ETV Bharat / bharat

ದೆಹಲಿಯಲ್ಲಿ ಕೊರೊನಾ ಲಸಿಕೆ ಸಂಗಹ್ರಕ್ಕೆ ಸಿದ್ಧವಾಗ್ತಿದೆ ಮೊದಲ ಕೋಲ್ಡ್ ಸ್ಟೋರೇಜ್ ಸೌಲಭ್ಯ! - ಕೊರೊನಾ ಲಸಿಕೆ ಸಂಗ್ರಹಿಸಲು ಕೋಲ್ಡ್ ಸ್ಟೋರೇಜ್

ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಸಂಗ್ರಹಿಸಲು ಈಗಾಗಲೇ ಕೋಲ್ಡ್​ ಸ್ಟೋರೇಜ್​ ಕೋಣೆಗಳು ರೆಡಿಯಾಗುತ್ತಿದ್ದು, ಒಮ್ಮೆ ಈ ಕೊಠಡಿಗಳು ಸಿದ್ಧವಾದ್ರೆ ಕೋವಿಡ್​ ವ್ಯಾಕ್ಸಿನ್​​ನ ಒಂದು ಕೋಟಿ ಡೋಸೇಜ್‌ಗಳನ್ನು ಸಂಗ್ರಹಿಸಬಹುದು.

First cold storage facility for coronavirus vaccine in Delhi
ಕೋಲ್ಡ್ ಸ್ಟೋರೇಜ್ ಸೌಲಭ್ಯ
author img

By

Published : Dec 22, 2020, 6:28 PM IST

ನವದೆಹಲಿ: ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಲಸಿಕೆಗಾಗಿ ಉತ್ತರ ಭಾರತದ ಮೊದಲ ಕೋಲ್ಡ್ ಸ್ಟೋರೇಜ್ ಕೋಣೆಗಳನ್ನು ಸ್ಥಾಪಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೋಲ್ಡ್ ಸ್ಟೋರೇಜ್ ಸೌಲಭ್ಯ

ಈಗಾಗಲೇ ಕೋಲ್ಡ್​ ಸ್ಟೋರೇಜ್​ ಸೌಲಭ್ಯ ಒದಗಿಸಲು ಬೇಕಾದ ಯಂತ್ರಗಳು ಆಸ್ಪತ್ರೆ ತಲುಪಲು ಪ್ರಾರಂಭಿಸಿವೆ ಮತ್ತು ಅದಕ್ಕಾಗಿ ಆಸ್ಪತ್ರೆಯಲ್ಲಿ ಮೀಸಲಾದ ಯುಟಿಲಿಟಿ ಬ್ಲಾಕ್​ಅನ್ನು ಬಳಸಲಾಗುತ್ತಿದೆ. ಕಟ್ಟಡದ ಎರಡು ಕೋಣೆಗಳಲ್ಲಿ ತಲಾ 120 ವ್ಯಾಟ್‌ಗಳ 90 ಡೀಪ್ ಫ್ರೀಜರ್‌ಗಳನ್ನು ಇಡಲಾಗುತ್ತಿದೆ. ಯಂತ್ರಗಳು 12/9 ಅಡಿ ಇವೆ. ಡಿಸೆಂಬರ್​ 25ರಂದು ಮತ್ತೆ ಈ ಯಂತ್ರಗಳು ಆಸ್ಪತ್ರೆಗೆ ಬರಲಿವೆ ಎಂದು ನಿರೀಕ್ಷಿಸಲಾಗಿದೆ.

ಆಸ್ಪತ್ರೆಯಲ್ಲಿ ಯಂತ್ರಗಳನ್ನು ಅಳವಡಿಸಲು ಬಹುತೇಕ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಒಮ್ಮೆ ವ್ಯವಸ್ಥಿತವಾಗಿ ತಯಾರಾದ ಈ ಕೋಲ್ಡ್ ಸ್ಟೋರೇಜ್ ಕೊಠಡಿಯಲ್ಲಿ ಕೊರೊನಾ ಲಸಿಕೆಯ ಒಂದು ಕೋಟಿ ಡೋಸೇಜ್‌ಗಳನ್ನು ಸಂಗ್ರಹಿಸಬಹುದು. ಕಟ್ಟಡವು ಏಳು ಮಹಡಿಗಳೊಂದಿಗೆ ಮೂರು ಮಹಡಿಗಳನ್ನು ಹೊಂದಿದೆ. ಕೋಲ್ಡ್ ಚೈನ್‌ಗೆ ಎರಡು ಕೊಠಡಿಗಳಿದ್ದರೆ, ಮೂರು ಕೊಠಡಿಗಳು ಆಳವಾದ ಫ್ರೀಜರ್‌ಗಳಿಗಾಗಿರುತ್ತವೆ. ಒಂದು ಕೊಠಡಿಯನ್ನು ಕಾರ್ಮಿಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಬಳಸುತ್ತಾರೆ.

ಮೊದಲ ಮಹಡಿಯಲ್ಲಿ ಎರಡು ಕೊಠಡಿಗಳು ಆಳವಾದ ಫ್ರೀಜರ್‌ಗಳನ್ನು ಹೊಂದಿರುತ್ತವೆ. ಹಾಗೂ 25 ಲಕ್ಷ ಸಿರೀಂಜ್​ಗಳನ್ನು ಸಂಗ್ರಹಿಸಲು ಈ ಕೊಠಡಿಗಳನ್ನು ಬಳಸಲಾಗುತ್ತದೆ. ಉಳಿದ ಕೊಠಡಿಗಳನ್ನು ಕಚೇರಿ ಸ್ಥಳಕ್ಕಾಗಿ ಬಳಸಲಾಗುತ್ತದೆ. ಉಳಿದ 75 ಲಕ್ಷ ಸಿರೀಂಜ್​ಗಳನ್ನು ಎರಡನೇ ಮಹಡಿಯಲ್ಲಿರುವ ಕೋಣೆಗಳಲ್ಲಿ ಇಡಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.