ETV Bharat / bharat

ಗಡಿ ಸಂಘರ್ಷ: ಚೀನಾದ ನಡೆ ಗಡಿ ನಿರ್ವಹಣೆಯ ಮೇಲೆ ದೀರ್ಘ ಪರಿಣಾಮ! - ಲಡಾಖ್ ಗಡಿ ವಿವಾದ ಇತ್ತೀಚಿನ ಸುದ್ದಿ

1962 ರ ನಂತರ ಭಾರತ ಮತ್ತು ಚೀನಾ ಮಧ್ಯೆ ಈಗ ನಡೆದಿರುವುದು ಅತ್ಯಂತ ದೊಡ್ಡ ವಿಪತ್ತು. ಇದು ಎರಡೂ ದೇಶಗಳ ಮಧ್ಯದ ಸಂಬಂಧದ ಮೇಲೆ ದೀರ್ಘಕಾಲೀನ ಪರಿಣಾಮವನ್ನು ಉಂಟು ಮಾಡಬಹುದು. ಸಮಸ್ಯೆಯ ಮೂಲ, ಈ ಪ್ರದೇಶದ ಭೌಗೋಳಿಕತೆ ಮತ್ತು ಹೇಗೆ ಎರಡೂ ದೇಶಗಳ ಮಧ್ಯೆ ಸಂಘರ್ಷವನ್ನು ನಿಭಾಯಿಸಬಹುದಾಗಿತ್ತು ಎಂಬುದರ ಬಗ್ಗೆ ನಾರ್ದರ್ನ್‌ ಕಮಾಂಡ್‌ನ ನಿವೃತ್ತ ಮುಖ್ಯಸ್ಥ ಲೆ. ಜ. ಡಿ ಎಸ್ ಹೂಡಾ ವಿವರಿಸಿದ್ದಾರೆ.

chinas-move-makes-long-term-impact-on-border-issue
ಭಾರತ ಮತ್ತು ಚೀನಾ ಮಧ್ಯೆ ಈಗ ನಡೆದಿರುವುದು ಅತ್ಯಂತ ದೊಡ್ಡ ವಿಪತ್ತು
author img

By

Published : Jun 22, 2020, 11:23 AM IST

ಕಮಾಂಡಿಂಗ್ ಆಫೀಸರ್ ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದು, ಲಡಾಖ್‌ನಲ್ಲಿನ ವಾಸ್ತವ ಗಡಿ ರೇಖೆಯಲ್ಲಿನ (ಎಲ್‌ಎಸಿ) ಪರಿಸ್ಥಿತಿಯ ಬಗ್ಗೆ ಗಾಂಭೀರ್ಯತೆ ಮೂಡಿಸಿದೆ. 1962 ರ ನಂತರ ಭಾರತ ಮತ್ತು ಚೀನಾ ಮಧ್ಯೆ ಇದು ಅತ್ಯಂತ ದೊಡ್ಡ ವಿಪತ್ತು. ಇದು ಎರಡೂ ದೇಶಗಳ ಮಧ್ಯದ ಸಂಬಂಧದ ಮೇಲೆ ದೀರ್ಘಕಾಲೀನ ಪರಿಣಾಮವನ್ನು ಉಂಟು ಮಾಡಬಹುದು. ಸಮಸ್ಯೆಯ ಮೂಲ, ಈ ಪ್ರದೇಶದ ಭೌಗೋಳಿಕತೆ ಮತ್ತು ಹೇಗೆ ಎರಡೂ ದೇಶಗಳ ಮಧ್ಯೆ ಸಂಘರ್ಷವನ್ನು ನಿಭಾಯಿಸಬಹುದಾಗಿತ್ತು ಎಂಬ ಬಗ್ಗೆ ತಿಳಿದುಕೊಳ್ಳುವ ಬಯಕೆ ಜನಸಾಮಾನ್ಯರಲ್ಲಿದೆ. ಈ ವಿಷಯಗಳನ್ನು ನಾನು ನನ್ನ ದೃಷ್ಟಿಕೋನದಲ್ಲಿ ವಿವರಿಸಲು ಬಯಸಿದ್ದೇನೆ.

ಎಲ್‌ಎಸಿ ಎಂದರೆ?

