ETV Bharat / state

ಬೆಂಗಳೂರು: 85 ಸಾವಿರ ರೂಪಾಯಿಗೆ ಸ್ನೇಹಿತನ ಹತ್ಯೆ - Nelamangala Murder Case - NELAMANGALA MURDER CASE

ನೆಲಮಂಗಲದಲ್ಲಿ ಕಾರ್ಮಿಕ ಸ್ನೇಹಿತರಿಬ್ಬರ ಮಧ್ಯೆ ಹಣಕ್ಕಾಗಿ ನಡೆದ ಜಗಳ ಓರ್ವನ ಕೊಲೆಯಲ್ಲಿ ಕೊನೆಗೊಂಡಿದೆ.

85 ಸಾವಿರ ಹಣಕ್ಕಾಗಿ ದೊಣ್ಣೆಯಿಂದ ಹಲ್ಲೆಗೈದು ಸ್ನೇಹಿತನ ಕೊಲೆ
ಪೊಲೀಸರಿಂದ ಘಟನಾ ಸ್ಥಳದ ಪರಿಶೀಲನೆ (ETV Bharat)
author img

By ETV Bharat Karnataka Team

Published : Sep 29, 2024, 7:13 AM IST

ಬೆಂಗಳೂರು: 85 ಸಾವಿರ ರೂಪಾಯಿ ಹಣದ ವಿಚಾರಕ್ಕೆ ಗಲಾಟೆ ನಡೆದು ವ್ಯಕ್ತಿಯೋರ್ವ ದೊಣ್ಣೆಯಿಂದ ಹಲ್ಲೆ ನಡೆಸಿ ಸ್ನೇಹಿತನ ಹತ್ಯೆಗೈದ ಘಟನೆ ನೆಲಮಂಗಲದ ಮಹಿಮಾಪುರದ ಕಾರ್ಮಿಕರ ಶೆಡ್​ ಶನಿವಾರ ನಡೆದಿದೆ. ರಾಜೀವ್ ಗಾಂಧಿ ಪೆರುಮಾಳ್ (40) ಕೊಲೆಯಾದವರು. ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜೀವ್ ಗಾಂಧಿ ಪೆರುಮಾಳ್​​​ ಮತ್ತು ಆರೋಪಿ ಇಬ್ಬರೂ ತಮಿಳುನಾಡಿನ ಸೇಲಂನವರು. ಸ್ನೇಹಿತರಾಗಿದ್ದ ಇವರು ಒಂದೇ ರೂಂ​ನಲ್ಲಿ ವಾಸವಾಗಿದ್ದರು. ಆದರೆ ಹಣದ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಕೋಪದಲ್ಲಿ ಆರೋಪಿ ದೊಣ್ಣೆಯಿಂದ ರಾಜೀವ್​​ ಗಾಂಧಿ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ರಾಜೀವ್ ಗಾಂಧಿಯನ್ನು ಆಸ್ಪತ್ರೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಘಟನೆಯ ಕುರಿತು ಎಸ್ಪಿ ಸಿ.ಕೆ.ಬಾಬಾ ಮಾಹಿತಿ (ETV Bharat)

ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ, ಎಎಸ್ಪಿ ನಾಗೇಶ್, ಡಿವೈಎಸ್ಪಿ ರವಿ, ಪಿಐ ನರೇಂದ್ರ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಬಾಗಲಕೋಟೆ: ಪೊಲೀಸ್​ ಹೆಸರಲ್ಲಿ ಸ್ವಾಮೀಜಿಗೆ ಬ್ಲಾಕ್​ಮೇಲ್, ಹಣ ಸುಲಿಗೆ: ಆರೋಪಿ ಬಂಧನ - Extortion Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.