾರ್ಕೆಟಿಂಗ್‌, ಆನ್‌ಲೈನ್‌ ಅಕೌಂಟಿಂಗ್‌ (ಟ್ಯಾಲಿ), ತೆರಿಗೆ ಹಾಗೂ ಹಣಕಾಸು ತಂತ್ರಜ್ಞಾನಗಳು ವ್ಯಾಪಾರಿ ವಲಯವನ್ನು ಈಗ ಸಂಪೂರ್ಣವಾಗಿ ಬದಲಿಸಿಬಿಟ್ಟಿವೆ.

ಬಹುತೇಕ ಉದ್ಯೋಗ ಅವಕಾಶಗಳು ಇರುವುದೇ ಮೇಲ್ಕಾಣಿಸಿದ ಈ ಕ್ಷೇತ್ರಗಳಲ್ಲಿ. ಹೆಚ್ಚೆಚ್ಚು ವಿದ್ಯಾರ್ಥಿಗಳು ಈಗ ವಾಣಿಜ್ಯ ಕೋರ್ಸ್‌ಗಳಿಗೆ ಸೇರ್ಪಡೆಯಾಗುತ್ತಿದ್ದಾರೆ. ಶೇಕಡಾ 40 ರಿಂದ 50ರಷ್ಟು ಪದವಿಪೂರ್ವ ವಿದ್ಯಾರ್ಥಿಗಳು ಬಿ.ಕಾಂ ಪದವಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ, ವಿಶೇಷ ವಾಣಿಜ್ಯ ಕಾಲೇಜುಗಳ ಸಂಖ್ಯೆಯಲ್ಲಿ ದಿಢೀರ್‌ ಹೆಚ್ಚಳವಾಗಿದೆ.

ಆದರೆ, ಭಾರತದಲ್ಲಿ ಮಾತ್ರ ಔದ್ಯಮಶೀಲತೆ ಗಳಿಸಲು ಅಥವಾ ಲೆಕ್ಕಶಾಸ್ತ್ರದ ಕೌಶಲ್ಯಗಳನ್ನು ಕಲಿಯಬೇಕೆಂದರೆ ವಿದ್ಯಾರ್ಥಿಗಳು ಹೈಸ್ಕೂಲ್‌ ಅಥವಾ ಪದವಿಪೂರ್ವ ಹಂತದವರೆಗೆ ಕಾಯಬೇಕಾಗುವ ಪರಿಸ್ಥಿತಿ ಇದೆ. ಪದವಿಪೂರ್ವ ಹಂತದಲ್ಲಿ ಸಿಇಸಿ ಅಧ್ಯಯನ ಮಾಡಿ, ಬಿ.ಕಾಂ. ಮುಗಿಸಿದವರು ಮಾತ್ರ ವಾಣಿಜ್ಯ ವಿಷಯವನ್ನು ಅರ್ಥ ಮಾಡಿಕೊಳ್ಳಬಲ್ಲರು. ಅಂದರೆ, ಉನ್ನತ ವಿದ್ಯಾಭ್ಯಾಸ ಮುಗಿಸುವವರೆಗೆ, ಈ ಕ್ಷೇತ್ರದಲ್ಲಿರುವ ಹಲವಾರು ಅವಕಾಶಗಳನ್ನು ಬಾಚಿಕೊಳ್ಳುವುದು ವಿದ್ಯಾರ್ಥಿಗಳಿಗೆ ಸಾಧ್ಯವಾಗದು ಎಂಬುದು ಇದರ ಅರ್ಥ. ಈ ಪರಿಸ್ಥಿತಿ ಬದಲಾಗಲೇಬೇಕು. ಕಾಲ ಬದಲಾಗುತ್ತಿರುವಾಗ, ಅದಕ್ಕೆ ತಕ್ಕಂತೆ ಪಠ್ಯಕ್ರಮ ಕೂಡಾ ಬದಲಾಗಬೇಕು. ಶಾಲೆಗಳು ತಮ್ಮ ಪಠ್ಯಕ್ರಮದಲ್ಲಿ ವಾಣಿಜ್ಯವನ್ನೂ ಒಂದು ಮೂಲ ವಿಷಯವಾಗಿ ಸೇರಿಸಿಕೊಳ್ಳಬೇಕು.

