ETV Bharat / bharat

ಇದೇ ಮೊದಲು! ಹೈಕೋರ್ಟ್​ ಜಸ್ಟೀಸ್​ ವಿರುದ್ಧ ತನಿಖೆಗೆ ಸಿಜೆಐ ಸಮ್ಮತಿ

author img

By

Published : Jul 31, 2019, 1:24 PM IST

2017ರಲ್ಲಿ ಮೆಡಿಕಲ್ ಕಾಲೇಜಿನ ವಿಚಾರವಾಗಿ ಸುಪ್ರೀಂಕೋರ್ಟ್​ ಆದೇಶ ಉಲ್ಲಂಘಿಸಿದ ಆರೋಪದ ಮೇಲೆ ಅಲಹಾಬಾದ್​ ಹೈಕೋರ್ಟ್​​ ಜಸ್ಟೀಸ್​ ಜೆ.ಎನ್​. ಶುಕ್ಲಾ ಅವರ ಮೇಲೆ ಕೇಸು ದಾಖಲಿಸುವ​ ಸಿಬಿಐ ಕೋರಿಕೆಗೆ ಸುಪ್ರೀಂಕೋರ್ಟ್​ ಸಮ್ಮತಿ ನೀಡಿದೆ.

Chief Justice of India Ranjan Gogoi

ನವದೆಹಲಿ: ಇದೇ ಮೊದಲು ಎಂಬಂತೆ, ಸುಪ್ರೀಂಕೋರ್ಟ್​ನ ಸಿಜೆಐ ರಂಜನ್ ಗೊಗಯಿ ಅವರು ಅಲಹಾಬಾದ್​ ಹೈಕೋರ್ಟ್​​ ಜಸ್ಟೀಸ್​ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಲು ಸಿಬಿಐಗೆ ಅನುಮತಿ ನೀಡಿದ್ದಾರೆ.

2017ರಲ್ಲಿ ಮೆಡಿಕಲ್ ಕಾಲೇಜಿನ ವಿಚಾರವಾಗಿ ಸುಪ್ರೀಂಕೋರ್ಟ್​ ಆದೇಶ ಉಲ್ಲಂಘಿಸಿದ ಆರೋಪದ ಮೇಲೆ ಜಸ್ಟೀಸ್​ ಜೆ.ಎನ್​. ಶುಕ್ಲಾ ಅವರ ಮೇಲೆ ಕೇಸು ದಾಖಲಿಸುವ​ ಸಿಬಿಐ ಕೋರಿಕೆಗೆ ಸುಪ್ರೀಂಕೋರ್ಟ್​ ಸಮ್ಮತಿ ನೀಡಿದೆ.

ಪದವಿಯಲ್ಲಿರುವಾಗಲೇ ಜಸ್ಟೀಸ್​ ಒಬ್ಬರ ಮೇಲೆ ಸಿಬಿಐ ತನಿಖೆ ನಡೆಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಇಲ್ಲದೇ ಜಸ್ಟೀಸ್​ಗಳ ವಿರುದ್ಧ ಯಾವುದೇ ತನಿಖೆ ನಡೆಸುವಂತಿಲ್ಲ.

ಈ ಹಿಂದಿನ ಸಿಜೆಐ ದೀಪಕ್ ಮಿಶ್ರಾ ಅವರು, ಜಸ್ಟೀಸ್​ ಶುಕ್ಲಾ ಅವರಿಗೆ ರಾಜೀನಾಮೆ ನೀಡುವಂತೆ ಇಲ್ಲವೇ, ಸ್ವಯಂ ನಿವೃತ್ತಿ ಪಡೆಯುವಂತೆ ಸೂಚಿಸಿದ್ದರು. ಆದರೆ, ಇದಕ್ಕೆ ಶುಕ್ಲಾ ಒಪ್ಪದ ಕಾರಣ, ಅವರ ಅಧಿಕಾರವನ್ನು ಹಿಂಪಡೆಯಲಾಗಿತ್ತು.

ನ್ಯಾ. ಶುಕ್ಲಾ ಅವರ ವಿರುದ್ಧ ಮೆಡಿಕಲ್ ವಿದ್ಯಾರ್ಥಿಗಳ ದಾಖಲಾತಿ ಗಡುವು ವಿಸ್ತರಿಸಿ, ತಮ್ಮ ಆಪ್ತರಿಗೆ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ದೊರೆಯುವಂತೆ ಮಾಡಿದ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ತನಿಖೆ ನಡೆಸುವಂತೆ ಸಿಜೆಐ ಮಿಶ್ರಾ ಅವರು ನ್ಯಾಯಾಧೀಶರ ತಂಡವನ್ನು ರಚಿಸಿದ್ದರು. ಲಖನೌ ಮೂಲದ ಜಿಸಿಆರ್​ಜಿ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ಬ್ಯಾನ್ ಮಾಡಿ ಸುಪ್ರೀಂಕೋರ್ಟ್​ ಆದೇಶ ನೀಡಿದ್ದರೂ, ನ್ಯಾ. ಶುಕ್ಲಾ ಅವರು ಇದನ್ನು ಉಲ್ಲಂಘಿಸಿದ್ದು ತನಿಖೆ ವೇಳೆ ಸಾಬೀತಾಗಿತ್ತು.

Intro:Body:

Chief Justice of India Ranjan Gogoi

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.