ಆದಿಲಾಬಾದ್( ತೆಲಂಗಾಣ): ಎರಡು ಗುಂಪುಗಳು ನಡು ಬೀದಿಯಲ್ಲೇ ಮಚ್ಚು, ಲಾಂಗ್ ಮತ್ತು ಗನ್ ಹಿಡಿದುಕೊಂಡು ಕಿತ್ತಾಡಿಕೊಂಡಿದ್ದು, ಈ ವೇಳೆ ಎಂಐಎಂ ಜಿಲ್ಲಾಧ್ಯಕ್ಷರೊಬ್ಬರು ಫೈರಿಂಗ್ ಮಾಡಿರುವ ಘಟನೆ ತಾಟಿಗೂಡ ನಗರದಲ್ಲಿ ನಡೆದಿದೆ.
ಹಳೇ ದ್ವೇಷದ ಹಿನ್ನೆಲೆ ಎಂಐಎಂ ಜಿಲ್ಲಾಧ್ಯಕ್ಷ ಫಾರೂಕ್ ಅಹ್ಮದ್ ಗುಂಪು ಮತ್ತು ಮನ್ನನ್ ಗುಂಪು ನಡು ಬೀದಿಯಲ್ಲೇ ಕಿತ್ತಾಡಿಕೊಂಡಿದೆ. ಈ ವೇಳೆ, ಫಾರೂಕ್ ಅಹ್ಮದ್, ಮನ್ನನ್ ಗುಂಪು ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡಿನ ದಾಳಿಯಲ್ಲಿ ಮನ್ನನ್ ಮತ್ತು ಆತನ ಮಕ್ಕಳಾದ ಮೋತೆಶಾನ್ ಮತ್ತು ಜಮೀರ್ಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆದಿಲಾಬಾದ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿ ಫಾರೂಕ್ ಸ್ಥಳದಿಂದ ಪರಾರಿಯಾಗಿದ್ದು, ಈ ಎರಡು ಗುಂಪಿನ ಜನ ಪರಸ್ಪರ ಸಂಬಂಧಿಗಳೆಂದು ಸ್ಥಳೀಯರು ಹೇಳಿದ್ದಾರೆ.
ಗುಂಡಿನ ದಾಳಿ ಕಂಡು ನಗರದ ಜನ ಕೊಂಚ ಭಯದಲ್ಲಿದ್ದು, ನಗರದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.