ಇತ್ತೀಚಿನವರೆಗೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ಹೈಸ್ಕೂಲ್‌ ಹಂತದುದ್ದಕ್ಕೂ 6 ವಿಷಯಗಳನ್ನು ಅಧ್ಯಯನ ಮಾಡುವುದು ಕಡ್ಡಾಯವಾಗಿತ್ತು. ಕೇವಲ ಪದವಿಪೂರ್ವ ಹಂತದಲ್ಲಿ ಮಾತ್ರ, ತಮ್ಮ ಇಚ್ಛೆಯ ವಿಷಯಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಿತ್ತು. ಯಾರು ಎಂಪಿಸಿ ಅಥವಾ ಬಿಐಪಿಸಿ ಕ್ಷೇತ್ರಗಳಿಗೆ ಸೇರ್ಪಡೆಯಾಗುತ್ತಾರೋ ಅಂತಹವರಿಗೆ ಮಾತ್ರ ಪ್ರಸಕ್ತ ಶಾಲಾ ಪಠ್ಯಕ್ರಮವು ಉಪಯುಕ್ತವಾಗಿದೆ.

ವಾಣಿಜ್ಯ ವಿಷಯವು ಪಠ್ಯಕ್ರಮದ ಭಾಗವಾಗಿಲ್ಲದಿರುವುದರಿಂದ, ಸಿಇಸಿ ಆಯ್ಕೆ ಮಾಡುವವರಿಗೆ ನಷ್ಟ ಉಂಟಾಗುತ್ತಿದೆ ಅನಿಸುತ್ತದೆ. 10+2 ಶಾಲಾ ವ್ಯವಸ್ಥೆಯನ್ನು ಕೈಬಿಡಲು ಎನ್‌ಇಪಿ 2020 ನಿರ್ಧರಿಸಿದ್ದು ಈ ಕಾರಣಕ್ಕಾಗಿ.

ಹೀಗಾಗಿ, ಶಾಲೆಗಳು 9ನೇ ತರಗತಿಯಿಂದಲೇ ವಾಣಿಜ್ಯ ವಿಷಯವನ್ನು ಒಂದು ಅಧ್ಯಯನದ ವಿಷಯವಾಗಿ ಪರಿಚಯಿಸಬೇಕಾಗುತ್ತದೆ. ಶಾಲಾ ಹಂತದಲ್ಲಿಯೇ ಲೆಕ್ಕಪತ್ರ ಹಾಗೂ ವಾಣಿಜ್ಯ ವಿಷಯದ ಮೂಲಭೂತ ಕಲಿಕಗೆ ಮಕ್ಕಳು ಒಡ್ಡಿಕೊಳ್ಳುವುದರಿಂದ, ಪದವಿ ಹಂತದಲ್ಲಿ ಅವರು ತಮ್ಮಿಷ್ಟದ ವಿಷಯಗಳನ್ನು ಹೆಚ್ಚು ಜಾಣ್ಮೆಯಿಂದ ಆಯ್ಕೆ ಮಾಡಿಕೊಳ್ಳಲು ನೆರವಾಗಲಿದೆ.

ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವತ್ತ ಗಮನ ಹರಿಸುವಂತಹ ಶಿಕ್ಷಣವನ್ನು ಮಹಾತ್ಮ ಗಾಂಧಿ ಅವರು ಬಯಸಿದ್ದರು. ವಾಣಿಜ್ಯ ವಿಷಯವನ್ನು ಶಾಲಾ ಹಂತದಲ್ಲಿಯೇ ಬೋಧಿಸುವುದರಿಂದ, ತಮ್ಮಲ್ಲಿರುವ ಔದ್ಯಮಶೀಲತೆ ಕೌಶಲ್ಯಗಳನ್ನು ಹರಿತಗೊಳಿಸುವುದು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ. ನಮ್ಮ ದೇಶಕ್ಕೆ ಕೆಲಸ ಬೇಡುವವರಿಗಿಂತ ಕೆಲಸಗಳನ್ನು ಉತ್ಪಾದಿಸುವವರ ಅವಶ್ಯಕತೆ ಹೆಚ್ಚಿದೆ.