1962 ರ ಯುದ್ಧದಲ್ಲಿ ಲಡಾಖ್‌ನ ಪಶ್ಚಿಮ ಭಾಗದಲ್ಲಿ 38 ಸಾವಿರ ಚದರ್​ ಕಿ.ಮೀ. ಪ್ರದೇಶವನ್ನು ಚೀನಾ ಸೇನೆ ವಶಪಡಿಸಿಕೊಂಡಿದೆ. ಭಾರತೀಯ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದ್ದರಿಂದಾಗಿ ಉಂಟಾದ ಗಡಿಯನ್ನು ಎಲ್‌ಎಸಿ ಎಂದು ಕರೆಯಲಾಯಿತು. ಈ ಎಲ್‌ಎಸಿಯನ್ನು ನಕ್ಷೆಯಲ್ಲಿ ಗುರುತು ಮಾಡಿಲ್ಲ ಅಥವಾ ಭೂಮಿಯ ಮೇಲೆಯೂ ಗುರುತು ಮಾಡಿಲ್ಲ. ಎರಡೂ ದೇಶಗಳೂ ಕೆಲವು ಭಾಗಗಳಲ್ಲಿ ಎಲ್‌ಎಸಿ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿವೆ.

ಭಾರತ ಮತ್ತು ಚೀನಾದ ಸೇನೆಗಳೆರಡೂ ಎಲ್‌ಎಸಿಯಲ್ಲಿ ತಮ್ಮ ದೃಷ್ಟಿಕೋನದಂತೆ ಗಸ್ತು ಹೊಂದಿವೆ. ಇನ್ನು, ಭಿನ್ನಾಭಿಪ್ರಾಯಗಳಿರುವ ಪ್ರದೇಶದಲ್ಲಿ ಎರಡೂ ದೇಶಗಳ ಸೇನೆಯು ಗಸ್ತು ವೇಳೆ ಮುಖಾಮುಖಿಯಾಗುತ್ತವೆ. ಈ ಮುಖಾಮುಖಿಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು, ಹಲವು ಒಪ್ಪಂದಗಳು ಮತ್ತು ಶಿಷ್ಟಾಚಾರಗಳಿವೆ. ಇವುಗಳನ್ನು ಎರಡೂ ದೇಶದ ಯೋಧರು ಅನುಸರಿಸುತ್ತಾರೆ. ಉದಾಹರಣೆಗೆ, 2013 ರ ಗಡಿ ರಕ್ಷಣೆ ಸಹಕಾರ ಒಪ್ಪಂದದ ನಿಬಂಧನೆ 8ರ ಪ್ರಕಾರ:

“ವಾಸ್ತವ ಗಡಿ ನಿಯಂತ್ರಣ ರೇಖೆಯ ಬಗ್ಗೆ ಸ್ಪಷ್ಟ ತಿಳುವಳಿಕೆ ಇಲ್ಲದ ಪ್ರದೇಶದಲ್ಲಿ ಎರಡೂ ದೇಶದ ಗಡಿ ರಕ್ಷಣಾ ಪಡೆಗಳು ಮುಖಾಮುಖಿಯಾದಾಗ, ಎರಡೂ ಪಡೆಗಳು ಗರಿಷ್ಠ ಸ್ವಯಂ ಪ್ರತಿಬಂಧಕವನ್ನು ಅನುಸರಿಸಬೇಕು, ಯಾವುದೇ ಪ್ರಚೋದನಾತ್ಮಕ ಕ್ರಮಗಳಿಂದ ದೂರವಿರಬೇಕು, ಇನ್ನೊಂದು ಕಡೆಯವರ ಮೇಲೆ ಸೇನಾಬಲವನ್ನು ಬಳಸಬಾರದು ಅಥವಾ ಸೇನಾಬಲವನ್ನು ಬಳಸುವ ಬೆದರಿಕೆ ಹಾಕಬಾರದು, ಪರಸ್ಪರರನ್ನು ಸಹಿಷ್ಣುತೆಯಿಂದ ನಡೆಸಿಕೊಳ್ಳಬೇಕು ಮತ್ತು ಗುಂಡು ಅಥವಾ ಸಶಸ್ತ್ರ ಸಂಘರ್ಷವನ್ನು ತಡೆಯಬೇಕು ಎಂದು ಎರಡೂ ಬದಿಯೂ ಸಮ್ಮತಿಸುತ್ತದೆ.”

1975 ರಲ್ಲಿ ಗಡಿಯಲ್ಲಿ ನಾಲ್ವರು ಭಾರತೀಯ ಯೋಧರು ಹುತಾತ್ಮರಾದಾಗ ಶಿಷ್ಟಾಚಾರವನ್ನು ಪಾಲಿಸುವ ಮೂಲಕ ಎಲ್‌ಎಸಿಯಲ್ಲಿ ಶಾಂತಿಯನ್ನು ಎರಡೂ ದೇಶಗಳು ಕಾಪಾಡಿಕೊಂಡಿದ್ದವು. ಮೇ ಮೊದಲ ವಾರದಲ್ಲಿ ಚೀನಾ ಒಳನುಸುಳಿದಾಗ ಇದೆಲ್ಲವೂ ಹಠಾತ್ತನೇ ಬದಲಾಗಿದೆ.

