ETV Bharat / bharat

ಮೆಗಾಸ್ಟಾರ್ ವಿಚಿತ್ರ ಲುಕ್​ಗೆ ಅಭಿಮಾನಿಗಳು ಫಿದಾ: 'ನಾನು ನೋಡ್ತಿರೋದು ನಿಜಾನಾ' ಎಂದ ಚರಣ್​​​! - ಟಾಲಿವುಡ್

ಇನ್ಸ್​ಟಾಗ್ರಾಂನಲ್ಲಿ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಹೊಸ ಲುಕ್​ನಲ್ಲಿರುವ ಭಾವಚಿತ್ರವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ.

Chiranjeevi
ಚಿರಂಜೀವಿ
author img

By

Published : Sep 11, 2020, 12:38 PM IST

ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇನ್ಸ್​ಟಾಗ್ರಾಂನಲ್ಲಿ ಹೊಸ ಲುಕ್​ನಲ್ಲಿರುವ ಭಾವಚಿತ್ರವೊಂದನ್ನು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ.

ತಲೆ ಬೋಳಿಸಿಕೊಂಡಂತಿರುವ ಚಿತ್ರವನ್ನು ಹಂಚಿಕೊಂಡಿರುವ ಅವರು, ಅರ್ಬನ್ ಮೋಂಕ್ (ನಗರ ಸನ್ಯಾಸಿ) ಮತ್ತು ಕೆನ್ ಐ ಥಿಂಕ್ ಲೈಕ್ ಎ ಮೋಂಕ್..? (ನಾನು ಸನ್ಯಾಸಿಯಂತೆ ಯೋಚಿಸಬಲ್ಲನೇ..?) ಎಂದು ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿರಂಜೀವಿ ಪುತ್ರ, ಮೆಗಾ ಪವರ್​​​ಸ್ಟಾರ್ ರಾಮ್​ ಚರಣ್, ಅಪ್ಪ ನಾನು ನೋಡುತ್ತಿರುವುದು ನಿಜವಾ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು ಬಾಸ್ ಅಂದ್ರೆ ಯಾವಾಗಲೂ ಬಾಸ್ ಎಂದು ಕಮೆಂಟ್ ಮಾಡಿದ್ದಾರೆ.

ಸದ್ಯಕ್ಕೆ ಈ ಪೋಸ್ಟ್​​​ಅನ್ನು ವಿಶ್ಲೇಷಣೆ ಮಾಡಿರುವ ಕೆಲವು ಸಿನಿ ಪ್ರಿಯರು, ಇದು ಹೊಸ ಸಿನಿಮಾಗೆ ಹೊಸ ಲುಕ್ ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಸುಮ್ಮನೆ ಇದ್ದಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿಯವರೆಗೆ ಚಿರಂಜೀವಿ ಹೊಸ ಲುಕ್​ಗೆ ಕಾರಣವೇನೆಂಬುದು ಬಹಿರಂಗವಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.