ETV Bharat / bharat

ಮೋದಿ ಜೀ, ಇದಿಷ್ಟು ಕೆಲ್ಸ ಮಾಡಿಕೊಡಿ... ಪ್ರಧಾನಿಗೆ ಸುಪ್ರೀಂ ಸಿಜೆಐ ಪತ್ರ

author img

By

Published : Jun 22, 2019, 3:27 PM IST

ಸುಪ್ರೀಂಕೋರ್ಟ್​ ಹಾಗೂ ಹೈಕೋರ್ಟ್​ಗಳಲ್ಲಿ 43 ಲಕ್ಷ ಕೇಸ್​ಗಳು ಇತ್ಯರ್ಥವಾಗದೇ ಹಾಗೆ ಉಳಿದಿವೆ. ಈ ಸಮಸ್ಯೆಗೆ ಬಗೆಹರಿಸಲು ಎರಡು ಸಂವಿಧಾನಾತ್ಮಕ ತಿದ್ದುಪಡಿಗಳ ಅಗತ್ಯವಿದೆ ಎಂದು ಮೂರು ಪತ್ರಗಳ ಮೂಲಕ ಸಿಜೆಐ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದಾರೆ.

PM Modi

ನವದೆಹಲಿ: ಸುಪ್ರೀಂಕೋರ್ಟ್​ ಹಾಗೂ ಹೈಕೋರ್ಟ್​ಗಳಲ್ಲಿ ಲಕ್ಷಾಂತರ ಪ್ರಕರಣಗಳು ಬಾಕಿ ಉಳಿದಿದ್ದು, ಇದರ ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಿಜೆಐ ರಂಜನ್ ಗೊಗೊಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಕೋರ್ಟ್​ಗಳಲ್ಲಿ 43 ಲಕ್ಷ ಕೇಸ್​ಗಳು ಇತ್ಯರ್ಥವಾಗದೇ , ಹಾಗೆ ಉಳಿದಿವೆ. ಈ ಸಮಸ್ಯೆ ಬಗೆಹರಿಸಲು ಎರಡು ಸಂವಿಧಾನಾತ್ಮಕ ತಿದ್ದುಪಡಿಗಳ ಅಗತ್ಯವಿದೆ ಎಂದು ಮೂರು ಪತ್ರಗಳ ಮೂಲಕ ಸಿಜೆಐ ವಿವರಿಸಿದ್ದಾರೆ.

ಪ್ರಸ್ತುತ ಸುಪ್ರೀಂಕೋರ್ಟ್​ನಲ್ಲಿರುವ 31 ನ್ಯಾಯಾಧೀಶರ ಸಂಖ್ಯೆ ಹೆಚ್ಚಬೇಕು. ಹೈಕೋರ್ಟ್​ ನ್ಯಾಯಮೂರ್ತಿ ನಿವೃತ್ತಿ ವಯೋಮಾನವನ್ನು 62 ರಿಂದ 65ಕ್ಕೆ ಏರಿಕೆ ಮಾಡಬೇಕು. ವಿಧಿ 128 ಹಾಗೂ 224'ಎ' ನಂತೆ ಸುಪ್ರೀಂ ಹಾಗೂ ಹೈ ಕೋರ್ಟ್​ಗಳ ನಿವೃತ್ತ ನ್ಯಾಯಾಧೀಶರನ್ನು ಮತ್ತೆ ನೇಮಕ ಮಾಡಿಕೊಂಡು, ಅವರ ಅವಧಿಯಲ್ಲಿ ಬಾಕಿ ಉಳಿದ ಕೇಸ್​ಗಳನ್ನು ಇತ್ಯರ್ಥ ಮಾಡಿಸಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.

25 ವರ್ಷದಿಂದ 26, 20 ವರ್ಷದಿಂದ 100, 15 ವರ್ಷದಿಂದ 593 ಹಾಗೂ 10 ವರ್ಷದಿಂದ 4,977 ಕೇಸ್​ಗಳು ಸುಪ್ರೀಂಕೋರ್ಟ್​ನಲ್ಲಿ ಹಾಗಿಯೇ ಉಳಿದಿವೆ. ಸುಪ್ರೀಂ ಹಾಗೂ ಹೈಕೋರ್ಟ್​ಗಳಲ್ಲಿ ನ್ಯಾಯಾಧೀಶರ ಪ್ರಮಾಣ ಏರಿಕೆಯಾಗಿದ್ದರೂ ಲಕ್ಷಾಂತರ ಕೇಸ್​ಗಳು ಇತ್ಯರ್ಥವಾಗ್ತಿಲ್ಲ ಎಂದಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.