China's move  makes  long-term impact on border issue
ಭಾರತ ಮತ್ತು ಚೀನಾ ಮಧ್ಯೆ ಈಗ ನಡೆದಿರುವುದು ಅತ್ಯಂತ ದೊಡ್ಡ ವಿಪತ್ತು

ಪೂರ್ವ ಲಡಾಖ್‌ ಭೌಗೋಳಿಕ ಪ್ರದೇಶ:

ಲಡಾಖ್‌ ಅನ್ನು ಎತ್ತರ ಭೂಪ್ರದೇಶದ ಮರುಭೂಮಿ ಎಂದು ಕರೆಯಲಾಗುತ್ತದೆ ಮತ್ತು ಪೂರ್ವ ಲಡಾಖ್‌ ಪ್ರದೇಶಗಳು ಟಿಬೆಟ್‌ ಪ್ರಸ್ಥಭೂಮಿಗೆ ಸಮೀಪದಲ್ಲಿವೆ. ಪಾಂಗಾಂಗ್ ತ್ಸೋ ಕೆರೆ ಮತ್ತು ಗಲ್ವನ್‌ ನದಿ ಕಣಿವೆಯು 14,000 ಅಡಿ ಎತ್ತರದಲ್ಲಿದೆ ಮತ್ತು ಹಾಟ್‌ ಸ್ಪ್ರಿಂಗ್ ಪ್ರದೇಶವು 15,500 ಅಡಿ ಎತ್ತರದಲ್ಲಿದೆ. ಈ ಮೂರು ಪ್ರದೇಶಗಳಲ್ಲಿ ಪ್ರಸ್ತುತ ಚೀನಾದ ಜೊತೆಗೆ ಸಂಘರ್ಷ ನಡೆಯುತ್ತಿದೆ.

ಪಾಂಗಾಂಗ್ ತ್ಸೋ ಮತ್ತು ಗಾಲ್ವಾನ್‌ ಪ್ರದೇಶದಲ್ಲಿ ಹೆಚ್ಚಿನ ಸಂಘರ್ಷ ಉಂಟಾಗಿದೆ. ಪಾಂಗಾಂಗ್ ತ್ಸೋ ಉತ್ತರ ಭಾಗದಲ್ಲಿ, ಚೀನಾ ಮತ್ತು ಭಾರತವೆರಡೂ ಎಲ್‌ಎಸಿ ಬಗ್ಗೆ ತನ್ನದೇ ದೃಷ್ಟಿಕೋನ ಹೊಂದಿದೆ ಮತ್ತು ಈ ಹಿಂದೆ ಎರಡೂ ಕಡೆಯ ಗಡಿ ಭದ್ರತಾ ಪಡೆಗಳು ತಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ಪಹರೆ ಕಾಯುತ್ತಿದ್ದರು. ಚೀನಾ ಪ್ರಕಾರ ಎಲ್‌ಎಸಿಯು ಫಿಂಗರ್ 4 ವರೆಗೆ ಇದೆ ಮತ್ತು ಭಾರತದ ದೃಷ್ಟಿಕೋನದ ಪ್ರಕಾರ ಫಿಂಗರ್ 8ರ ವರೆಗೆ ತನ್ನ ಗಡಿ ಇದೆ. ಸದ್ಯ, ಚೀನಾದವರು ತಮ್ಮದು ಎಂದು ಹೇಳಿಕೊಳ್ಳುತ್ತಿದ್ದ ಪ್ರದೇಶವನ್ನು ಭೌತಿಕವಾಗಿ ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಎಲ್‌ಎಸಿಯ ಬಗ್ಗೆ ನಮ್ಮ ದೃಷ್ಟಿಕೋನದವರೆಗೆ ಪಹರೆ ಕಾಯಲು ಅವಕಾಶ ನೀಡುತ್ತಿಲ್ಲ.