ಪ್ರಸಕ್ತ ಪರಿಸ್ಥಿತಿಯಲ್ಲಿ ವಾಣಿಜ್ಯ ವಿದ್ಯಾರ್ಥಿಗಳು ಇತರೆಲ್ಲರಿಗಿಂತ ಹೆಚ್ಚು ಅವಕಾಶಗಳನ್ನು ಹೊಂದಿದ್ದಾರೆ. ವಾಣಿಜ್ಯ ವಿಷಯದ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ, ಸ್ವ-ಉದ್ಯೋಗ. ವಾಣಿಜ್ಯ ವಿದ್ಯಾರ್ಥಿಯೊಬ್ಬ ಆಡಿಟರ್‌, ಕನ್ಸಲ್ಟಂಟ್‌, ಅಕೌಂಟೆಂಟ್‌, ಸ್ಟಾಕ್‌ ಮಾರ್ಕೆಟ್‌ ವಿಶ್ಲೇಷಕ ಅಥವಾ ಬ್ಯಾಂಕರ್‌ ಆಗಿ ಕೆಲಸವನ್ನು ಆಯ್ದುಕೊಳ್ಳಬಲ್ಲ. ತನ್ನ ಭವಿಷ್ಯದ ಈ ಹಾದಿಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಹಾಗೂ ಅರ್ಥ ಮಾಡಿಕೊಳ್ಳುವುದು ಆತನಿಗೆ ಸಾಧ್ಯವಾದರೆ, ಆತ/ ಆಕೆ ತಮ್ಮ ಮುಂದಿನ ಭವಿಷ್ಯವನ್ನು ಯೋಜಿಸಿಕೊಳ್ಳುವುದು ಸಾಧ್ಯವಾಗಲಿದೆ. ಕೇವಲ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯವಷ್ಟೇ ಅಲ್ಲ ಆಯ್ಕೆಗಳ ಭಂಡಾರವೇ ವಿದ್ಯಾರ್ಥಿಗಳ ಮುಂದೆ ತೆರೆದುಕೊಳ್ಳಲಿದೆ.

ವಿದ್ಯಾರ್ಥಿಗಳ ಧಾರಣಶಕ್ತಿ ಹಾಗೂ ಯೋಚನಾ ಪ್ರಕ್ರಿಯೆಗಳ ಮೇಲೆ ಡಿಜಿಟಲ್‌ ಯುಗ ಭಾರೀ ಬದಲಾವಣೆಗಳನ್ನು ಆಗಲೇ ತಂದಾಗಿದೆ. ಇವತ್ತಿನ 15 ವರ್ಷದ ಹುಡುಗ / ಹುಡುಗಿ ಹಿಂದಿನ ವರ್ಷಗಳ 25 ವರ್ಷದ ವಯಸ್ಕನಷ್ಟೇ ಪ್ರಬುದ್ಧತೆ ಹೊಂದಿರುತ್ತಾನೆ/ಳೆ.

ಆದ್ದರಿಂದ, ಸಾಮಾಜಿಕ ಅಧ್ಯಯನ ಹಾಗೂ ಗಣಿತದ ಜೊತೆಜೊತೆಯಲ್ಲಿ ವಾಣಿಜ್ಯವನ್ನೂ ಒಂದು ವಿಷಯವಾಗಿ ಸೇರ್ಪಡೆಗೊಳಿಸುವುದರಲ್ಲಿ ಸಂಪೂರ್ಣ ಅರ್ಥವಿದೆ.

ಆದರೆ, ಬದಲಾವಣೆ ಎಂಬುದು ಕೇವಲ ವಾಣಿಜ್ಯ ವಿಷಯದ ಸೇರ್ಪಡೆಗೆ ಮಾತ್ರ ಸೀಮಿತವಾಗಬಾರದು. ಸಂವಹನ ಹಾಗೂ ಬದುಕುವ ಕಲೆಗಳು ಪಠ್ಯಕ್ರಮದ ಭಾಗವಾಗಬೇಕು. ಈ ರೀತಿ, ವಿದ್ಯಾರ್ಥಿಗಳು ಉದ್ಯೋಗ ಕೌಶಲ್ಯಗಳ ಗಳಿಕೆಯ ಜೊತೆಜೊತೆಗೇ ತಮ್ಮ ಜ್ಞಾನ ದಾಹವನ್ನೂ ತಣಿಸಿಕೊಳ್ಳಲೂ ಸಾಧ್ಯವಾಗುತ್ತದೆ. ಪ್ರಾರಂಭದಲ್ಲಿಯೇ ಸೂಕ್ತ ಮಾರ್ಗದರ್ಶನದ ಮೂಲಕ, ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಅವರು ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಎನ್‌ಇಪಿ 2020 ಹೊಂದಿರುವ ಗುರಿ ಕೂಡಾ ಇದೇ ಆಗಿದೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.