ETV Bharat / bharat

ಲಡಾಖ್​ನಲ್ಲಿ ಎಸಗಿದ ದುಷ್ಕೃತ್ಯಕ್ಕೆ ಚೀನಾ ಇಂದು ಅನಿರೀಕ್ಷಿತ ಪರಿಣಾಮ ಎದುರಿಸುತ್ತಿದೆ: ಬಿಪಿನ್​ ರಾವತ್

ರಾಷ್ಟ್ರೀಯ ರಕ್ಷಣಾ ಕಾಲೇಜಿನ ವಜ್ರಮಹೋತ್ಸವ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಿಡಿಎಸ್​ ಬಿಪಿನ್​ ರಾವತ್, ಚೀನಾ ಹಾಗೂ ಪಾಕಿಸ್ತಾನಿ ಸೇನೆ ತನ್ನ ಕೃತ್ಯಗಳಿಗೆ ಇಂದು ಹಾಗೂ ಭವಿಷ್ಯದಲ್ಲಿ ಅನುಭವಿಸುವ ವ್ಯತಿರಿಕ್ತ ಪರಿಣಾಮಗಳ ಕುರಿತು ಹೇಳಿದ್ದಾರೆ.

CDS
ಸಿಡಿಎಸ್​ ಬಿಪಿನ್​ ರಾವತ್
author img

By

Published : Nov 6, 2020, 12:54 PM IST

ನವದೆಹಲಿ: ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಲಡಾಖ್​ನಲ್ಲಿ ಎಸಗಿದ ದುಷ್ಕೃತ್ಯಕ್ಕೆ ಭಾರತೀಯ ಪಡೆ ನೀಡಿದ ಪ್ರತ್ಯುತ್ತರದಿಂದಾಗಿ ಅನಿರೀಕ್ಷಿತ ಪರಿಣಾಮಗಳನ್ನು ಎದುರಿಸುತ್ತಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್​) ಜನರಲ್​ ಬಿಪಿನ್​ ರಾವತ್ ಹೇಳಿದ್ದಾರೆ.

ರಾಷ್ಟ್ರೀಯ ರಕ್ಷಣಾ ಕಾಲೇಜಿನ ವಜ್ರಮಹೋತ್ಸವ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ರಾವತ್, ಪೂರ್ವ ಲಡಾಖ್​​ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಭಾರತ - ಚೀನಾ ಸೇನೆ ನಡುವೆ ಪರಿಸ್ಥಿತಿ ಉದ್ವಿಗ್ನವಾಗಿದೆ. ನಾವು ಎಲ್‌ಎಸಿನಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುತ್ತೇವೆ. ಸಂಘರ್ಷವನ್ನು ದೊಡ್ಡದಾಗಲು ನಾವು ಬಿಡುವುದಿಲ್ಲ. ಈಗಾಗಲೇ ಪೀಪಲ್ಸ್ ಲಿಬರೇಶನ್ ಆರ್ಮಿ ಲಡಾಖ್​ನಲ್ಲಿ ಎಸಗಿದ ದುಷ್ಕೃತ್ಯಕ್ಕೆ ಪರಿಣಾಮಗಳನ್ನು ಎದುರಿಸುತ್ತಿದೆ ಎಂದರು.

ಭಾರತವು ಎತ್ತರಕ್ಕೆ ಬೆಳೆದಂತೆ, ಭದ್ರತಾ ಸವಾಲುಗಳು ಕೂಡ ಹೆಚ್ಚುತ್ತಿವೆ. ನಿರ್ಬಂಧಗಳ ಬೆದರಿಕೆ ಹಾಗೂ ಇತರ ರಾಷ್ಟ್ರಗಳ ಮೇಲಿನ ಅವಲಂಬನೆಯಿಂದ ಹೊರಬರಬೇಕು. ಸವಾಲುಗಳನ್ನು ಎದುರಿಸಲು ಸೇನಾ ಶಕ್ತಿಯನ್ನು ಬಲಪಡಿಸಿಕೊಳ್ಳಬೇಕು. ಮುಂಬರುವ ವರ್ಷಗಳಲ್ಲಿ ನಮ್ಮ ರಕ್ಷಣಾ ಕ್ಷೇತ್ರ ಬಹಳ ಎತ್ತರಕ್ಕೆ ತಲುಪಲಿದೆ. ಭಾರತದಲ್ಲೇ ಸಂಪೂರ್ಣವಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತಯಾರು ಮಾಡಲಾಗುವುದು ಎಂದು ಬಿಪಿನ್​ ರಾವತ್ ಭರವಸೆ ನೀಡಿದರು.

ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರ ಬಿಂದುವಾಗಿ ಮುಂದುವರೆದಿದೆ. ಕಳೆದ ಮೂರು ದಶಕಗಳಿಂದ, ಪಾಕ್​ ಪಡೆ ಮತ್ತು ಅದರ ಗುಪ್ತಚರ ಸಂಸ್ಥೆಯಾದ ಐಎಸ್‌ಐ (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾಕ್ಸಿ ಯುದ್ಧ (ಪರೋಕ್ಷ ಯುದ್ಧ) ವನ್ನು ನಡೆಸುತ್ತಾ ಬಂದಿದೆ. ಪಾಕಿಸ್ತಾನದ ಪ್ರಸ್ತುತ ಆರ್ಥಿಕ ಬಿಕ್ಕಟ್ಟು, ಹಣಕಾಸು ಕ್ರಿಯಾ ಕಾರ್ಯಪಡೆ (FATF)ಯ ಬೂದು ಪಟ್ಟಿಯಿಂದ ಹೊರಬರಲು ಅದರ ಅಸಮರ್ಥತೆ, ಹೆಚ್ಚುತ್ತಿರುವ ಧಾರ್ಮಿಕ ಮತ್ತು ಜನಾಂಗೀಯ ಮೂಲಭೂತವಾದ - ಇವುಗಳು ಭವಿಷ್ಯದಲ್ಲಿ ಪಾಕಿಸ್ತಾನವನ್ನು ಇನ್ನಷ್ಟು ಅಸ್ಥಿರತೆಯತ್ತ ತಳ್ಳುತ್ತವೆ ಎಂದು ಇದೇ ವೇಳೆ ರಾವತ್​ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.