ಗಾಲ್ವಾನ್ ಕಣಿವೆಯಲ್ಲಿನ ಎಲ್‌ಎಸಿಯು ಆರು ಕಿಲೋಮೀಟರುಗಳನ್ನು ವಿಶ್ವದಲ್ಲೇ ಅತಿ ಎತ್ತರದ ಏರ್‌ಸ್ಟ್ರಿಪ್‌ ಅನ್ನು ಹೊಂದಿರುವ ದೌಲತ್‌ ಬೇಗ್ ಓಲ್ಡಿ (ಡಿಬಿಒ) ವರೆಗೆ ಸಾಗುವ ಪ್ರಮುಖ ರಸ್ತೆಯನ್ನು ಇದು ಒಳಗೊಂಡಿದೆ. ಇದೊಂದೇ ಅಲ್ಲಿ ಸರ್ವಋತು ರಸ್ತೆಯಾಗಿದ್ದು, ಡಿಬಿಒ ಸಮೀಪದಲ್ಲಿ ನಿಯೋಜಿತವಾಗಿರುವ ನಮ್ಮ ಯೋಧರಿಗೆ ಸಾಮಗ್ರಿಗಳನ್ನು ಒದಗಿಸಲು ಇದು ಅತ್ಯಂತ ಮಹತ್ವದ್ದಾಗಿದೆ. ಈ ರಸ್ತೆ ಡಾರ್ಬಕ್‌ನಿಂದ ಆರಂಭವಾಗುತ್ತದೆ ಮತ್ತು ಡಿಬಿಒವರೆಗೆ 255 ಕಿ.ಮೀ ಆಗುತ್ತದೆ. ರಸ್ತೆ ನಿರ್ಮಾಣವು 2000 ನೇ ಇಸ್ವಿಯಲ್ಲಿ ಆರಂಭವಾಗಿತ್ತು. ಆದರೆ ಶ್ಯೋಕ್ ನದಿಗೆ ಸೇತುವೆ ಇಲ್ಲದ್ದರಿಂದ ಸೇನೆಗೆ ಅಡ್ಡಿಯಾಗಿತ್ತು. 2019 ರಲ್ಲಿ ಶಾಶ್ವತ ಸೇತುವೆಯನ್ನು ನಿರ್ಮಿಸಲಾಯಿತು ಮತ್ತು ಇದನ್ನು ರಕ್ಷಣಾ ಸಚಿವರು ಉದ್ಘಾಟನೆಯನ್ನೂ ಮಾಡಿದರು. ಈ ರಸ್ತೆ ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು, ಲಡಾಖ್‌ನ ಉತ್ತರ ಪ್ರದೇಶಕ್ಕೆ ಇದರಿಂದಾಗಿ ಯೋಧರು ಮತ್ತು ಶಸ್ತ್ರಾಸ್ತ್ರಗಳನ್ನು ಅತ್ಯಂತ ವೇಗವಾಗಿ ಸಾಗಿಸಬಹುದಾಗಿದೆ.

ಗಾಲ್ವಾನ್ ವ್ಯಾಲಿ ಮೂಲಕ ಎಲ್‌ಎಸಿಗೆ ಚೀನಾದವರು ಪ್ರವೇಶಿಸಿದರೆ, ಈ ಸಂಕೀರ್ಣ ರಸ್ತೆಯ ಸಂಪರ್ಕವನ್ನು ಅವರು ತಪ್ಪಿಸಬಹುದು. ಹೀಗಾಗಿ ಚೀನಿಯರು ನಮ್ಮ ಪ್ರದೇಶಕ್ಕೆ ಒಳನುಸುಳುವುದನ್ನು ಅತ್ಯಂತ ತೀಕ್ಷ್ಣವಾಗಿ ಪ್ರತಿರೋಧಿಸಿದರು ಮತ್ತು ಇದೇ ಪ್ರಯತ್ನದಲ್ಲಿ 20 ಯೋಧರು ಜೂನ್ 15 ರಂದು ಹುತಾತ್ಮರಾಗಿದ್ದಾರೆ.

china's-move-makes-long-term-impact-on-border-issue

ಸನ್ನಿವೇಶ ಎಷ್ಟು ಗಂಭೀರವಾಗಿದೆ?

ಈ ಹಿಂದೆ ಹಲವು ಬಾರಿ ಒಳನುಸುಳುವಿಕೆ ನಡೆದಿದೆ. 2013 ರಲ್ಲಿ ಡೆಪ್ಸಾಂಗ್, 2014 ರಲ್ಲಿ ಚುಮಾರ್ ಮತ್ತು 2017 ರಲ್ಲಿ ಡೋಕ್ಲಾಮ್‌ನಂತಹ ಹಲವು ದೀರ್ಘಕಾಲದವರೆಗೆ ಈ ಸಂಘರ್ಷ ನಡೆದಿದ್ದೂ ಇದೆ. ಆದರೆ, ಇವೆಲ್ಲವೂ ಸ್ಥಳೀಯ ಘಟನೆಗಳಾಗಿದ್ದವು. ಇವೆಲ್ಲವನ್ನೂ ಎರಡೂ ಕಡೆಯವರು ಯಾವುದೇ ಹಿಂಸೆ ಇಲ್ಲದೇ ಶಾಂತಿಯುತವಾಗಿ ಪರಿಹರಿಸಲಾಯಿತು. ಪ್ರಸ್ತುತ ಚೀನಾದ ಕ್ರಮಗಳು ಅತ್ಯಂತ ವಿಭಿನ್ನವಾಗಿವೆ.

