ನವದೆಹಲಿ: ಕಳೆದ ಏಳು ತಿಂಗಳ ನಂತರ ಸಿನಿಮಾ ಹಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಇಂದು ದೇಶದ ಹಲವಾರು ಭಾಗಗಳಲ್ಲಿ ಪುನಾರಂಭವಾಗಲಿದ್ದು, ಸರ್ಕಾರದ ನಿಯಮದಂತೆ ಶೇ. 50ರಷ್ಟು ಪ್ರೇಕ್ಷಕರಿಗೆ ಸಿನಿಮಾ ಹಾಲ್ಗಳಲ್ಲಿ ಅವಕಾಶವಿದೆ.
ಘಾಜಿಯಾಬಾದ್, ಗುರುಗ್ರಾಮ್, ಚೆನ್ನೈ ಮತ್ತು ದೆಹಲಿಯಂತಹ ನಗರಗಳಲ್ಲಿನ ಸಿನಿಮಾ ಹಾಲ್ ಮಾಲೀಕರು ಚಿತ್ರಮಂದಿರಗಳ ಸ್ವಚ್ಛತೆ, ಸಾಮಾಜಿಕ ದೂರ, ಕಾಗದರಹಿತ ಟಿಕೆಟ್ ಮತ್ತು ಚಿತ್ರಮಂದಿರಗಳಲ್ಲಿ ಶೇ 50 ರಷ್ಟು ಪ್ರೇಕ್ಷಕರಿಗೆ ಅವಕಾಶ ಸೇರಿದಂತೆ ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಮೂಲಕ ತಮ್ಮ ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿವೆ.
ಗ್ಲೋಬಲ್ ಸಿನಿಮಾ ಫೆಡರೇಶನ್ (ಜಿಸಿಎಫ್) ವ್ಯಾಖ್ಯಾನಿಸಿರುವ ಜಾಗತಿಕ ಮಾನದಂಡಗಳ ಜೊತೆಗೆ ಗೃಹ ಇಲಾಖೆ ಘೋಷಿಸಿದ ಸುರಕ್ಷತಾ ಮಾರ್ಗಸೂಚಿಗಳನ್ನು ಚಿತ್ರಮಂದಿರಗಳು ಅನುಸರಿಸುತ್ತವೆ ಎಂದು ದೆಹಲಿ ಪಿವಿಆರ್ ಸಿನೆಮಾಸ್‌ನ ಪ್ರಾದೇಶಿಕ ಮುಖ್ಯಸ್ಥ ಗಗನ್ ಕಪೂರ್ ಹೇಳಿದ್ದಾರೆ.
ಸಿನಿಮಾ ಹಾಲ್ ಹೊರಗೆ, ಸಾಮಾಜಿಕ ಅಂತರದ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಫುಡ್ ಗ್ಯಾಲರಿಗೆ ಪ್ರವೇಶಿಸುವ ಪ್ರೇಕ್ಷಕರಿಗೆ ಮಾಸ್ಕ್ ವ್ಯವಸ್ಥೆ ಸಹ ಮಾಡಲಾಗಿದೆ. ಒಳಬರುವ ಎಲ್ಲ ಪ್ರೇಕ್ಷಕರು ತಮ್ಮ ಮೊಬೈಲ್‌ನಲ್ಲಿ 'ಆರೋಗ್ಯ ಸೇತು' ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಗೃಹ ಇಲಾಖೆ ಮಾರ್ಗಸೂಚಿಗಳ ಪ್ರಕಾರ, ಜನರ ಸುರಕ್ಷತೆಗಾಗಿ ಸಿನಿಮಾ ಹಾಲ್‌ಗಳ ಒಳಗೆ ಏಸಿ ತಾಪಮಾನವು 24 ಡಿಗ್ರಿಗಳಿಂದ 30 ಡಿಗ್ರಿಗಳ ನಡುವೆ ಇರಬೇಕು.
"ಚಲನಚಿತ್ರ ಪ್ರದರ್ಶನಕ್ಕಾಗಿ ನಮ್ಮ ಸಿದ್ಧತೆಗಳು ಉತ್ತಮವಾಗಿವೆ. ಕಳೆದ ಏಳು ತಿಂಗಳಿಂದ ನಾವು ಇದಕ್ಕಾಗಿ ತಯಾರಿ ನಡೆಸುತ್ತಿದ್ದೇವೆ. ಕೋವಿಡ್-19 ಮಧ್ಯೆ ನಮ್ಮ ಗ್ರಾಹಕರಿಗೆ ಸುರಕ್ಷಿತ ಚಲನಚಿತ್ರ ಅನುಭವವನ್ನು ನೀಡುವ ಗುರಿ ಹೊಂದಿದ್ದೇವೆ" ಎಂದು ಮಿರಾಜ್ ಸಿನೆಮಾಸ್‌ನ ಪ್ರಾದೇಶಿಕ ಕಾರ್ಯಾಚರಣೆಯ ಮುಖ್ಯಸ್ಥ ಸಂಜಯ್ ಬರ್ಜತ್ಯ ಹೇಳಿದ್ದಾರೆ.
ಅಕ್ಟೋಬರ್ 15 ರಿಂದ ಮಲ್ಟಿಪ್ಲೆಕ್ಸ್‌ಗಳು, ಸಿನಿಮಾ ಹಾಲ್‌ಗಳು ಮತ್ತು ಚಿತ್ರಮಂದಿರಗಳನ್ನು ಮತ್ತೆ ತೆರೆಯಲು ಕೇಂದ್ರ ಸರ್ಕಾರ ಕೆಲ ಷರತ್ತುಗಳನ್ನು ವಿಧಿಸಿ ಅವಕಾಶ ನೀಡಿತು. ಈ ವಿಷಯದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ರಾಜ್ಯಗಳಿಗೆ ಬಿಟ್ಟಿದ್ದು ಎಂದು ಕೇಂದ್ರ ಗೃಹ ಇಲಾಖೆ ಹೇಳಿತ್ತು.