How to Make Flattened rice Chakli Recipe: ಟಿಫನ್ ಮಾಡಲು ಹೆಚ್ಚು ಸಮಯವಿಲ್ಲದಿದ್ದಾಗ.. ಜನರು ಸೂಪರ್ ಸ್ನಾಕ್ಸ್ ಆದ ಅವಲಕ್ಕಿ ಚಕ್ಲಿ ತಯಾರಿಸಬಹುದು. ಈ ಚಕ್ಲಿಗಳನ್ನು ಇಡ್ಲಿ, ದೋಸೆ ಮತ್ತು ಇತರ ಉಪಹಾರಗಳ ಜೊತೆಗೆ ಸವಿಯಬಹುದು. ಅಕ್ಕಿ ಹಿಟ್ಟಿನಿಂದ ಸೂಪರ್ ಕ್ರಿಸ್ಪಿಯಾಗಿ ಚಕ್ಲಿಗಳನ್ನು ಮಾಡಬಹುದು ಎಂದು ನಿಮಗೆ ಗೊತ್ತಾ? ಒಮ್ಮೆ ಈ ಚಕ್ಲಿ ಸವಿದರೆ ಮತ್ತೆ ಮತ್ತೆ ತಿನ್ನ ಬೇಕು ಅನಿಸುತ್ತದೆ. ಈ ಚಕ್ಲಿಗಳ ರುಚಿಯು ಅದ್ಭುತವಾಗಿರುತ್ತದೆ. ಮಕ್ಕಳು ಈ ಚಕ್ಲಿಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಹಾಗಾದರೆ ಮತ್ತೇಕೆ ತಡ ಸೂಪರ್ ಟೇಸ್ಟಿ ತಿಂಡಿಯಾದ ಅವಲಕ್ಕಿ ಚಕ್ಲಿ ಮಾಡುವುದು ಹೇಗೆ ಕಲಿಯೋಣ.
ಅವಲಕ್ಕಿ ಚಕ್ಲಿ ಬೇಕಾಗುವ ಪದಾರ್ಥಗಳು:
- ಅವಲಕ್ಕಿ - ಒಂದು ಕಪ್
- ಪುಟಾಣಿ- ಅರ್ಧ ಕಪ್
- ಅಕ್ಕಿ ಹಿಟ್ಟು - ಒಂದು ಕಪ್
- ಜೀರಿಗೆ- ಒಂದು ಟೀಚಮಚ
- ಬಿಳಿ ಎಳ್ಳು - ಒಂದು ಟೀಸ್ಪೂನ್
- ಕಪ್ಪು ಎಳ್ಳು - ಒಂದು ಟೀಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ಒಂದು ಚಿಟಿಕೆ ಕಾಳುಮೆಣಸಿನ ಪುಡಿ
- ಎಣ್ಣೆ - ಕರಿಯಲು ಬೇಕಾದಷ್ಟು
- ಉಪ್ಪುರಹಿತ ಬೆಣ್ಣೆ- ಒಂದು ಚಮಚ
ಅವಲಕ್ಕಿ ಚಕ್ಲಿ ತಯಾರಿಸುವ ವಿಧಾನ:
- ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು ಅವಲಕ್ಕಿ ಮತ್ತು ಪುಟಾಣಿ ಹಾಕಿ ಸ್ವಲ್ಪ ಫ್ರೈ ಮಾಡಿ.
- ಈ ಮಿಶ್ರಣ ತಣ್ಣಗಾದ ನಂತರ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದನ್ನು ಒಣಗಿಸಿ ಮತ್ತು ಪಕ್ಕಕ್ಕೆ ಇರಿಸಿ.
- ಈಗ ಚಕ್ಲಿಗಾಗಿ ಹಿಟ್ಟು ಕಲಸುವುದಕ್ಕೆ.. ಒಂದು ಬಟ್ಟಲಿನಲ್ಲಿ ಅಕ್ಕಿ ಹಿಟ್ಟು ತೆಗೆದುಕೊಳ್ಳಿ. ಬಿಳಿ, ಕಪ್ಪು ಎಳ್ಳು, ಜೀರಿಗೆ, ಕಾಳುಮೆಣಸಿನ ಪುಡಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ. ಬೆಣ್ಣೆಯನ್ನು ಸಹ ಸೇರಿಸಿ ಮತ್ತು ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮಲ್ಲಿ ಬೆಣ್ಣೆ ಇಲ್ಲದಿದ್ದರೆ ತುಪ್ಪವನ್ನು ಬಿಸಿ ಮಾಡಿ ಬಳಸಬಹುದು.
- ಈ ಮಿಶ್ರಣದಲ್ಲಿ ನೀರನ್ನು ಸ್ವಲ್ಪವೇ ಮಾತ್ರ ಸುರಿಯಿರಿ, ಹಿಟ್ಟನ್ನು ತುಂಬಾ ಮೃದುವಾಗುವವರೆಗೆ ಮಿಶ್ರಣ ಮಾಡಿ.
- ಈಗ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಡೀಪ್ ಫ್ರೈಗೆ ಬೇಕಾದಷ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುವ ಮೊದಲು ಚಕ್ಲಿ ತಯಾರಿಸುವ ಯಂತ್ರದೊಳಗೆ ಸ್ವಲ್ಪ ಎಣ್ಣೆಯನ್ನು ಹಚ್ಚಬೇಕು.
- ನಂತರ ತಯಾರಿಸಿದ ಹಿಟ್ಟಿನಿಂದ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಚಕ್ಲಿ ಕೊಳವೆಯಲ್ಲಿ ತೆಗೆದುಕೊಳ್ಳಿ.
- ಚಕ್ಲಿ ಹಿಟ್ಟನ್ನು ಕಾದ ಎಣ್ಣೆಯಲ್ಲಿ ನಿಮಗೆ ಬೇಕಾದ ಆಕಾರಕ್ಕೆ ಸುತ್ತಿಕೊಳ್ಳಿ
- ಇಲ್ಲವಾದರೆ.. ನೀವು ರಂದ್ರದ ಸೌಟು ತೆಗೆದುಕೊಂಡು ಅದರ ಮೇಲೆ ಹಿಟ್ಟನ್ನು ಬೇಕಾದ ಆಕಾರದಲ್ಲಿ ಸುತ್ತಿಕೊಳ್ಳಿ ಮತ್ತು ನಂತರ ಅವುಗಳನ್ನು ಅಡುಗೆ ಎಣ್ಣೆಯಲ್ಲಿ ಕರಿಯಬಹುದು.
- ಚಕ್ಲಿಯನ್ನು ಕೆಸರಿ ಬಣ್ಣ ಬರುವವರೆಗೆ ಎರಡೂ ಬದಿಗಳಲ್ಲಿ ಫ್ರೈ ಮಾಡಿ ಮತ್ತು ತಟ್ಟೆಯಲ್ಲಿ ತೆಗೆದುಕೊಳ್ಳಿ. ಎಲ್ಲಾ ಹಿಟ್ಟಿನಿಂದ ಇದೇ ರೀತಿ ಚಕ್ಲಿಯನ್ನು ತಯಾರಿಸಿ.
- ಹೀಗೆ ಸರಳವಾಗಿ ಮಾಡಿದರೆ ಗರಿಗರಿಯಾದ ಚಕ್ಲಿಗಳು ಸವಿಯಲು ಸಿದ್ಧವಾಗುತ್ತದೆ. ನಿಮಗೆ ಇಷ್ಟವಾದರೆ ಒಮ್ಮೆ ಟ್ರೈಮಾಡಿ ನೋಡಬಹುದು.