ಅಣ್ಣಾ ನಗರ/ಚೆನ್ನೈ: ಕೊರೊನಾ ಲಸಿಕೆಯಾದ ಕೋವಿಶೀಲ್ಡ್ ನಿಂದ ಸೈಡ್ ಎಫೆಕ್ಟ್ ಆಗಿದೆ ಎಂದು 40 ವರ್ಷದ ವ್ಯಕ್ತಿ ಆರೋಪಿಸಿದ್ದಾರೆ. ಹಾಗೂ 5 ಕೋಟಿ ರೂ.ಗಳ ಪರಿಹಾರ ಕೋರಿ, ವೈದ್ಯಕೀಯ ಸಂಶೋಧನಾ ಮಂಡಳಿಗೆ ನೋಟಿಸ್ ಕಳುಹಿಸಿದ್ದಾರೆ.
ಕೋವಿಶೀಲ್ಡ್ ಲಸಿಕೆ ನೀಡಿದ ನಂತರ ನಮ್ಮ ಕ್ಲೈಂಟ್ ತೀವ್ರ ನರಕೋಶದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ನಾವು ಸೀರಮ್ ಸಂಸ್ಥೆಗೆ, ಐಸಿಎಂಆರ್ (Indian Council for Medical Research) ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ ಆಕ್ಸ್‌ಫರ್ಡ್ ಯುನಿವರ್ಸಿಟಿಯ ಮುಖ್ಯ ಸಂಶೋಧಕರಿಗೆ ಕಾನೂನು ನೋಟಿಸ್ ಕಳುಹಿಸಿದ್ದೇವೆ ಎಂದು ವಕೀಲರಾದ ಎನ್.ಜಿ.ಆರ್. ಪ್ರಸಾದ್ ಮಾಹಿತಿ ನೀಡಿದ್ದಾರೆ. ನವೆಂಬರ್ 21 ರಂದೇ ನೋಟಿಸ್ ನೀಡಲಾಗಿದೆ ಮತ್ತು ಇದುವರೆಗೂ ನಮಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ತಿಳಿಸಿದ್ರು.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಕೋವಿಶೀಲ್ಡ್ ಅನ್ನು ಪರೀಕ್ಷಿಸಲು ಶ್ರೀ ರಾಮಚಂದ್ರ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮೂರನೇ ಹಂತದ ಮಾನವ ಪ್ರಯೋಗಕ್ಕಾಗಿ ಸ್ವಯಂಸೇವಕರ ನೋಂದಣಿಗೆ ಕರೆ ನೀಡಿರುವ ಬಗ್ಗೆ ತಿಳಿದಾಗ 40 ವರ್ಷದ ವ್ಯಕ್ತಿ ತಾನೂ ಪ್ರಯೋಗಕ್ಕೆ ಒಳಗಾಗಿದ್ದಾರೆ.
ಶ್ರೀ ರಾಮಚಂದ್ರ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ನೋಟಿಸ್ನಲ್ಲಿ ನಮೂದಿಸಿರುವ ಪ್ರಕಾರ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಕೋವಿಡ್ -19 ವಿರುದ್ಧ ಲಸಿಕೆ ಅಭಿವೃದ್ಧಿಪಡಿಸಿದೆ. ಈ ಲಸಿಕೆಯನ್ನು ಈ ಹಿಂದೆ ಯುಕೆನಲ್ಲಿ 18 ರಿಂದ 55 ವರ್ಷ ವಯಸ್ಸಿನ ಸುಮಾರು 500 ಆರೋಗ್ಯವಂತ ವಯಸ್ಕರ ಮೇಲೆ ಪ್ರಯೋಗಿಸಲಾಗಿತ್ತು. ಅದೇ ರೀತಿ ಯುಕೆ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪ್ರಸ್ತುತ ಸಾವಿರಾರು ಆರೋಗ್ಯವಂತ ವಯಸ್ಕರಲ್ಲಿ ಈ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಎಸ್‌ಐಐ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ (ಯುಕೆಯಲ್ಲಿರುವ ಔಷಧೀಯ ಕಂಪನಿ) ಇದನ್ನು ತಯಾರಿಸಿದ್ದು, ಕೋವಿಡ್‌ಶೀಲ್ಡ್ ಎಂದು ಕರೆಯಲಾಗುತ್ತದೆ. ಅಲ್ಲದೇ ನೋಟಿಸ್ ಪ್ರಕಾರ, ಶ್ರೀ ರಾಮಚಂದ್ರ ಸಂಸ್ಥೆ ಮತ್ತು ವಿಚಾರಣಾ ತನಿಖಾಧಿಕಾರಿ ಸಹ ಲಸಿಕೆ ಈಗಾಗಲೇ ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ ಮತ್ತು ಭಾರತೀಯ ವಯಸ್ಕರಲ್ಲಿ ಕೋವಿಡ್‌ಶೀಲ್ಡ್ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ತಮ್ಮ ಸಂಸ್ಥೆಯಲ್ಲಿ ಲಸಿಕೆ ಪ್ರಯೋಗಕ್ಕೆ ಒಳಪಟ್ಟ ಸ್ವಯಂಸೇವಕರಿಗೆ ಭರವಸೆ ನೀಡಿದ್ದರು. ಈ ಹಿನ್ನೆಲೆ ಸೆಪ್ಟೆಂಬರ್ 29 ರಂದು ಸ್ವಯಂಸೇವಕರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದರು. ಅಕ್ಟೋಬರ್ 1 ರಂದು ಅವರಿಗೆ ಲಸಿಕೆ ನೀಡಲಾಗಿತ್ತು.
ವ್ಯಾಕ್ಸಿನೇಷನ್ ಮಾಡಿದ 10 ದಿನಗಳವರೆಗೆ, ಯಾವುದೇ ಪ್ರತಿಕೂಲ ಪ್ರತಿಕ್ರಿಯೆ ಕಂಡುಬಂದಿಲ್ಲ. ಆದರೆ ಅಕ್ಟೋಬರ್ 11 ರಂದು ಈ 40 ವರ್ಷದ ವ್ಯಕ್ತಿಗೆ ತೀವ್ರ ತಲೆನೋವು ಕಾಣಿಸಿಕೊಂಡು ಬೆಳಗ್ಗೆ 5.30 ಕ್ಕೆ ಎಚ್ಚರಗೊಂಡು ನಿದ್ರೆಗೆ ಜಾರಿದ್ದಾರೆ ಮತ್ತು ಬೆಳಗ್ಗೆ 9 ಗಂಟೆಗೆ ಆತನ ಹೆಂಡತಿ ಅವನನ್ನು ಎಚ್ಚರಗೊಳಿಸಲು ಪ್ರಯತ್ನಿಸಿದಾಗ ಎದ್ದೇಳಲಿಲ್ಲ. ಮಧ್ಯಾಹ್ನ, ಅವರು ಎಚ್ಚರಗೊಂಡು ವಾಂತಿ ಮಾಡಿ ಮತ್ತೆ ನಿದ್ರೆಗೆ ಜಾರಿದರು. ಅವರಿಗೆ ತೀವ್ರ ತಲೆನೋವು ಇದೆ ಎಂದು ಹೇಳಿದರು. ಹಾಸಿಗೆಯಿಂದ ಎದ್ದೇಳಲು ಆಗುತ್ತಿರಲ್ಲ ಎಂದು ಸಂತ್ರಸ್ತನ ಹೆಂಡತಿ ಹೇಳಿಕೆಯನ್ನು ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗ್ತಿದೆ. ಕೋವಿಶೀಲ್ಡ್ ಲಸಿಕೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಈ ರೀತಿಯ ಬದಲಾವಣೆಯಾಗಿದೆ ಅಂದು ಅವರು ಆರೋಪಿಸಿದ್ದಾರೆ. ಅವರು "ತೀವ್ರವಾದ ಎನ್ಸೆಫಲೋಪತಿ" ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ.
ಹೀಗಾಗಿ ಲಸಿಕೆ ಪಡೆದ ಸ್ವಯಂಸೇವಕನು ತಾನು ಅನುಭವಿಸುತ್ತಿರುವ ಎಲ್ಲಾ ಆರೋಗ್ಯ ಸಮಸ್ಯೆಗೆ ಕೋವಿಶೀಲ್ಡ್ ಲಸಿಕೆಯೇ ಕಾರಣ ಎಂದು ಆರೋಪಿಸಿ 5 ಕೋಟಿ ರೂ.ಗಳ ಪರಿಹಾರಧನಕ್ಕೆ ಆಗ್ರಹಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.