ಚೀನಾ ಸೇನೆಯು ಎಲ್‌ಎಸಿಯ ವಿವಿಧ ಭಾಗಗಳಲ್ಲಿ ಭಾರಿ ಪ್ರಮಾಣದಲ್ಲಿ ಸೇನೆ ನಿಯೋಜನೆ ಮಾಡಿದೆ ಮತ್ತು ಇದು ಚೀನಾ ಸರ್ಕಾರದ ಉನ್ನತ ಮಟ್ಟದಲ್ಲಿ ಖಂಡಿತವಾಗಿಯೂ ಸಮ್ಮತಿಯನ್ನು ಹೊಂದಿರುತ್ತದೆ. ಚೀನಾದ ಸೇನೆ ಜಮಾವಣೆ ಜೊತೆಗೆ ನಡೆದ ಹಿಂಸಾಚಾರವೂ ನಡೆದಿದೆ ಮತ್ತು ಎರಡೂ ಸೇನೆಗಳು ನಡೆಸುತ್ತಿದ್ದ ಎಲ್ಲ ಶಿಷ್ಟಾಚಾರವನ್ನೂ ಇದರಲ್ಲಿ ಉಲ್ಲಂಘಿಸಲಾಗಿದೆ.

ಎಲ್‌ಎಸಿಯಲ್ಲಿ ಭಾರತೀಯ ಯೋಧರಿಗೆ ಮಾರ್ಗದರ್ಶನ ಮಾಡುತ್ತಿದ್ದ ನಿಯಮಾವಳಿಗಳನ್ನು ಮರುಪರಿಶೀಲನೆ ಮಾಡುವ ಸನ್ನಿವೇಶವು ಚೀನಾದ ಈ ಕ್ರಮದಿಂದ ಎದುರಾಗಿದೆ. ಮುಂದಿನ ದಿನಗಳಲ್ಲಿ ಸನ್ನಿವೇಶ ಇನ್ನಷ್ಟು ವ್ಯತಿರಿಕ್ತವಾಗುವ ಸಾಧ್ಯತೆಯಿದೆ. ಇದು ಗಡಿ ನಿರ್ವಹಣೆಯ ಮೇಲೆ ದೀರ್ಘಕಾಲೀನ ಪರಿಣಾಮವನ್ನು ಉಂಟು ಮಾಡಲಿದೆ ಮತ್ತು ಎಲ್‌ಎಸಿಯಲ್ಲಿ ಸನ್ನಿವೇಶ ಉದ್ವಿಗ್ನಗೊಳ್ಳಲಿದೆ.

ಅಷ್ಟೇ ಅಲ್ಲ, ಭಾರತ ಮತ್ತು ಚೀನಾ ಸಂಬಂಧಗಳ ಮೇಲೆ ಕೂಡ ಮುಂದಿನ ದಿನಗಳಲ್ಲಿ ಪರಿಣಾಮ ಬೀರಲಿದೆ. ಇದರ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ. ಇಡೀ ದೇಶದಲ್ಲಿ ಚೀನಾ ವಿರೋಧಿ ಭಾವನೆ ಉಂಟಾಗಿದೆ ಮತ್ತು ಸನ್ನಿವೇಶ ಹೇಗೇ ಸುಧಾರಿಸಿದರೂ ಚೀನಾದ ಈ ಸೇನಾ ಪ್ರಭಾವ ಪ್ರದರ್ಶನವನ್ನು ಜನರು ಮರೆಯುವುದಿಲ್ಲ.

-ಲೆ. ಜ. ಡಿ ಎಸ್ ಹೂಡಾ, ನಾರ್ದರ್ನ್‌ ಕಮಾಂಡ್‌ನ ನಿವೃತ್ತ ಮುಖ್ಯಸ್ಥ (2016 ರಲ್ಲಿ ಸರ್ಜಿಕಲ್ ದಾಳಿಯ ನೇತೃತ್ವ ವಹಿಸಿದವರು)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.