ETV Bharat / bharat

ಚುನಾವಣೆ ವೇಳೆ ಹಣ ಹಂಚಿಕೆ ಪ್ರಕರಣ: 10 ವರ್ಷದ ಹಿಂದಿನ ಘಟನೆ ಬಗ್ಗೆ ನೆನಪಿಲ್ಲ ಎಂದ ಚಿದು - Chidambaram refutes allegations of cashdistribution

ಶಿವಗಂಗ ಲೋಕಸಭಾ ಕ್ಷೇತ್ರದಿಂದ ಚುನಾವಣೆ ವೇಳೆ ಹಣ ಹಂಚಿದ ಪ್ರಕರಣದ ವಿಚಾರಣೆಯನ್ನು ಕೋರ್ಟ್​ ಮಾರ್ಚ್​ 30ಕ್ಕೆ ಮುಂದೂಡಿದೆ.

Chidambaram, ಪಿ.ಚಿದಂಬರಂ
ಪಿ.ಚಿದಂಬರಂ
author img

By

Published : Mar 10, 2020, 8:15 AM IST

ಚೆನ್ನೈ (ತಮಿಳುನಾಡು) : ಶಿವಗಂಗ ಲೋಕಸಭಾ ಕ್ಷೇತ್ರದಿಂದ ಚುನಾವಣೆ ವೇಳೆ ಹಣ ಹಂಚಿದ ಪ್ರಕರಣದ ವಿಚಾರಣೆಯನ್ನು ಕೋರ್ಟ್​ ಮಾರ್ಚ್​ 30ಕ್ಕೆ ಮುಂದೂಡಿದೆ.

2009 ರಲ್ಲಿ ಶಿವಗಂಗ ಲೋಕಸಭಾ ಕ್ಷೇತ್ರದಿಂದ ಚುನಾವಣೆ ವೇಳೆ ಹಣ ಹಂಚಿದ ಪ್ರಕರಣವೊಂದರ ಕುರಿತ ಆರೋಪವನ್ನು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ನಿರಾಕರಿಸಿದ್ದಾರೆ. ಇದು ಕೇವಲ ಊಹಾಪೋಹ. ಹಣ ಹಂಚಿಕೆಯಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಅವರು ಹೇಳಿದ್ದಾರೆ.

2009ರಲ್ಲಿ ಚಿದಂಬರಂ ಶಿವಗಂಗ ಲೋಕಸಭಾ ಕ್ಷೇತ್ರದಿಂದ ಎಐಎಡಿಎಂಕೆಯಿಂದ ಸ್ಪರ್ಧಿಸಿದ್ದ ರಾಜ ಕಣ್ಣಪ್ಪನ್ ಅವರನ್ನು 3,354 ಮತಗಳ ಅಂತರದಿಂದ ಸೋಲಿಸಿ ಜಯಗಳಿಸಿದ್ದರು. ಕೇಂದ್ರ ಗೃಹ ಸಚಿವರಾಗಿದ್ದ ಪಿ.ಚಿದಂಬರಂ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ರಾಜ ಕಣ್ಣಪ್ಪನ್​ ಪರ ವಕೀಲರು ಆರೋಪಿಸಿದ್ದರು.

ಎರಡು ಗಂಟೆಗಳ ಕಾಲ ನಡೆದ ವಿಚಾರಣೆ ವೇಳೆ ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣನ್ ಅವರಿಗೆ ವಕೀಲರಾದ ಕೆ ರಾಜೇಂದ್ರ ಕುಮಾರ್ ಮತ್ತು ಜಿ ಸರವಣ ಕುಮಾರ್ ಅವರು 2007 ರಲ್ಲಿ ಮಾಜಿ ಸಚಿವರು ಬರೆದ 'ಎ ವ್ಯೂ ಫ್ರಮ್ ದಿ ಔಟ್‌ಸೈಡ್' ಪುಸ್ತಕದ ಪ್ರತಿಯನ್ನು ಹಸ್ತಾಂತರಿಸಿ, ಪುಸ್ತಕದಲ್ಲಿನ ಕೆಲವು ಭಾಗಗಳನ್ನು ಓದಲು ಕೇಳಿಕೊಂಡರು.

ಪಿ.ಚಿದಂಬರಂ ಹಾಗೂ ಅವರ ಪುತ್ರ ಹಣ ಹಂಚಿಕೆ ಮಾಡಿರುವ ವಿಚಾರವಾಗಿ ಸುದೀರ್ಘ ವಾದ-ವಿವಾದ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪಿ.ಚಿದಂಬರಂ ಆರೋಪಗಳೆಲ್ಲ ಕೇವಲ ಕಾಲ್ಪನಿಕವಾಗಿವೆ. ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದರು.

ಚುನಾವಣಾ ಫಲಿತಾಂಶಗಳ ಘೋಷಣೆಯಲ್ಲಾದ ವಿಳಂಬದ ಕುರಿತು ಮಾಜಿ ಸಚಿವ ಪಿ.ಚಿದಂಬರಂ, ಚುನಾವಣಾ ಫಲಿತಾಂಶಗಳು ಹೊರಬಂದ ಸಮಯದ ಬಗ್ಗೆ ನನಗೆ ತಿಳಿದಿಲ್ಲ. ಅನೇಕ ಕಡೆಗಳಲ್ಲಿ ಆ ಸಮಯದಲ್ಲಿಯೇ ಚುನಾವಣಾ ಫಲಿತಾಂಶಗಳನ್ನು ಘೋಷಿಸಲಾಯಿತು. ಘಟನೆ ನಡೆದು 10 ವರ್ಷಗಳು ಕಳೆದಿವೆ. ಈಗ ನನಗೆ ಅದರ ಬಗ್ಗೆ ಅಷ್ಟೊಂದು ನೆನಪಿಲ್ಲ ಎಂದು ಹೇಳಿದರು.

ವಾದ-ವಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯವು ಮಾರ್ಚ್ 30 ಕ್ಕೆ ವಿಚಾರಣೆಯನ್ನು ಮಂದೂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.